ಸೂಕ್ತ ಮಾಹಿತಿ ಸಿಗದೆ ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಮಹಿಳೆ ಕಣ್ಣೀರು!

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ ಸೂಕ್ತ ಮಾಹಿತಿ ಇಲ್ಲದೆ, ಸರಿಯಾದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಜೆಸ್ಟಿಕ್‌ನ KSRTC ಬಸ್ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಗೆ ತೆರಳಬೇಕಿದ್ದ ಮಹಿಳೆ ಕಣ್ಣೀರು ಹಾಕಿದ್ದಾರೆ. ತಂದೆ ನಿಧನರಾಗಿರುವ ಹಿನ್ನೆಲೆಯಲ್ಲಿ ಸಿರುಗುಪ್ಪಗೆ ತೆರಳಬೇಕಿತ್ತು. ಆದರೆ ಬಳ್ಳಾರಿಗೆ ಬಸ್ ಇಲ್ಲವೆಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ರಿಸರ್ವೇಶನ್ ಮಾಡಿಕೊಳ್ಳಲು ಹೇಳುತ್ತಿದ್ದಾರೆ. ಹೀಗಾಗಿ ತುಂಬ ಗೊಂದಲ ಉಂಟಾಗಿದೆ. ನಮ್ಮೂರಿಗೆ ಹೋಗಲು ಆಗುತ್ತೋ ಇಲ್ಲವೋ ಎಂದು ಮಹಿಳೆ ಕಣ್ಣೀರಿಟ್ಟಿರುವ […]

ಸೂಕ್ತ ಮಾಹಿತಿ ಸಿಗದೆ ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಮಹಿಳೆ ಕಣ್ಣೀರು!
ಸಾಧು ಶ್ರೀನಾಥ್​

Updated on: May 19, 2020 | 1:59 PM

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ ಸೂಕ್ತ ಮಾಹಿತಿ ಇಲ್ಲದೆ, ಸರಿಯಾದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಜೆಸ್ಟಿಕ್‌ನ KSRTC ಬಸ್ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಗೆ ತೆರಳಬೇಕಿದ್ದ ಮಹಿಳೆ ಕಣ್ಣೀರು ಹಾಕಿದ್ದಾರೆ.

ತಂದೆ ನಿಧನರಾಗಿರುವ ಹಿನ್ನೆಲೆಯಲ್ಲಿ ಸಿರುಗುಪ್ಪಗೆ ತೆರಳಬೇಕಿತ್ತು. ಆದರೆ ಬಳ್ಳಾರಿಗೆ ಬಸ್ ಇಲ್ಲವೆಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ರಿಸರ್ವೇಶನ್ ಮಾಡಿಕೊಳ್ಳಲು ಹೇಳುತ್ತಿದ್ದಾರೆ. ಹೀಗಾಗಿ ತುಂಬ ಗೊಂದಲ ಉಂಟಾಗಿದೆ. ನಮ್ಮೂರಿಗೆ ಹೋಗಲು ಆಗುತ್ತೋ ಇಲ್ಲವೋ ಎಂದು ಮಹಿಳೆ ಕಣ್ಣೀರಿಟ್ಟಿರುವ ಘಟನೆ ಮೆಜೆಸ್ಟಿಕ್‌ನಲ್ಲಿ ನಡೆದಿದೆ.

Published On - 9:59 am, Tue, 19 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us