ಪಾರ್ಕ್‌ಗಳ ಮುಂದೆ ಕ್ಯೂ, ಥರ್ಮಲ್ ಸ್ಕ್ರೀನಿಂಗ್ ಬಳಿಕ ಪ್ರವೇಶಕ್ಕೆ ಅನುಮತಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಎಲ್ಲಾ ಪಾರ್ಕ್‌ಗಳು ಓಪನ್ ಆಗಿವೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮಾತ್ರ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಬಳಿಕ ಸಂಜೆ 5ರಿಂದ 7ರವರೆಗೆ ಪಾರ್ಕ್ ಓಪನ್ ಆಗಿರುತ್ತದೆ. ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಪಾರ್ಕ್‌ಗಳ ಒಳಗೆ ಹೋಗಲು ಅವಕಾಶ ನೀಡಲಾಗುತ್ತೆ. ಲಾಲ್ ಬಾಗ್ ಅಂದ ಸವಿಯೋಕೆ ಗೇಟ್ ಮುಂದೆ ಕಾತುಕುಳಿತಿರೋ ವಾಯುವಿಹಾರಿಗಳಿಗೆ ಅಲ್ಲಿನ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡಿ ಒಳಕ್ಕೆ ಹೋಗಲು ಬಿಡುತ್ತಿದ್ದಾರೆ. ವಾಕಿಂಗ್, ವ್ಯಾಯಾಮ ಮಾಡಲು ಪಾರ್ಕ್ಗಳಿಗೆ […]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಎಲ್ಲಾ ಪಾರ್ಕ್‌ಗಳು ಓಪನ್ ಆಗಿವೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮಾತ್ರ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಬಳಿಕ ಸಂಜೆ 5ರಿಂದ 7ರವರೆಗೆ ಪಾರ್ಕ್ ಓಪನ್ ಆಗಿರುತ್ತದೆ.
ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಪಾರ್ಕ್‌ಗಳ ಒಳಗೆ ಹೋಗಲು ಅವಕಾಶ ನೀಡಲಾಗುತ್ತೆ. ಲಾಲ್ ಬಾಗ್ ಅಂದ ಸವಿಯೋಕೆ ಗೇಟ್ ಮುಂದೆ ಕಾತುಕುಳಿತಿರೋ ವಾಯುವಿಹಾರಿಗಳಿಗೆ ಅಲ್ಲಿನ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡಿ ಒಳಕ್ಕೆ ಹೋಗಲು ಬಿಡುತ್ತಿದ್ದಾರೆ. ವಾಕಿಂಗ್, ವ್ಯಾಯಾಮ ಮಾಡಲು ಪಾರ್ಕ್ಗಳಿಗೆ ಹೋಗುತ್ತಿದ್ದವರು ಸಾಲುಕಟ್ಟಿ ಪಾರ್ಕ್‌ಗಳ ಮುಂದೆ ನಿಂತಿರುವ ದೃಶ್ಯ ಬಹುತೇಕ ಪಾರ್ಕ್‌ಗಳ ಬಳಿ ಕಂಡು ಬಂದಿದೆ.
Published On - 8:57 am, Tue, 19 May 20