ಊಟಿ-ಸಿಮ್ಲಾ-ಮನಾಲಿಯಂತೆ ಕಚಗುಳಿ ಇಡುತ್ತಿದೆಯಂತೆ ಬೆಂಗಳೂರು!
ರಾಜಧಾನಿ ಬೆಂಗಳೂರಿನ ಜನತೆ ಬೆಳಗಿನ ಆಹ್ಲಾದಕರ ವಾತಾವರಣ ನೋಡಿ ಆನಂದ ತುಂದಿಲಿತರಾಗಿದ್ದಾರೆ. ಕಳೆದುಹೋದ pensioners’ paradise ಗೆ ಮೂರೇ ಗೇಣು ಎಂದು ವಾತಾವರಣಕ್ಕೆ ಮಾರುಹೋಗಿದ್ದಾರೆ. ವಿಷಯ ಏನು ಅಂದ್ರೆ ಅತ್ತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು, ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಶೀತಗಾಳಿ ನಗರದಲ್ಲಿ ಮನೆ ಮಾಡಿದೆ. ಇದರಿಂದ ಜನ ಮನೆಗಳಲ್ಲಿ ಬೆಚ್ಚಗಿದ್ದಾರೆ. ಇನ್ನು, ವರ್ಕ್ ಫ್ರಮ್ ಹೋಮ್ ಡ್ಯೂಟಿಯಿಂದ ಹೊರಬಂದು ಅನಿವಾರ್ಯವಾಗಿ ಕಚೇರಿಗಳತ್ತ ಹೊರಟ ಉದ್ಯೋಗಿಗಳು ಒಂದಷ್ಟು ಮಳೆ ಅವಾಂತರದಿಂದ ಬೇಸರದಲ್ಲಿದ್ದಾರೆ. ಇನ್ನೂ ಮೂರು […]

ರಾಜಧಾನಿ ಬೆಂಗಳೂರಿನ ಜನತೆ ಬೆಳಗಿನ ಆಹ್ಲಾದಕರ ವಾತಾವರಣ ನೋಡಿ ಆನಂದ ತುಂದಿಲಿತರಾಗಿದ್ದಾರೆ. ಕಳೆದುಹೋದ pensioners’ paradise ಗೆ ಮೂರೇ ಗೇಣು ಎಂದು ವಾತಾವರಣಕ್ಕೆ ಮಾರುಹೋಗಿದ್ದಾರೆ.
ವಿಷಯ ಏನು ಅಂದ್ರೆ ಅತ್ತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು, ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಶೀತಗಾಳಿ ನಗರದಲ್ಲಿ ಮನೆ ಮಾಡಿದೆ. ಇದರಿಂದ ಜನ ಮನೆಗಳಲ್ಲಿ ಬೆಚ್ಚಗಿದ್ದಾರೆ. ಇನ್ನು, ವರ್ಕ್ ಫ್ರಮ್ ಹೋಮ್ ಡ್ಯೂಟಿಯಿಂದ ಹೊರಬಂದು ಅನಿವಾರ್ಯವಾಗಿ ಕಚೇರಿಗಳತ್ತ ಹೊರಟ ಉದ್ಯೋಗಿಗಳು ಒಂದಷ್ಟು ಮಳೆ ಅವಾಂತರದಿಂದ ಬೇಸರದಲ್ಲಿದ್ದಾರೆ.
ಇನ್ನೂ ಮೂರು ದಿನಗಳ ಕಾಲ ಇದೇ ಅಲಬೇಲಾ ಮೌಸಂ ಬೆಂಗಳೂರಿಗರಿಗೆ ಮುದನೀಡಲಿದೆ ಎನ್ನುತ್ತಿದೆ ಹವಾಮಾನ ಇಲಾಖೆ ಮೂಲಗಳು. ಇಡೀ ಬೆಂಗಳೂರಿಗೆ ತುಸು ಹೆಚ್ಚೇ ಎ.ಸಿ. ಹಾಕಿದಂತಿದೆ. ಅಲ್ಲಲ್ಲಿ ಮಂಜು ಆವರಿಸಿದೆ. ಇದರಿಂದ ಈ ಬಾರಿ ಮಂಜಿನ ಕಾಲ ಬೇಗನೇ ಬಂತಾ ಅಂತಾ ಜನ ಉದ್ಘರಿಸುತ್ತಿದ್ದಾರೆ.
ಕೊರೊನಾ ಕಾಟದಿಂದ ಮುದುಡಿದ ಮನಸುಗಳಿಗೆ ಮುದ ನೀಡುತ್ತಿದೆ ಈ ವಾತಾವರಣ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಲಬೇಲಾ ಮೌಸಂ ಬಗ್ಗೆ ತಮ್ಮ ಅನುಭವಗಳನ್ನು ದಾಖಲಿಸುತ್ತಿದ್ದಾರೆ. 
ಈ ಪರಿಸ್ಥಿತಿಯಲ್ಲಿ ನಾವು ಅಲ್ಲಿಗೆ ಹೋಗೋಕ್ಕೆ ಆಗೋಲ್ಲ ಅಂತಾ ದೇವರು ಬೆಂಗಳೂರನ್ನೇ ಊಟಿ-ಸಿಮ್ಲಾ-ಮನಾಲಿ ಮಾಡಿಬಿಟ್ಟಿದ್ದಾನೆ ಎಂದು ಹಸನ್ಮುಖರಾಗಿದ್ದಾರೆ.
ಏನೇ ಆಗಲಿ ಮೊನ್ನೆ ಪ್ರಧಾನಿ ಮೋದಿ ಹೇಳಿದಂತೆ ಕೊರೊನಾ ಹೊರಟುಹೋಗಿದೆ ಅಂತಾ ಮೈಮರೆಯುವುದು ಬೇಡ. ಮಹಾಮಾರಿ ಬಗ್ಗೆ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಕ್ಷೇಮ. ಏಕೆಂದ್ರೆ ಈ ವಾತಾವರಣ ಕೊರೊನಾಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಎಚ್ಚರಿಕೆಯ ಮಧ್ಯೆ ಎಂಜಾಯ್ ಮಾಡಿ..





