ದೊಡ್ಡಗದ್ದವಳ್ಳಿ ಕಾಳಿ ವಿಗ್ರಹ ಹಾನಿ ಪ್ರಕರಣ: ವಿವರಣೆ ಕೇಳಿದ ಪ್ರಧಾನಿ ಕಚೇರಿ
ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ […]

ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
ಕಾಳಿದೇವಿ ವಿಗ್ರಹ ನೆಲಕ್ಕುರುಳಿ ಮೂರು ಭಾಗವಾಯ್ತು! ಒಂದಲ್ಲ.. ಎರಡಲ್ಲ.. ಬರೋಬ್ಬರಿ 906 ವರ್ಷಗಳ ಇತಿಹಾಸವಿರೋ ಪುರಾತನ ದೇಗುಲವಿದು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣವಾದ ದಕ್ಷಿಣಭಾರತದ ಮೊದಲ ಲಕ್ಷ್ಮೀ ದೇಗುಲ. ಬೆಳಗ್ಗೆ ಪೂಜೆಗೆಂದು ಅರ್ಚಕರು ಬಂದಾಗ ಕಾಳಿದೇವಿ ವಿಗ್ರಹವೇ ನೆಲಕ್ಕುರುಳಿ ಮೂರು ಭಾಗಗಳಾಗಿ ಒಡೆದು ಹೋಗಿತ್ತು. ತಾಯಿ ಮೂರ್ತಿ ಭಿನ್ನವಾಗಿರೋದ್ರ ಹಿಂದೆ ನಿಧಿಗಳ್ಳರು ಅಥವಾ ವಿಗ್ರಹವನ್ನೇ ಕದಿಯಲು ಬಂದವರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಸ್ಥಳೀಯರು ಈ ವಿಗ್ರಹ ಮೊದ್ಲೇ ಅಲುಗಾಡ್ತಿತ್ತು ಅಂತಿದ್ದಾರೆ. ಹೀಗಾಗಿ ಎಲ್ಲಾ ಌಂಗಲ್ನಲ್ಲೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇನ್ನು ಈ ಕಾಳಿ ದೇಗುಲಕ್ಕೆ ಸಾಕಷ್ಟು ಇತಿಹಾಸವಿದ್ದು, ಹಲವು ವಿಶೇಷತೆಗಳಿವೆ. ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿದ್ದು, ಕಾಳಿ ವಿಗ್ರಹದ ಮುಂದೆ ಕಾಲಭೈರವನ ವಿಗ್ರಹವೂ ಇದೆ. ಹಾಗೇ ಲಕ್ಷೀ ವಿಗ್ರಹದ ಮುಂದೆ ಶಿವನ ಲಿಂಗವಿದೆ. ಈರೀತಿ ಚತುಷ್ಕುಟ ದೇವಾಲಯ ದೇಶದಲ್ಲಿಯೇ ಬೇರೆಡೆ ಎಲ್ಲೂ ಇಲ್ಲ ಅನ್ನೋ ಮಾತಿದೆ. ಇಂತಹ ದೇವಾಲಯದಲ್ಲಿ ನಡೆದಿರುವ ಘಟನೆ ಭಕ್ತರನ್ನ ಮಾತ್ರವಲ್ದೇ ಧಾರ್ಮಿಕ ಚಿಂತಕರಿಗೂ ನೋವುಂಟು ಮಾಡಿದೆ.











