‘ಬೆಂಗಳೂರಿಗಾಗಿ ಒಕ್ಕಲಿಗರು ಭೂಮಿ ತ್ಯಾಗ ಮಾಡಿದ್ದಾರೆ.. ಮೊದ್ಲು ಒಕ್ಕಲಿಗ ಪ್ರಾಧಿಕಾರ ಮಾಡ್ಬೇಕಿತ್ತು’
ಬೆಂಗಳೂರು: ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮಕ್ಕೆ ನನ್ನ ವಿರೋಧವಿಲ್ಲವೆಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಿಗಮ ರಚನೆ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ಕೊಟ್ಟಿದ್ದರೆ ಈ ಗೊಂದಲ ಆಗ್ತಿರಲಿಲ್ಲ ಎಂದಿರುವ ಹೆಚ್.ಡಿ.ಕೆ, ಅಭಿವೃದ್ಧಿಗೆ ಹಣ ಸಂಗ್ರಹ ಆಗ್ತಿರೋದು ಬೆಂಗಳೂರಿನ ಒಕ್ಕಲಿಗ ಸಮುದಾಯದಿಂದ. ಒಕ್ಕಲಿಗ ಸಮುದಾಯ ತಮ್ಮ ಕೃಷಿ ಭೂಮಿ ಬಿಟ್ಕೊಟ್ಟು ಕಾರ್ಮಿಕರಾಗಿದ್ದಾರೆ. ಬೆಂಗಳೂರು ನಗರಕ್ಕೆ ಒಕ್ಕಲಿಗ ಸಮುದಾಯ ಭೂಮಿ ಕೊಟ್ಟು ತ್ಯಾಗ ಮಾಡಿದ್ದಾರೆ. ಹಾಗೆ ನೋಡಿದ್ರೆ, ಮೊದ್ಲು ಒಕ್ಕಲಿಗ ಪ್ರಾಧಿಕಾರ ಮಾಡ್ಬೇಕಿತ್ತುಎಂದು ಕುಮಾರಸ್ವಾಮಿ ಹೇಳಿದರು. ಆದ್ರೆ, […]

ಬೆಂಗಳೂರು: ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮಕ್ಕೆ ನನ್ನ ವಿರೋಧವಿಲ್ಲವೆಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಿಗಮ ರಚನೆ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ಕೊಟ್ಟಿದ್ದರೆ ಈ ಗೊಂದಲ ಆಗ್ತಿರಲಿಲ್ಲ ಎಂದಿರುವ ಹೆಚ್.ಡಿ.ಕೆ, ಅಭಿವೃದ್ಧಿಗೆ ಹಣ ಸಂಗ್ರಹ ಆಗ್ತಿರೋದು ಬೆಂಗಳೂರಿನ ಒಕ್ಕಲಿಗ ಸಮುದಾಯದಿಂದ. ಒಕ್ಕಲಿಗ ಸಮುದಾಯ ತಮ್ಮ ಕೃಷಿ ಭೂಮಿ ಬಿಟ್ಕೊಟ್ಟು ಕಾರ್ಮಿಕರಾಗಿದ್ದಾರೆ. ಬೆಂಗಳೂರು ನಗರಕ್ಕೆ ಒಕ್ಕಲಿಗ ಸಮುದಾಯ ಭೂಮಿ ಕೊಟ್ಟು ತ್ಯಾಗ ಮಾಡಿದ್ದಾರೆ. ಹಾಗೆ ನೋಡಿದ್ರೆ, ಮೊದ್ಲು ಒಕ್ಕಲಿಗ ಪ್ರಾಧಿಕಾರ ಮಾಡ್ಬೇಕಿತ್ತುಎಂದು ಕುಮಾರಸ್ವಾಮಿ ಹೇಳಿದರು.
ಆದ್ರೆ, ನಿಗಮ, ಪ್ರಾಧಿಕಾರಗಳಿಂದ ಏನು ಪ್ರಯೋಜನವಿಲ್ಲ. ನಮ್ಮ ಕಾಲದಲ್ಲೂ ಬ್ರಾಹ್ಮಣ, ಆರ್ಯ ವೈಶ್ಯ ನಿಗಮ ಮಾಡಿದ್ದೇವೆ. ಆದ್ರೆ ನಿಗಮಗಳಿಂದ ಅನುಕೂಲ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಟೀಕೆಗೆ ತಿರುಗೇಟು ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿರುವುದಕ್ಕೆ ಮಾಜಿ ಸಿಎಂ HDK ಪ್ರತಿಕ್ರಿಯಿಸಿದ್ದು, ಚಾಮರಾಜನಗರ, ಮೈಸೂರು, ನವಲಗುಂದದಲ್ಲಿ ಕಾಂಗ್ರೆಸ್ ಕೂಡ ಮೈತ್ರಿ ಮಾಡಿಕೊಂಡಿದೆ ಎಂದು ತಿರುಗೇಟು ನೀಡಿದ್ದಾರೆ.
ಹಾಗಾಗಿ, ಸಿದ್ದರಾಮಯ್ಯನವರದ್ದೂ ಸಮಯ ಸಾಧಕ ರಾಜಕಾರಣ ಅಲ್ವಾ? ಕಾಂಗ್ರೆಸ್ ಸಹ ಅಧಿಕಾರ ಹಿಡ್ಕೊಂಡು ಹೋಗೋ ಪಕ್ಷ, ಎಲ್ಲರದ್ದೂ ಅನುಕೂಲ ರಾಜಕಾರಣವೇ. ನಾವೇ ಪರಿಶುದ್ಧರು, ಸ್ವಚ್ಛವಾಗಿರೋರು ಅನ್ನೋದೆಲ್ಲ ಸುಳ್ಳು. ಅಲ್ಲದೆ ಕಾಂಗ್ರೆಸ್ನವರ ತಟ್ಟೆಯಲ್ಲೇ ಹೆಗ್ಗಣ ಇದೆ. ಹೀಗಾಗಿ ಇನ್ನೊಂದು ಪಕ್ಷದ ಬಗ್ಗೆ ಸಿದ್ದರಾಮಯ್ಯ ಚರ್ಚೆ ಮಾಡೋದು ಬೇಡ ಎಂದು ತಿರುಗೇಟು ಕೊಟ್ಟರು.
‘ಉಪಚುನಾವಣೆಯಲ್ಲಿ ಬಿಜೆಪಿ ಎದುರು ಗೆಲ್ಲೋದು ಕಷ್ಟ’ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆ ವಿಚಾರದ ಬಗ್ಗೆ ಮಾತಾನಾಡಿರುವ ಹೆಚ್ಡಿಕೆ, ರಾಜ್ಯದಲ್ಲಿ ಇನ್ನೂ ಜೆಡಿಎಸ್ ಬದುಕಿದೆ. ನಾವು ಮುಂದೆ ಬರುವ ಚುನಾವಣೆಗೆ ಮಸ್ಕಿ, ಬಸವ ಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕೋದು ವ್ಯರ್ಥ.. ಆದರೂ ಆ ಎರಡೂ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಅಲ್ಲದೆ, ಉಪಚುನಾವಣೆಗಳಲ್ಲಿ ವ್ಯರ್ಥ ಕಸರತ್ತು ಸರಿಯಲ್ಲ. ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಉಪಚುನಾವಣೆಗಳಲ್ಲಿ ಈಗ ಬಿಜೆಪಿಯ ವಿಧಾನವೇ ಬೇರೆ ಇದೆ. ಇಂಥ ಸಂದರ್ಭದಲ್ಲಿ ನಾವು ಉಪಚುನಾವಣೆ ಗೆಲ್ಲೋದು ಕಷ್ಟವೇ ಎಂದು ಹೆಚ್ಡಿಕೆ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
Published On - 2:46 pm, Sun, 22 November 20




