ಕಾಣೆಯಾಗಿದ್ದ ನರ್ಸಿಂಗ್ ವಿದ್ಯಾರ್ಥಿನಿ ಶವವಾಗಿ ಪತ್ತೆ.. ಆಸ್ಪತ್ರೆಯ ರಿಸೆಪ್ಷನಿಸ್ಟ್ ಯುವಕ ಅರೆಸ್ಟ್​

ಕಾಣೆಯಾಗಿದ್ದ ನರ್ಸಿಂಗ್ ವಿದ್ಯಾರ್ಥಿನಿ ಶವವಾಗಿ ಪತ್ತೆ.. ಆಸ್ಪತ್ರೆಯ ರಿಸೆಪ್ಷನಿಸ್ಟ್ ಯುವಕ ಅರೆಸ್ಟ್​
ಜ್ಯೋತಿ ಬಾಗವ್ವಗೋಳ ಮತ್ತು ಹನೀಫ್ ಬೀಳಗಿ

ನಾಪತ್ತೆಯಾಗಿದ್ದ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಶವ ಪತ್ತೆಯಾಗಿದೆ.

Ayesha Banu

| Edited By: sadhu srinath

Feb 17, 2021 | 11:40 AM

ಬಾಗಲಕೋಟೆ: ನಾಪತ್ತೆಯಾಗಿದ್ದ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಶವ ಪತ್ತೆಯಾಗಿದೆ. ಜ್ಯೋತಿ ಬಾಗವ್ವಗೋಳ(22) ನಾಪತ್ತೆಯಾಗಿ ಶವವಾಗಿ ಸಿಕ್ಕಿರುವ ನರ್ಸಿಂಗ್ ವಿದ್ಯಾರ್ಥಿನಿ. ಈ ಸಂಬಂಧ ಆರೋಪಿ ಹನೀಫ್ ಬೀಳಗಿ (23) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಧೋಳ ತಾಲ್ಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಜ್ಯೋತಿ ಬಾಗವ್ವಗೋಳ ಮತ್ತು ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ನಿವಾಸಿ ಹನೀಫ್ ಬೀಳಗಿ ಇಬ್ಬರೂ ಬಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಜ್ಯೋತಿ ವಿದ್ಯಾಭ್ಯಾಸದ ಜೊತೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಹನೀಫ್ ರಿಸೆಪ್ಷನಿಸ್ಟ್ ಆಗಿದ್ದ.

ಇದೆ ವೇಳೆ ಇಬ್ಬರಿಗೂ ಪ್ರೀತಿ ಶುರುವಾಗಿತ್ತು. ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಪ್ರಿಯಕರ ಹನೀಫ್​ಗೆ ಜ್ಯೋತಿ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿತ್ತು. ಹೀಗಾಗಿ ಆತ ಜ್ಯೋತಿಯನ್ನು ನಂಬಿಸಿ ಘಟಪ್ರಭಾ ನದಿ ಬಳಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ನದಿ ಪಕ್ಕ ಎಸೆದಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಬಂಧ ಹನೀಫ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ‌ ಮಾಡಿರೋದಾಗಿ ಹನೀಫ್​ ತಪ್ಪೊಪ್ಪಿಗೆ, ಲವ್ ಜಿಹಾದ್? ಇನ್ನು ಫೆಬ್ರವರಿ 13 ರಿಂದ ಜ್ಯೋತಿ ನಾಪತ್ತೆಯಾಗಿದ್ದಳು. ಹೀಗಾಗಿ ಫೆಬ್ರವರಿ 15 ರಂದು ಬಾಗಲಕೋಟೆ ನಗರ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಜ್ಯೋತಿ ಮೊಬೈಲ್‌ ಕೊನೆ ಕರೆ ಜಾಡು ಹಿಡಿದು ತನಿಖೆ ಶುರು ಮಾಡಿದ್ದ ಪೊಲೀಸರು ಕರೆಯಾಧಾರದ ಮೇಲೆ ಹನೀಫ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಕೊಲೆ‌ ಮಾಡಿರೋದಾಗಿ ಹನೀಫ್​ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಇದು ಲವ್ ಜಿಹಾದ್ ಎಂದು ಜ್ಯೋತಿ ಕೆಲ ಸಂಬಂಧಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ

Follow us on

Related Stories

Most Read Stories

Click on your DTH Provider to Add TV9 Kannada