IPL ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರ ಬಂಧನ: ದಾಳಿ ವೇಳೆ MLA ಪತ್ನಿ ಹೆಸರಲ್ಲಿದ್ದ ಕಾರು ಜಪ್ತಿ

ಕಲಬುರಗಿ: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿರುವ ಪ್ರಸಂಗ ನಗರದ MB ನಗರದ ಮನೆಯೊಂದರಲ್ಲಿ ನಡೆದಿದೆ. ಅತುಲ್ ಸುರೇಶ್ ಶೆಟ್ಟಿ ಹಾಗೂ ಪ್ರದೀಪ್ ಕಾರಂಜೆ ಎಂಬ ಇಬ್ಬರನ್ನು ಮಹಾರಾಷ್ಟ್ರದ ಸೊಲ್ಲಾಪುರ ವಿಭಾಗದ ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ದಾಳಿ ವೇಳೆ ಸಿಸಿಬಿ ಪೊಲೀಸರು ಜಿಲ್ಲೆಯ ಶಾಸಕರೊಬ್ಬರ ಪತ್ನಿಯ ಹೆಸರಿನಲ್ಲಿದ್ದ ಕಾರನ್ನು ಸಹ ಜಪ್ತಿ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಪತ್ನಿ ಹೆಸರಿನಲ್ಲಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಇದಲ್ಲದೆ, […]

IPL ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರ ಬಂಧನ: ದಾಳಿ ವೇಳೆ MLA ಪತ್ನಿ ಹೆಸರಲ್ಲಿದ್ದ ಕಾರು ಜಪ್ತಿ

Updated on: Nov 14, 2020 | 12:42 PM

ಕಲಬುರಗಿ: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿರುವ ಪ್ರಸಂಗ ನಗರದ MB ನಗರದ ಮನೆಯೊಂದರಲ್ಲಿ ನಡೆದಿದೆ. ಅತುಲ್ ಸುರೇಶ್ ಶೆಟ್ಟಿ ಹಾಗೂ ಪ್ರದೀಪ್ ಕಾರಂಜೆ ಎಂಬ ಇಬ್ಬರನ್ನು ಮಹಾರಾಷ್ಟ್ರದ ಸೊಲ್ಲಾಪುರ ವಿಭಾಗದ ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ದಾಳಿ ವೇಳೆ ಸಿಸಿಬಿ ಪೊಲೀಸರು ಜಿಲ್ಲೆಯ ಶಾಸಕರೊಬ್ಬರ ಪತ್ನಿಯ ಹೆಸರಿನಲ್ಲಿದ್ದ ಕಾರನ್ನು ಸಹ ಜಪ್ತಿ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಪತ್ನಿ ಹೆಸರಿನಲ್ಲಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.

ಇದಲ್ಲದೆ, ಬಂಧಿತರಿಂದ 38 ಲಕ್ಷ ರೂಪಾಯಿ ನಗದು, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಒಂದನ್ನು ವಶಕ್ಕೆ ಪಡೆಯಲಾಗಿದೆ. ಸೊಲ್ಲಾಪುರದ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾರು ಜಪ್ತಿಗೂ ನನ್ನ ಪತ್ನಿಗೂ ಯಾವುದೆ ಸಂಬಂಧ ಇಲ್ಲ’
ಕ್ರಿಕೆಟ್ ಬೆಟ್ಟಿಂಗ್, ಕಾರು ಜಪ್ತಿಗೂ ನನ್ನ ಪತ್ನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಪತ್ನಿಯ ತಂದೆಯ ಮನೆ ಬಳಿ ಕಾರು ನಿಲ್ಲಿಸಲಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಕಾರು ಜಪ್ತಿ ಮಾಡಲಾಗಿದೆ. ನನ್ನ ಪತ್ನಿ ಸಹೋದರನಿಗೂ ಯಾವುದೇ ಸಂಬಂಧವಿಲ್ಲ ಎಂದು ಟಿವಿ9ಗೆ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಪ್ರತಿಕ್ರಿಯಿಸಿದ್ದಾರೆ.

Published On - 10:59 am, Sat, 14 November 20