AA22: ಮತ್ತೋರ್ವ ತೆಲುಗು ಸ್ಟಾರ್​ ನಟನ ಹಿಂದೆ ಬಿದ್ರಾ ಪ್ರಶಾಂತ್​ ನೀಲ್​? ಹೈದರಾಬಾದ್​ನಲ್ಲಿ ಅಚ್ಚರಿಯ ಭೇಟಿ

|

Updated on: Mar 09, 2021 | 6:56 PM

ಸಲಾರ್​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಪ್ರಶಾಂತ್​ ನೀಲ್​ ಇಂದು ಹೈದರಾಬಾದ್​ನಲ್ಲಿರುವ ಗೀತಾ ಆರ್ಟ್ಸ್​ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್​ ಕೂಡ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು.

AA22: ಮತ್ತೋರ್ವ ತೆಲುಗು ಸ್ಟಾರ್​ ನಟನ ಹಿಂದೆ ಬಿದ್ರಾ ಪ್ರಶಾಂತ್​ ನೀಲ್​? ಹೈದರಾಬಾದ್​ನಲ್ಲಿ ಅಚ್ಚರಿಯ ಭೇಟಿ
ಅಲ್ಲು ಅರ್ಜುನ್​-ಪ್ರಶಾಂತ್​ ನೀಲ್​
Follow us on

ಕೆಜಿಎಫ್​ ಚಾಪ್ಟರ್​ 2 ನಂತರ ಪ್ರಶಾಂತ್​ ನೀಲ್​ ಮುಂದಿನ ಪ್ರಾಜೆಕ್ಟ್​ ಯಾವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ತೆಲುಗಿನ ಸ್ಟಾರ್​ ನಟ ಪ್ರಭಾಸ್​ ಜತೆ ಸಲಾರ್​ ಚಿತ್ರಕ್ಕಾಗಿ ಕೈಜೋಡಿಸುವ ಮೂಲಕ ಪ್ರಶಾಂತ್​ ನೀಲ್​ ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದರು. ಈಗ ಸಲಾರ್​ ಬಗ್ಗೆ ಒಂದಷ್ಟು ಕುತೂಹಲಗಳು ಹುಟ್ಟಿ ತಣ್ಣಗಾಗುವುದರೊಳಗೆ ಪ್ರಶಾಂತ್​ ನೀಲ್​ ಮತ್ತೋರ್ವ ಟಾಲಿವುಡ್​ ಸ್ಟಾರ್​ ನಟನ ಹಿಂದೆ ಬಿದ್ದಂತೆ ಕಾಣುತ್ತಿದೆ. ಇಂದು (ಮಾ.9) ಅಲ್ಲು ಅರ್ಜುನ್​ ಅವರನ್ನು ಪ್ರಶಾಂತ್​ ನೀಲ್​ ಭೇಟಿ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಲಾರ್​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಪ್ರಶಾಂತ್​ ನೀಲ್​ ಇಂದು ಹೈದರಾಬಾದ್​ನಲ್ಲಿರುವ ಗೀತಾ ಆರ್ಟ್ಸ್​ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್​ ಕೂಡ ಅಲ್ಲಿಗೆ ಬಂದಿದ್ದರು. ಇದೊಂದು ಸಾಮಾನ್ಯ ಭೇಟಿ ಎನ್ನುವ ಸ್ಪಷ್ಟನೆ ಕೇಳಿ ಬಂದಿದೆ. ಆದರೆ, ಈ ಭೇಟಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ಮೂಲಗಳ ಪ್ರಕಾರ್​ ಅಲ್ಲು ಅರ್ಜುನ್​ 22ನೇ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರಂತೆ. ಇಂದಿನ ಭೇಟಿ ವೇಳೆ ಪ್ರಶಾಂತ್​ ಸಿನಿಮಾ ಕಥೆಯ ಒಂದೆಳೆ ಬಿಚ್ಚಿಟ್ಟಿದ್ದು, ಇದು ಅಲ್ಲು ಅರ್ಜುನ್​ಗೆ ಇಷ್ಟವಾಗಿದೆ ಎನ್ನಲಾಗಿದೆ.

ಏಪ್ರಿಲ್​ 8 ಅಲ್ಲು ಅರ್ಜುನ್​ ಜನ್ಮದಿನ. ಈ ವೇಳೆ ಅವರ ನಟನೆಯ ಪುಷ್ಪ ಸಿನಿಮಾದ ಟೀಸರ್​ ರಿಲೀಸ್​ ಆಗುತ್ತಿದೆ. ಅವರ 21ನೇ ಸಿನಿಮಾದ ಟೈಟಲ್​ ಲಾಂಚ್​ ಕೂಡ ಆಗುತ್ತಿದೆ. ಇದರ ಜತೆಗೆ ಪ್ರಶಾಂತ್​ ನೀಲ್​ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಮಾಹಿತಿ.

 

ಇನ್ನು, ಪ್ರಶಾಂತ್​ ನೀಲ್​-ಅಲ್ಲು ಅರ್ಜುನ್​ ಭೇಟಿ ನಂತರದಲ್ಲಿ ಟ್ವಿಟರ್​ನಲ್ಲಿ AA22 ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ. ಅಭಿಮಾನಿಗಳು ಈ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಸಾಲು ಸಾಲು ಟ್ವೀಟ್​ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಉಗ್ರಂ ನಂತರ ಮತ್ತೆ ಒಂದಾದ್ರು ಶ್ರೀಮುರುಳಿ-ಪ್ರಶಾಂತ್​ ನೀಲ್​!