ಅಶೋಕಾ ಹೋಟೆಲ್​ಗೆ ಜಿಮ್​ ಮಾಡಲು ಹೋಗ್ತಿದ್ದೆ: ಕೆ. ಮಂಜು ಸವಾಲ್​ಗೆ ಸಂಬರಗಿ ಉತ್ತರ

  • Publish Date - 1:27 pm, Mon, 14 September 20
ಅಶೋಕಾ ಹೋಟೆಲ್​ಗೆ ಜಿಮ್​ ಮಾಡಲು ಹೋಗ್ತಿದ್ದೆ: ಕೆ. ಮಂಜು ಸವಾಲ್​ಗೆ ಸಂಬರಗಿ ಉತ್ತರ

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗೆ ನಂಟಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ಟಿವಿ9ಗೆ ಪ್ರಶಾಂತ್ ಸಂಬರಗಿ ಹೇಳಿಕೆ ಕೊಟ್ಟಿದ್ದಾರೆ.

ಇಂದಿರಾನಗರದ ಟೆನ್ನಿಸ್ ಕ್ಲಬ್‌ನಲ್ಲಿ ಆಡಿದ್ದನ್ನು ನೋಡಿದ್ದೇನೆ. ಅವರು ಜೊತೆಗೆ ಊಟ ಮಾಡಿದ್ದನ್ನು ಸಹ ನಾನು ನೋಡಿದ್ದೇನೆ. ಜೊತೆಗೆ ಸಂಜನಾ ಮೇಲೆ ರಾಜಕಾರಣಿಗಳ ಶ್ರೀರಕ್ಷೆ ಇದೆ ಅಂತಾ ಸಂಬರಗಿ ಹೇಳಿದ್ದಾರೆ. ಸೆಪ್ಟಂಬರ್​3ರಂದು ನಾನು ಹೇಳಿದ್ದ 3 ಸತ್ಯಗಳು ಹೊರಬಂದಿದೆ. ಫಾಝಿಲ್ ಜೊತೆ ಜಮೀರ್ ನಂಟಿನ ಬಗ್ಗೆ ಅವರೇ ಹೇಳಬೇಕು.

ರಾಜಕೀಯ ಶ್ರೀರಕ್ಷೆ ಇಲ್ಲದೆ ಡ್ರಗ್ಸ್​ ದಂಧೆ ನಡೆಯುವುದಿಲ್ಲ ಅಂತಾ ಟಿವಿ9ಗೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ನನ್ನ ಹೇಳಿಕೆಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಬ್ಯಾಲೀಸ್ ಕ್ಯಾಸಿನೋದಲ್ಲಿ ಜಮೀರ್ ಅಹ್ಮದ್ ಉಪಸ್ಥಿತರಿದ್ದರು. ಆ ವೇದಿಕೆಯಲ್ಲಿ ಸಂಜನಾ, ಶೇಖ್ ಫಾಝಿಲ್ ಸಹ ಇದ್ದರು ಎಂದು ಪ್ರಶಾಂತ್​ ಹೇಳಿದ್ದಾರೆ.

ಸಂಜನಾ ನಿಕಟ ವರ್ತಿಗಳ ಪೋಟೋಗಳನ್ನ ಹಲವು ಮಾಧ್ಯಮಗಳಿಗೆ ನಾನೇ ಕೊಟ್ಟಿದ್ದೇನೆ. ಚಿತ್ರರಂಗದ ಹಲವರ ಬಗ್ಗೆ ನಾನು ಲೇಖನ ಬರೆದಿದ್ದೆ. ಮೌಖಿಕವಾಗಿ ಕೆಲವು ಪ್ರಶ್ನೆಗಳನ್ನ ಹಾಕಿಕೊಂಡಿದ್ದೆ. ಜಮೀರ್ ಕೆಲವರಿಗೆ ಹಣ ಕೊಟ್ಟಿದ್ದಾರೆ. ಎಲ್ಲಿಂದ ಕೊಟ್ಟಿದ್ದಾರೆ? ಯಾಕೆ ಕೊಟ್ಟಿದ್ದಾರೆ? ಬಡ್ಡಿಗೆ ಕೊಟ್ಟಿದ್ದಾರೆಯೇ? ಎಂಬುದನ್ನು ಖುದ್ದು ಜಮೀರ್ ಹೇಳಲಿ ಅಂತಾ ಹೇಳಿದ್ದಾರೆ.

‘ಜಮೀರ್ ಖಾನ್ ವಚನ ಭ್ರಷ್ಟರು’
ಜಮೀರ್ ಖಾನ್ ವಚನ ಭ್ರಷ್ಟರು. ಅವರು ಬಿಎಸ್‌ವೈ ಸಿಎಂ ಆದರೆ ಅವರ ಮನೆಗೆ ವಾಚ್‌ಮ್ಯಾನ್ ಆಗಿತ್ತೀನಿ ಅಂದಿದ್ರು. ಆದ್ರೆ ಒಂದು ದಿನ ದೊಣ್ಣೆ ಹಿಡಿಕೊಂಡು ವಾಚ್‌ಮ್ಯಾನ್ ಆಗಲಿಲ್ಲ. ಸಮಾಜವನ್ನ ಆಗಾಗ ಕ್ಲೀನ್​ ಮಾಡಬೇಕಿದೆ ಅಂತಾ ಟಿವಿ9ಗೆ ಸಾಮಾಜಿಕ ಹೋರಾಟಗಾರ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

‘2017ರ ಜಮೀರ್ ಹುಟ್ಟುಹಬ್ಬದ ಸಮಾರಂಭಕ್ಕೆ ಸಂಜನಾನೇ ಚೀಫ್​​​ ಗೆಸ್ಟ್’
ಅನೇಕರು ನನ್ನ ಮಾತಿಗೆ ಬೆಲೆಕೊಟ್ಟು ಫೋಟೋ ಕೊಟ್ಟಿದ್ದಾರೆ. ಫಾಝಿಲ್​​, ಆರೋಪಿ ರಾಹುಲ್‌, ಶಾಸಕ ಶಾಸಕ ಜಮೀರ್​​ ಇರುವ ಗ್ರೂಪ್​ ಫೋಟೋಗಳನ್ನ ಬಿಡುಗಡೆ ಮಾಡಿದ್ದೇನೆ. ಫಾಝಿಲ್​ನನ್ನ ಭೇಟಿಯಾಗಿಲ್ಲ ಎಂದು​ ಜಮೀರ್​ ಹೇಳ್ತಾರೆ. ಫಾಝಿಲ್​​ ಭೇಟಿಯಾಗಿ ನಾಲ್ಕು ವರ್ಷ ಆಗಿದೆ ಅಂತಾರೆ.

ನಿಮಗೂ ಫಾಝಿಲ್​ಗೂ ಇರುವ ನಂಟಿನ ಮಾಹಿತಿ ಕೊಡಿ. ಇದಕ್ಕೆ ಇತಿಶ್ರೀಯನ್ನ ಹಾಡಿ. ಸಂಜನಾ ಪರೋಕ್ಷವಾಗಿ ಜಮೀರ್ ಗೊತ್ತಿಲ್ಲ ಅಂತಿದ್ದಾರೆ. ಆದರೆ ನಾನು ಅವರ ಪೋಟೋ ಬಿಡುಗಡೆ ಮಾಡಿದ್ದೇನೆ. 2017ರ ಜಮೀರ್ ಹುಟ್ಟುಹಬ್ಬದ ಸಮಾರಂಭಕ್ಕೆ ಸಂಜನಾನೇ ಚೀಫ್​​​ ಗೆಸ್ಟ್ ಆಗಿದ್ದರು ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದಾರೆ.

ಅಶೋಕಾ ಹೋಟೆಲ್​ ರೂಮ್​ ವಿಚಾರ ಬಿಚ್ಚಿಟ್ಟ ಸಂಬರಗಿ
ಮಂಜುರವರ ಅಶೋಕಾ ಹೋಟೆಲ್​ ರೂಮ್​ ವಿಚಾರವಾಗಿ ಸಹ ಸಂಬರಗಿ ಪ್ರತಿಕ್ರಿಯಿಸಿದ್ದಾರೆ. ನಾನು ಅಶೋಕಾ ಹೋಟೆಲ್​ಗೆ ಜಿಮ್​ ಮಾಡಲು ಹೋಗ್ತಿದ್ದೆ. ಹಾಗಾಗಿ, ನಾನು ಅಲ್ಲಿ ರೂಮ್​ ಬುಕ್​ ಮಾಡಿದ್ದೆ ಎಂದು ಹೇಳಿದ್ದಾರೆ. ಜೊತೆಗೆ, ನಾನು ರಿಲಯನ್ಸ್​ ಸಂಸ್ಥೆಯಲ್ಲಿ ಕೆಲಸ ಮಾಡೋವಾಗ ಅವರ ಪರವಾಗಿ ಕನ್ನಡ ಪರ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ. ಆದರೆ, ಅದಕ್ಕೆ ಹಣ ಪಡೆದಿಲ್ಲ ಎಂದು ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

Click on your DTH Provider to Add TV9 Kannada