ಹೆರಿಗೆ ಬಳಿಕ ಬಾಣಂತಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ಹೆರಿಗೆ ಬಳಿಕ ಬಾಣಂತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಗೆ ಸೋಂಕು ತಗುಲಿದೆ. 24 ವರ್ಷದ ಬಾಣಂತಿಗೆ ಮೇ 8 ರಂದು ಹೆರಿಗೆ ಬಳಿಕ ಸ್ಯಾಂಪಲ್ ಟೆಸ್ಟ್ ಮಾಡಲಾಗಿತ್ತು. ಗಂಟಲ ದ್ರವ ಟೆಸ್ಟ್ನಲ್ಲಿ ಬಾಣಂತಿಗೆ ಕೊರೊನಾ ಇರೋದು ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಚಾಮರಾಜಪೇಟೆಯ ಛಲವಾದಿಪಾಳ್ಯ ವಾರ್ಡ್ ನಂ. 138ರ ವಿಳಾಸ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಛಲವಾದಿ ಪಾಳ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದೆ.
ಬೆಂಗಳೂರು: ಹೆರಿಗೆ ಬಳಿಕ ಬಾಣಂತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಗೆ ಸೋಂಕು ತಗುಲಿದೆ. 24 ವರ್ಷದ ಬಾಣಂತಿಗೆ ಮೇ 8 ರಂದು ಹೆರಿಗೆ ಬಳಿಕ ಸ್ಯಾಂಪಲ್ ಟೆಸ್ಟ್ ಮಾಡಲಾಗಿತ್ತು.
ಗಂಟಲ ದ್ರವ ಟೆಸ್ಟ್ನಲ್ಲಿ ಬಾಣಂತಿಗೆ ಕೊರೊನಾ ಇರೋದು ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಚಾಮರಾಜಪೇಟೆಯ ಛಲವಾದಿಪಾಳ್ಯ ವಾರ್ಡ್ ನಂ. 138ರ ವಿಳಾಸ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಛಲವಾದಿ ಪಾಳ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದೆ.
Published On - 9:14 am, Mon, 11 May 20