ಮತ್ತೆ ಹೆಣ್ಣು ಮಗು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವಿಸಿದ ಗರ್ಭಿಣಿ.. ಸಾವು

ಮತ್ತೆ ಹೆಣ್ಣು ಮಗು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವಿಸಿದ ಗರ್ಭಿಣಿ.. ಸಾವು

ಚಿಕ್ಕಬಳ್ಳಾಪುರ: ಮತ್ತೆ ಹೆಣ್ಣು ಮಗುವಾಗುತ್ತೆ ಎಂಬ ಬೇಸರದಲ್ಲಿ ಗರ್ಭಿಣಿಯೊಬ್ಬಳು ಗರ್ಭ ನಿರೋಧಕ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾಳೆ. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ(27) ಮೃತ ದುರ್ದೈವಿ. ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಯಲ್ಲಿದೆಯಲ್ಲವೇ? ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಾಗಾಗಿ, ಮತ್ತೊಂದು ಹೆಣ್ಣು ಮಗು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ. ಮಾತ್ರೆ ಸೇವನೆ ಬಳಿಕ ಗರ್ಭಣಿಗೆ ತೀವ್ರ ರಕ್ತಸ್ರಾವವಾಗಿತ್ತು. ಹಾಗಾಗಿ, ಶ್ರೀಕನ್ಯಾರನ್ನು ಕೂಡಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, […]

KUSHAL V

| Edited By: sadhu srinath

Nov 20, 2020 | 4:13 PM

ಚಿಕ್ಕಬಳ್ಳಾಪುರ: ಮತ್ತೆ ಹೆಣ್ಣು ಮಗುವಾಗುತ್ತೆ ಎಂಬ ಬೇಸರದಲ್ಲಿ ಗರ್ಭಿಣಿಯೊಬ್ಬಳು ಗರ್ಭ ನಿರೋಧಕ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾಳೆ. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ(27) ಮೃತ ದುರ್ದೈವಿ.

ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಯಲ್ಲಿದೆಯಲ್ಲವೇ? ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಾಗಾಗಿ, ಮತ್ತೊಂದು ಹೆಣ್ಣು ಮಗು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ. ಮಾತ್ರೆ ಸೇವನೆ ಬಳಿಕ ಗರ್ಭಣಿಗೆ ತೀವ್ರ ರಕ್ತಸ್ರಾವವಾಗಿತ್ತು. ಹಾಗಾಗಿ, ಶ್ರೀಕನ್ಯಾರನ್ನು ಕೂಡಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಶ್ರೀಕನ್ಯಾ ಕೊನೆಯುಸಿರೆಳೆದಿದ್ದಾಳೆ. ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಶ್ರೀಕನ್ಯಾಗೆ ಹೆಣ್ಣು ಮಗು ಬಗ್ಗೆ ಸುಳಿವು ಸಿಕ್ಕಿದ್ದಾರೂ ಹೇಗೆ? ಎಂಬುದು ನಿಗೂಢವಾಗಿದೆ. ಬಹುಶಃ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿದ್ದರೆ ಶ್ರೀಕನ್ಯಾ ಬದುಕುಳಿಯುತ್ತಿದ್ದರಾ..?

Follow us on

Most Read Stories

Click on your DTH Provider to Add TV9 Kannada