ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್ಡೌನ್ ಸಡಲಿಕೆ ಮಾಡಿದ ನಂತರ ಸೋಂಕು ಮತ್ತಷ್ಟು ಬಲಿಶಾಲಿಯಾಗಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇದನ್ನು ನಿಯಂತ್ರಣಕ್ಕೆ ತರಲು ಬಿಬಿಎಂಪಿ ಸೀಲ್‌ಡೌನ್ ಸೂತ್ರ ಮುಂದುವರೆಸಿದೆ.
ಬಿಬಿಎಂಪಿ ಸಿಬ್ಬಂದಿ ಕಬ್ಬಿಣದ ಹಲಗೆ ಮತ್ತು ಬ್ಯಾರಿಕೇಡ್‌ಗಳನ್ನ ತಂದು ಸ್ಲಂನ ಮುಖ್ಯದ್ವಾರ ಸೀಲ್‌ಡೌನ್ ಮಾಡಲು ಮುಂದಾಗಿದ್ದಾರೆ. ಸ್ಲಂ ನಲ್ಲಿ ಇದುವರೆಗೆ 6 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, 6 ಜನರ ಪೈಕಿ ಮೂವರು ಮೃತಪಟ್ಟಿದ್ದಾರೆ. ಇನ್ನು ಇಲ್ಲಿ 700 ಮನೆಗಳಿದ್ದು, 4 ಸಾವಿರ ಜನ ಸಂಖ್ಯೆ ಇದೆ. ಎಲ್ಲರನ್ನೂ ರ್ಯಾಂಡಮ್ ಟೆಸ್ಟ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸಿಎಂ ಜೊತೆ ಸಭೆ ನಡೆಸಲಿದ್ದಾರೆ. 10ಕ್ಕೂ ಹೆಚ್ಚು ಏರಿಯಾಗಳನ್ನು ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ.
Published On - 10:59 am, Mon, 22 June 20