ಕಂಟೈನ್ಮೆಂಟ್ ಜೋನ್‌ನಲ್ಲಿ SSLC ಪರೀಕ್ಷಾ ಕೇಂದ್ರ, ಗೊಂದಲದಲ್ಲಿ ಪೋಷಕರು
ಮೈಸೂರು: ಜೂನ್ 25ರಿಂದ ಎಸ್ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಆದರೆ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಿಗದಿಯಾಗಿರುವ 1 ಪರೀಕ್ಷಾ ಕೇಂದ್ರ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿದೆ. ಹೀಗಾಗಿ ಆ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡುವ ಆತಂಕ ಶುರುವಾಗಿದೆ. ಮಕ್ಕಳನ್ನು ಹೇಗೆ ಪರೀಕ್ಷೆಗೆ ಕಳಿಸುವುದು ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಪರೀಕ್ಷೆಗೆ ಕಳಿಸಿದರೆ ಕೊರೊನಾ ಸೋಂಕು ಹರಡುವ ಭಯ ಹೆಚ್ಚಾಗಿದೆ. ಪರೀಕ್ಷೆಗೆ ಕಳಿಸದಿದ್ದರೆ ಮಕ್ಕಳು ಅನುತ್ತೀರ್ಣರಾಗುತ್ತಾರೆ ಎಂಬ ಗೊಂದಲ ಕಾಡುತ್ತಿದೆ. ಏನು ಮಾಡಬೇಕೆಂದು ತೋಚದೆ ಪೋಷಕರು ಆತಂಕಕ್ಕೆ […]
ಮೈಸೂರು: ಜೂನ್ 25ರಿಂದ ಎಸ್ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಆದರೆ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಿಗದಿಯಾಗಿರುವ 1 ಪರೀಕ್ಷಾ ಕೇಂದ್ರ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿದೆ. ಹೀಗಾಗಿ ಆ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡುವ ಆತಂಕ ಶುರುವಾಗಿದೆ.
ಮಕ್ಕಳನ್ನು ಹೇಗೆ ಪರೀಕ್ಷೆಗೆ ಕಳಿಸುವುದು ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಪರೀಕ್ಷೆಗೆ ಕಳಿಸಿದರೆ ಕೊರೊನಾ ಸೋಂಕು ಹರಡುವ ಭಯ ಹೆಚ್ಚಾಗಿದೆ. ಪರೀಕ್ಷೆಗೆ ಕಳಿಸದಿದ್ದರೆ ಮಕ್ಕಳು ಅನುತ್ತೀರ್ಣರಾಗುತ್ತಾರೆ ಎಂಬ ಗೊಂದಲ ಕಾಡುತ್ತಿದೆ. ಏನು ಮಾಡಬೇಕೆಂದು ತೋಚದೆ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ದೇವರಾಜ ಮೊಹಲ್ಲಾದ ಕೃಷ್ಣವಿಲಾಸ ರಸ್ತೆ ನಿವಾಸಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಈ ರಸ್ತೆಯನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಇದೆ ರಸ್ತೆಯಲ್ಲಿರುವ ಅವಿಲಾ ಕಾನ್ವೆಂಟ್ನಲ್ಲಿ SSLC ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಪೋಷಕರಲ್ಲಿ ಆತಂಕದ ಛಾಯೆ ಮೂಡಿದೆ.
Published On - 9:30 am, Mon, 22 June 20