ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆಗೆ CCB ಬುಲಾವ್

ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆಗೆ CCB ಬುಲಾವ್

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿ ಮತ್ತೊಬ್ಬ ಯುವತಿಯ ಹೆಸರು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಯುವತಿಗೆ CCB ಅಧಿಕಾರಿಗಳು ವಿಚಾರಣೆ ನಡೆಸಿದರು. ನಟಿ ರಾಗಿಣಿ ಪ್ರಕರಣಕ್ಕೆ ಲಿಂಕ್ ಇರುವ ಕಾರಣದಿಂದಾಗಿ ಪೃಥ್ವಿ ಶೆಟ್ಟಿ ಎಂಬ ಯುವತಿಗೆ CCB ಅಧಿಕಾರಿಗಳು WhatsApp ಮೂಲಕ ನೋಟಿಸ್ ರವಾನಿಸಿದ್ದರು. ಹೀಗಾಗಿ, ಇಂದು ಪೃಥ್ವಿ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದರು.

ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಸೇರಿ ಇಬ್ಬರು ಯುವತಿಯರನ್ನ ವಿಚಾರಣೆ ಮಾಡಲಾಗುತ್ತಿದೆ. ಸದ್ಯ HSR ಲೇಔಟ್‌ನಲ್ಲಿ ನೆಲೆಸಿರುವ ಪೃಥ್ವಿ ಶೆಟ್ಟಿ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಷಾರಾಮಿ ಪಾರ್ಟಿಗಳು ಹಾಗೂ ಮಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೂ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ.

Published On - 3:29 pm, Sun, 6 September 20

Click on your DTH Provider to Add TV9 Kannada