ಸೋಂಕಿನ ವಿರುದ್ಧ ಗೆದ್ದು ಬಂದ ಬೆಂಗಳೂರು ಮಹಿಳೆಗೆ ಮತ್ತೊಮ್ಮೆ ಕೊರೊನಾ ಪಾಸಿಟಿವ್​

ಬೆಂಗಳೂರು: ಇಡೀ ವಿಶ್ವವನ್ನೇ ಬಂಧಿಯನ್ನಾಗಿಸಿ ಕೆಲ ಕಾಲ ನರಳುವಂತೆ ಮಾಡಿದ ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ಕಡಿಮೆಯಾಗುವ ಲಕ್ಷಣವೇ ತೋರಿಸುತ್ತಿಲ್ಲ. ದಿನದಿಂದ ದಿನಕ್ಕೆ ರಕ್ತಬೀಜಾಸುರನಂತೆ ವ್ಯಾಪಕವಾಗಿ ಹಬ್ಬುತ್ತಿದೆ. ಈ ನಡುವೆ ಸೋಂಕಿನಿಂದ ಹಲವರು ಗುಣಮುಖರಾಗುತ್ತಿರುವುದು ಸಂತಸ ತಂದಿದೆ. ಆದರೆ, ಇಲ್ಲೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಹೌದು, 27 ವರ್ಷ ವಯಸ್ಸಿನ ಮಹಿಳೆಯೊಬ್ಬಳಿಗೆ ಕಳೆದ ಜುಲೈನಲ್ಲಿ ಸೋಂಕು ದೃಢವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಯಶಸ್ವಿಯಾಗಿ ಗುಣಮುಖಳು ಸಹ ಆಗಿದ್ದಳು. ನೆಗಟಿವ್ ಬಂದ ನಂತರ ಆಕೆಯನ್ನು ಡಿಸ್ಜಾರ್ಜ್ ಸಹ […]

ಸೋಂಕಿನ ವಿರುದ್ಧ ಗೆದ್ದು ಬಂದ ಬೆಂಗಳೂರು ಮಹಿಳೆಗೆ ಮತ್ತೊಮ್ಮೆ ಕೊರೊನಾ ಪಾಸಿಟಿವ್​
ಕೊರೊನಾ ವೈರಸ್
Follow us
ಆಯೇಷಾ ಬಾನು
| Updated By: KUSHAL V

Updated on: Sep 06, 2020 | 4:10 PM

ಬೆಂಗಳೂರು: ಇಡೀ ವಿಶ್ವವನ್ನೇ ಬಂಧಿಯನ್ನಾಗಿಸಿ ಕೆಲ ಕಾಲ ನರಳುವಂತೆ ಮಾಡಿದ ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ಕಡಿಮೆಯಾಗುವ ಲಕ್ಷಣವೇ ತೋರಿಸುತ್ತಿಲ್ಲ. ದಿನದಿಂದ ದಿನಕ್ಕೆ ರಕ್ತಬೀಜಾಸುರನಂತೆ ವ್ಯಾಪಕವಾಗಿ ಹಬ್ಬುತ್ತಿದೆ. ಈ ನಡುವೆ ಸೋಂಕಿನಿಂದ ಹಲವರು ಗುಣಮುಖರಾಗುತ್ತಿರುವುದು ಸಂತಸ ತಂದಿದೆ. ಆದರೆ, ಇಲ್ಲೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಹೌದು, 27 ವರ್ಷ ವಯಸ್ಸಿನ ಮಹಿಳೆಯೊಬ್ಬಳಿಗೆ ಕಳೆದ ಜುಲೈನಲ್ಲಿ ಸೋಂಕು ದೃಢವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಯಶಸ್ವಿಯಾಗಿ ಗುಣಮುಖಳು ಸಹ ಆಗಿದ್ದಳು. ನೆಗಟಿವ್ ಬಂದ ನಂತರ ಆಕೆಯನ್ನು ಡಿಸ್ಜಾರ್ಜ್ ಸಹ ಮಾಡಲಾಗಿತ್ತು.

ಆದರೆ, ಕೇವಲ ಒಂದು ತಿಂಗಳಲ್ಲಿ ಮಹಿಳೆಗೆ ಮತ್ತೊಮ್ಮೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ನಗರದ ಫೋರ್ಟಿಸ್​ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಹಾಗಾಗಿ, ಮಹಿಳೆಗೆ ಮತ್ತೊಮ್ಮೆ ಕೊರೊನಾ ಚಿಕಿತ್ಸೆ ಪಡೆದಿದ್ದಾಳೆ ಎಂದು ತಿಳಿದುಬಂದಿದೆ.  ಇದರಿಂದ ಸೋಂಕಿನಿಂದ ಗುಣಮುಖರಾದವರಿಗೂ ಸಹ ಮತ್ತೆ ಸೋಂಕು ತಗಲುತ್ತಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ.

ಅಂದ ಹಾಗೆ, ಸೋಂಕು ಮರುಕಳಿಸಿರುವ ಪ್ರಕರಣಗಳು ಈಗಾಗಲೇ ಜಗತ್ತಿನಲ್ಲಿ ಕೆಲವೆಡೆ ವರದಿಯಾಗಿದ್ದರೂ ಇದು ಸಿಲಿಕಾನ್ ಸಿಟಿಯಲ್ಲಿ ಮೊದಲನೇ ದಾಖಲಿತ ಕೇಸ್​ ಎಂದು ಫೋರ್ಟಿಸ್​ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಹಾಗಾಗಿ, ಕೊರೊನಾ ಸೋಂಕಿನ ಬಗ್ಗೆ ಜಾಗೃತರಾಗಿರಿ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ. ಇಲ್ಲದಿದ್ದರೆ ಈ ಪೆಡಂಭೂತ ಬೇತಾಳದಂತೆ ನಿಮಗೆ ಅಂಟಿಕೊಳ್ಳಲು ಸದಾ ಸಿದ್ಧವಾಗಿರುತ್ತದೆ.