7-3=2.. ಇದು ಪಿಕ್ನಿಕ್ಗೆ ಹೋದವರ ದುರಂತ ಕಥೆ
ದಕ್ಷಿಣ ಕನ್ನಡ: ಈಜಲು ನದಿಗೆ ಇಳಿದ ಮೂವರು ಯುವಕರಲ್ಲಿ ಓರ್ವ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಮಂಗಳೂರಿನ ಕಿನ್ನಿಗೋಳಿ ಸಮೀಪದ ಕರ್ನಿರೆಯಲ್ಲಿ ನಡೆದಿದೆ. ಬೆಂಗಳೂರು ನಿವಾಸಿ ಅನಿಲ್ (32) ಮೃತ ದುರ್ದೈವಿ. ಪಿಕ್ನಿಕ್ಗೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ 7 ಜನ ಸ್ನೇಹಿತರಲ್ಲಿ ಮೂವರು ಕರ್ನಿರೆ ಬಳಿ ಶಾಂಭವಿ ನದಿಗೆ ಈಜಲು ಹೋದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಹೊರಬರಲಾಗದೆ ಪರದಾಡಿದ 32 ವರ್ಷದ ಅನಿಲ್ ಮುಳುಗಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ವಿಷಯ […]

ದಕ್ಷಿಣ ಕನ್ನಡ: ಈಜಲು ನದಿಗೆ ಇಳಿದ ಮೂವರು ಯುವಕರಲ್ಲಿ ಓರ್ವ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಮಂಗಳೂರಿನ ಕಿನ್ನಿಗೋಳಿ ಸಮೀಪದ ಕರ್ನಿರೆಯಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ ಅನಿಲ್ (32) ಮೃತ ದುರ್ದೈವಿ. ಪಿಕ್ನಿಕ್ಗೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ 7 ಜನ ಸ್ನೇಹಿತರಲ್ಲಿ ಮೂವರು ಕರ್ನಿರೆ ಬಳಿ ಶಾಂಭವಿ ನದಿಗೆ ಈಜಲು ಹೋದರು.
ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಹೊರಬರಲಾಗದೆ ಪರದಾಡಿದ 32 ವರ್ಷದ ಅನಿಲ್ ಮುಳುಗಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಮುಲ್ಕಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.




