ನನ್ನ ಮಗ ಯಶಸ್ ಜಿಮ್ ಮಾಡಿಕೊಂಡಿದ್ದ.. NCB ತನಿಖೆಗೆ ಹಾಜರಾಗುತ್ತಾನೆ -ಕೇಶವಮೂರ್ತಿ
[lazy-load-videos-and-sticky-control id=”1T-dJtB9zVw”] ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ಗೆ ಸಂಬಂಧಿಸಿ ಬಿಬಿಎಂಪಿ ಕಾರ್ಪೊರೇಟರ್ ಕೇಶವಮೂರ್ತಿಯವರ ಪುತ್ರ ಯಶಸ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಮುಂಬೈನ NCB ಅಧಿಕಾರಿಗಳು ಕೇಶವಮೂರ್ತಿರ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಕೇಶವಮೂರ್ತಿ ಪುತ್ರ ಯಶಸ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಹೀಗಾಗಿ, ಕೇಶವಮೂರ್ತಿ NCB ನೋಟಿಸ್ ಸಿಕ್ಕ ದಿನದಿಂದಲೇ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ನಟಿ ರಾಗಿಣಿ ಅರೆಸ್ಟ್ ಬಳಿಕ ಪ್ರಭಾವಿ ರಾಜಕಾರಣಿಗಳನ್ನು ಭೇಟಿ ಮಾಡಿ ನೋಟಿಸ್‌ಗೆ ಹೇಗೆ ಉತ್ತರಿಸಬೇಕು […]

[lazy-load-videos-and-sticky-control id=”1T-dJtB9zVw”]
ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ಗೆ ಸಂಬಂಧಿಸಿ ಬಿಬಿಎಂಪಿ ಕಾರ್ಪೊರೇಟರ್ ಕೇಶವಮೂರ್ತಿಯವರ ಪುತ್ರ ಯಶಸ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಮುಂಬೈನ NCB ಅಧಿಕಾರಿಗಳು ಕೇಶವಮೂರ್ತಿರ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಕೇಶವಮೂರ್ತಿ ಪುತ್ರ ಯಶಸ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಹೀಗಾಗಿ, ಕೇಶವಮೂರ್ತಿ NCB ನೋಟಿಸ್ ಸಿಕ್ಕ ದಿನದಿಂದಲೇ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ನಟಿ ರಾಗಿಣಿ ಅರೆಸ್ಟ್ ಬಳಿಕ ಪ್ರಭಾವಿ ರಾಜಕಾರಣಿಗಳನ್ನು ಭೇಟಿ ಮಾಡಿ ನೋಟಿಸ್‌ಗೆ ಹೇಗೆ ಉತ್ತರಿಸಬೇಕು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ.
ಈ ನಡುವೆ, NCB ನೋಟಿಸ್ ವಿಚಾರಕ್ಕೆ ಸಂಬಂಧಿಸಿ ಟಿವಿ 9 ಜೊತೆ ಕಾರ್ಪೊರೇಟರ್ ಕೇಶವಮೂರ್ತಿ ಮಾತನಾಡಿದ್ದಾರೆ. NCB ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನನ್ನ ಪುತ್ರ ಮುಂಬೈಗೆ ಹೋಗಿದ್ದಾನೆ. ನನ್ನ ಮಗ ಜಿಮ್ ಮಾಡಿಕೊಂಡಿದ್ದ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅಧಿಕಾರಿಗಳು ನಮ್ಮ ಮನೆಗೆ ಬಂದು ನೋಟಿಸ್ ನೀಡಿದ್ದರು. ಯಶಸ್ NCB ತನಿಖೆಗೆ ಹಾಜರಾಗುತ್ತಾನೆ ಎಂದು ಹೇಳಿದ್ದಾರೆ.
Published On - 3:09 pm, Sun, 6 September 20




