ಬಾಲ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲಿಸುತ್ತಿದ್ದ ಧರ್ಮ ಯಾವುದು? ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ನಟಿ

ತಮ್ಮ ಆತ್ಮಚರಿತ್ರೆ ‘ಅನ್​ಫಿನಿಶ್ಡ್​’ ಪ್ರಚಾರದ ಸಲುವಾಗಿ ನೀಡಿದ ಸಂದರ್ಶನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಈ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಸಂದರ್ಶನದ ತುಣುಕು ಎಲ್ಲೆಡೆ ವೈರಲ್​ ಆಗುತ್ತಿದೆ.

ಬಾಲ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲಿಸುತ್ತಿದ್ದ ಧರ್ಮ ಯಾವುದು? ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ನಟಿ
ಪ್ರಿಯಾಂಕಾ ಚೋಪ್ರ
Edited By:

Updated on: Mar 19, 2021 | 4:10 PM

ನಟಿ ಪ್ರಿಯಾಂಕಾ ಚೋಪ್ರಾ ಹಿಂದೂ ಕುಟುಂಬದಲ್ಲಿ ಜನಿಸಿದವರು. ಈಗ ಅವರು ಕ್ರಿಶ್ಚಿಯನ್​ ಹುಡುಗನನ್ನು ಮದುವೆಯಾಗಿ ವಿದೇಶದಲ್ಲಿ ಸೆಟ್ಲ್​ ಆಗಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಚ್ಚರಿ ಎಂದರೆ ಬಾಲ್ಯದಲ್ಲಿ ಅವರ ಮೇಲೆ ಮೂರು ಧರ್ಮಗಳು ಪ್ರಭಾವ ಬೀರಿದ್ದವು. ಈ ವಿಚಾರದ ಬಗ್ಗೆ ಅವರು ಇತ್ತೀಚೆಗಿನ ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ.

‘ಭಾರತದಲ್ಲಿ ಹಲವಾರು ಧರ್ಮಗಳಿವೆ. ನಾನು ಚಿಕ್ಕವಳಾಗಿದ್ದಾಗ ಕಾನ್ವೆಂಟ್​ ಶಾಲೆಯಲ್ಲಿ ಓದಿದೆ. ಹಾಗಾಗಿ ನನಗೆ ಕ್ರಿಶ್ಚಿಯಾನಿಟಿ ಬಗ್ಗೆ ತಿಳಿದಿದೆ. ನನ್ನ ತಂದೆ ಮಸೀದಿಯಲ್ಲಿ ಹಾಡು ಹೇಳುತ್ತಿದ್ದರು. ಆದ್ದರಿಂದ ನನಗೆ ಇಸ್ಲಾಂ ಬಗ್ಗೆ ಗೊತ್ತಿದೆ. ನಾನು ಹಿಂದೂ ಕುಟುಂಬದಲ್ಲಿ ಬೆಳೆದವಳು. ಹಾಗಾಗಿ ಆ ಬಗ್ಗೆಯೂ ತಿಳಿದಿದೆ. ಅಧ್ಯಾತ್ಮ ಎಂಬುದು ಭಾರತದ ದೊಡ್ಡ ಭಾಗ. ಅದನ್ನು ನಾವು ನಿರ್ಲಕ್ಷಿಸುವಂತಿಲ್ಲ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಧರ್ಮಗಳ ಬಗ್ಗೆ ಪ್ರಿಯಾಂಕಾ ತಂದೆ ತಿಳಿವಳಿಕೆ ನೀಡಿದ್ದರಂತೆ. ಎಲ್ಲ ಧರ್ಮಗಳ ಕೂಡ ದೇವರ ಬಳಿಗೆ ನಮ್ಮನ್ನು ಕರೆದುಕೊಂಡು ಹೋಗುವ ಮಾರ್ಗಗಳು ಎಂದು ತಂದೆ ಹೇಳಿದ್ದನ್ನು ಪ್ರಿಯಾಂಕಾ ಈಗ ನೆನಪಿಸಿಕೊಂಡಿದ್ದಾರೆ. ತಮ್ಮ ಆತ್ಮ ಚರಿತ್ರೆ ‘ಅನ್​ಫಿನಿಶ್ಡ್​’ ಪ್ರಚಾರದ ಸಲುವಾಗಿ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಈ ವಿಷಯಗಳನ್ನು ಹೇಳಿಕೊಂಡಿದ್ದಾರೆ.

‘ನಾನು ಹಿಂದು. ಪ್ರಾರ್ಥನೆ ಮಾಡುತ್ತೇನೆ. ನನ್ನ ಮನೆಯಲ್ಲೇ ದೇವಸ್ಥಾನ ಇದೆ. ಸಾಧ್ಯವಾದಾಗಲೆಲ್ಲ ಪೂಜೆ ಮಾಡುತ್ತೇನೆ. ಒಂದು ದೊಡ್ಡ ಶಕ್ತಿ ಇದೆ ಎಂಬುದನ್ನು ನಾನು ನಂಬುತ್ತೇನೆ. ಅದರ ಬಗ್ಗೆ ನನಗೆ ಭರವಸೆ ಇದೆ’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಇನ್ನು, ಇತ್ತೀಚೆಗಷ್ಟೇ ಅವರು ಆಸ್ಕರ್​ಗೆ​ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಅನೌನ್ಸ್​ ಮಾಡಿ ದೊಡ್ಡಮಟ್ಟದಲ್ಲಿ ಸುದ್ದಿ ಆಗಿದ್ದರು. ಅವರ ‘ದಿ ವೈಟ್​ ಟೈಗರ್​’ ಸಿನಿಮಾ ಕೂಡ ಆಸ್ಕರ್​ ಕಣದಲ್ಲಿದೆ.

ಇದನ್ನೂ ಓದಿ: ಆಸ್ಕರ್​ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ! ಹಾಲಿವುಡ್​ ಮಂದಿ ಎದುರು ‘ದಿ ವೈಟ್​ ಟೈಗರ್​’ ಪೈಪೋಟಿ