ಕೊರೊನಾ ಸೋಂಕು ನಡುವೆಯೂ ನಿಲ್ಲದ ಶ್ರೀಗಳ ವ್ರತ, ಪೂಜೆ

ಕೊರೊನಾ ಸೋಂಕು ನಡುವೆಯೂ ನಿಲ್ಲದ ಶ್ರೀಗಳ ವ್ರತ, ಪೂಜೆ

ಉಡುಪಿ: ಇತಿಹಾಸ ಪ್ರಸಿದ್ಧ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸದ್ಯ ಕೋವಿಡ್-19 ನಿಂದ ಬಳಲುತ್ತಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳು ಚಿಕಿತ್ಸೆಯ ಜೊತೆಗೆ ತಮ್ಮ ನಿರಂತರ ಅನುಷ್ಠಾನಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟಮಠದ ಯತಿಗಳು ತಮ್ಮ ಯತಿಧರ್ಮದ ಪಾಲನೆಗೆ ವಿಶೇಷ ಮಹತ್ವ ನೀಡುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ, ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಸದ್ಯ ಭಕ್ತರ ಗಮನ ಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು […]

KUSHAL V

| Edited By:

Jul 26, 2020 | 2:13 AM

ಉಡುಪಿ: ಇತಿಹಾಸ ಪ್ರಸಿದ್ಧ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸದ್ಯ ಕೋವಿಡ್-19 ನಿಂದ ಬಳಲುತ್ತಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳು ಚಿಕಿತ್ಸೆಯ ಜೊತೆಗೆ ತಮ್ಮ ನಿರಂತರ ಅನುಷ್ಠಾನಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಷ್ಟಮಠದ ಯತಿಗಳು ತಮ್ಮ ಯತಿಧರ್ಮದ ಪಾಲನೆಗೆ ವಿಶೇಷ ಮಹತ್ವ ನೀಡುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ, ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಸದ್ಯ ಭಕ್ತರ ಗಮನ ಸೆಳೆದಿದೆ.

ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಶಾಖಾ ಮಠಗಳನ್ನು ಹೊಂದಿರುವ ಪುತ್ತಿಗೆ ಮಠದ ಶ್ರೀಗಳು ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದರು. ವ್ರತಸ್ಥರಾಗಿದ್ದ ವೇಳೆ ಸ್ವಾಮೀಜಿಗೆ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿದ್ದು ಪರೀಕ್ಷೆಗೆ ಒಳಗಾಗಿದ್ದರು.

ಇದೀಗ ಪಾಸಿಟಿವ್ ಬಂದ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಪೂಜೆ, ಜಪ ಮತ್ತು ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋ ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಶ್ರೀಗಳು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಭಕ್ತರು ಹಾರೈಸುತ್ತಿದ್ದಾರೆ. -ಹರೀಶ್ ಪಾಲೆಚ್ಚಾರ್

Follow us on

Related Stories

Most Read Stories

Click on your DTH Provider to Add TV9 Kannada