AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ತೋಟದಲ್ಲಿ ಬೇಟೆಗಾಗಿ ಹೊಂಚು ಹಾಕಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಚಿಕ್ಕಮಗಳೂರು: ಮನೆಯೊಂದರ ಪಕ್ಕದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡು ಜನರು ಬೆಚ್ಚಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೈದಾಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಶ್ರೀನಿವಾಸಗೌಡ ಎಂಬುವವರ ಕಾಫಿ ತೋಟದಲ್ಲಿದ್ದ ಹೆಬ್ಬಾವನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಹೆಬ್ಬಾವನ್ನ ಕಂಡು ತೋಟದ ಮಾಲೀಕ ಶ್ರೀನಿವಾಸಗೌಡ ಉರಗ ತಜ್ಞ ರಿಜ್ವಾನ್ ಎಂಬುವವರಿಗೆ ಸುದ್ದಿ ಮುಟ್ಟಿಸಿದ್ರು. ಆ ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ರಿಜ್ವಾನ್, ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿದ್ರು. ಸೆರೆ ಸಿಕ್ಕ ಹೆಬ್ಬಾವನ್ನು ಮುಟ್ಟಿ ಸ್ಥಳೀಯರು ಅಚ್ಚರಿಪಟ್ಟರು. […]

ಕಾಫಿ ತೋಟದಲ್ಲಿ ಬೇಟೆಗಾಗಿ ಹೊಂಚು ಹಾಕಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ
KUSHAL V
| Edited By: |

Updated on: Oct 31, 2020 | 11:20 AM

Share

ಚಿಕ್ಕಮಗಳೂರು: ಮನೆಯೊಂದರ ಪಕ್ಕದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡು ಜನರು ಬೆಚ್ಚಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೈದಾಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಶ್ರೀನಿವಾಸಗೌಡ ಎಂಬುವವರ ಕಾಫಿ ತೋಟದಲ್ಲಿದ್ದ ಹೆಬ್ಬಾವನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು.

ಹೆಬ್ಬಾವನ್ನ ಕಂಡು ತೋಟದ ಮಾಲೀಕ ಶ್ರೀನಿವಾಸಗೌಡ ಉರಗ ತಜ್ಞ ರಿಜ್ವಾನ್ ಎಂಬುವವರಿಗೆ ಸುದ್ದಿ ಮುಟ್ಟಿಸಿದ್ರು. ಆ ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ರಿಜ್ವಾನ್, ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿದ್ರು. ಸೆರೆ ಸಿಕ್ಕ ಹೆಬ್ಬಾವನ್ನು ಮುಟ್ಟಿ ಸ್ಥಳೀಯರು ಅಚ್ಚರಿಪಟ್ಟರು. ಇನ್ನೂ ಕೆಲವರು ಹೆಬ್ಬಾವಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ರು.

ಸುಮಾರು 14 ಅಡಿ ಉದ್ದವಿದ್ದ ಹೆಬ್ಬಾವು, ಕಳೆದೆರಡು ದಿನಗಳಿಂದ ಅದೇ ಸ್ಥಳದಲ್ಲಿ ಮೊಕ್ಕಾಂ ಹೂಡಿತು. ಯಾವುದೋ ಬೇಟೆಯನ್ನು ಹೊಂಚು ಹಾಕಿ ಹಸಿವಿನಿಂದ ಮಲಗಿರಬಹುದು ಎಂದು ಉರಗ ತಜ್ಞ ರಿಜ್ವಾನ್ ಅಭಿಪ್ರಾಯಪಟ್ಟರು. ಕೊನೆಗೆ, ಸೆರೆ ಹಿಡಿದ ಹೆಬ್ಬಾವನ್ನು ಕುದುರೆಮುಖ ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಕಳಸದ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಹಾಜರಿದ್ದರು.