AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಕೆಂಡ್ ಹ್ಯಾಂಡ್ ಕಾರ್​ ವ್ಯಾಪಾರಿಯ ಅಪಹರಣ, ಕೊಲೆ

ಕಲಬುರಗಿ: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ನಗರದ ಯಾದುಲ್ಲಾ ಕಾಲೋನಿ ನಿವಾಸಿ ಮೊಹಮ್ಮದ್ ಗೌಸುದ್ದೀನ್(42) ಎಂದು ತಿಳಿದುಬಂದಿದೆ. ಗೌಸುದ್ದೀನ್ ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್​ ಡೀಲರ್​ ಆಗಿದ್ದನು. ಅಕ್ಟೋಬರ್​ 22ರಂದು ನಾಪತ್ತೆಯಾಗಿದ್ದ ಮೊಹಮ್ಮದ್ ಗೌಸುದ್ದೀನ್​ನ ಶವ ನಿನ್ನೆ ಕುರಿಕೋಟಾ ಬ್ರಿಡ್ಜ್ ಬಳಿ ಪತ್ತೆಯಾಗಿದೆ. ಗೌಸುದ್ದೀನ್ ಪಾರ್ಟ್ನರ್‌ಗಳಾದ ಫಯಾಜ್, ನಿಜಾಮ್ ಮತ್ತು ವಾಜಿದ್ ವಿರುದ್ಧ ಅಪಹರಣ ಮತ್ತು ಕೊಲೆಯ ಆರೋಪ ಕೇಳಿಬಂದಿದೆ. ಸದ್ಯ, ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೋಜಾ […]

ಸೆಕೆಂಡ್ ಹ್ಯಾಂಡ್ ಕಾರ್​ ವ್ಯಾಪಾರಿಯ ಅಪಹರಣ, ಕೊಲೆ
KUSHAL V
|

Updated on: Oct 31, 2020 | 10:27 AM

Share

ಕಲಬುರಗಿ: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ನಗರದ ಯಾದುಲ್ಲಾ ಕಾಲೋನಿ ನಿವಾಸಿ ಮೊಹಮ್ಮದ್ ಗೌಸುದ್ದೀನ್(42) ಎಂದು ತಿಳಿದುಬಂದಿದೆ. ಗೌಸುದ್ದೀನ್ ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್​ ಡೀಲರ್​ ಆಗಿದ್ದನು. ಅಕ್ಟೋಬರ್​ 22ರಂದು ನಾಪತ್ತೆಯಾಗಿದ್ದ ಮೊಹಮ್ಮದ್ ಗೌಸುದ್ದೀನ್​ನ ಶವ ನಿನ್ನೆ ಕುರಿಕೋಟಾ ಬ್ರಿಡ್ಜ್ ಬಳಿ ಪತ್ತೆಯಾಗಿದೆ.

ಗೌಸುದ್ದೀನ್ ಪಾರ್ಟ್ನರ್‌ಗಳಾದ ಫಯಾಜ್, ನಿಜಾಮ್ ಮತ್ತು ವಾಜಿದ್ ವಿರುದ್ಧ ಅಪಹರಣ ಮತ್ತು ಕೊಲೆಯ ಆರೋಪ ಕೇಳಿಬಂದಿದೆ. ಸದ್ಯ, ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.