ಮಾಣೆಕ್‌ ಷಾ ಗ್ರೌಂಡ್‌ನಲ್ಲಿ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ.. 500 ಜನರಿಗೆ ಮಾತ್ರ ಅವಕಾಶ

ಕಳೆದ 15ದಿನಗಳಿಂದ ಮಾಣೆಕ್‌ ಷಾ ಮೈದಾನದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. KSRP, CAR, ಹೋಂಗಾರ್ಡ್ಸ್, ಟ್ರಾಫಿಕ್ ವಾರ್ಡನ್ಸ್, ಅರೆಸೇನಾ ಪಡೆ ಸೇರಿದಂತೆ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಭದ್ರತೆಯಲ್ಲಿ ನಿಯೋಜನೆಗೊಂಡಿದ್ದಾರೆ.

ಮಾಣೆಕ್‌ ಷಾ ಗ್ರೌಂಡ್‌ನಲ್ಲಿ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ.. 500 ಜನರಿಗೆ ಮಾತ್ರ ಅವಕಾಶ
ಮಾಣೆಕ್ ‌ಷಾ ಪರೇಡ್ ಗ್ರೌಂಡ್‌ (ಸಂಗ್ರಹ ಚಿತ್ರ)
Ayesha Banu

| Edited By: Lakshmi Hegde

Jan 24, 2021 | 12:52 PM

ಬೆಂಗಳೂರು: ಜನವರಿ 26ರಂದು ಮಾಣೆಕ್‌ ಷಾ ಗ್ರೌಂಡ್‌ನಲ್ಲಿ ನಡೆಯುವ ಅದ್ಧೂರಿ ಗಣರಾಜ್ಯೋತ್ಸವಕ್ಕೆ ಈ ಬಾರಿ ಬ್ರೇಕ್ ಹಾಕಲಾಗಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇವಲ 500 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಮಾಣೆಕ್‌ ಷಾ ಮೈದಾನದಲ್ಲಿ ಪೊಲೀಸ್ ಸರ್ಪಗಾವಲು ಕಳೆದ 15ದಿನಗಳಿಂದ ಮಾಣೆಕ್‌ ಷಾ ಮೈದಾನದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. KSRP, CAR, ಹೋಂಗಾರ್ಡ್ಸ್, ಟ್ರಾಫಿಕ್ ವಾರ್ಡನ್ಸ್, ಅರೆಸೇನಾ ಪಡೆ ಸೇರಿದಂತೆ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಭದ್ರತೆಯಲ್ಲಿ ನಿಯೋಜನೆಗೊಂಡಿದ್ದಾರೆ. ಹೆಚ್ಚುವರಿಯಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಡಿ-ಸ್ವಾಟ್, RIV ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ, ಆ್ಯಂಬುಲೆನ್ಸ್ ಹಾಗೂ ಮೈದಾನದ ಬಳಿ ಗರುಡ ಪಡೆಯೂ ನಿಯೋಜನೆಗೊಂಡಿದೆ. ಇದರ ಜೊತೆಗೆ ಕಾರ್ಯಾಕ್ರಮದ ವೇಳೆ ಮಫ್ತಿಯಲ್ಲೂ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಸೂಕ್ಷ್ಮ ವಿರುವ ಸ್ಥಳವಾಗಿರುವುದರಿಂದ ಮೈದಾನದ ಸುತ್ತ ಮುತ್ತ ಸಿಸಿಟಿವಿ ಕಣ್ಗಾವಲು ಇರಲಿದೆ.

ಮಾಣೆಕ್‌ ಷಾ ಮೈದಾನದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರು, ಅತಿ ಗಣ್ಯರು, ಮಿಲಿಟರಿ, BSF, ಹಿರಿಯ ಅಧಿಕಾರಿಗಳು, ಮಾಧ್ಯಮಗಳಿಗೆ ಮಾತ್ರ ಪ್ರವೇಶವಿರುತ್ತದೆ. ಪಾಸ್ ಹೊಂದಿದ್ದ 500 ವ್ಯಕ್ತಿಗಳಿಗೆ ಮಾತ್ರ ಪ್ರವೇಶ.

ಮಾಸ್ಕ್, ದೈಹಿಕ ಅಂತರ ಪಾಲಿಸುವುದು ಕಡ್ಡಾಯ ಬೆಳಗ್ಗೆ 8.40ರೊಳಗೆ ಎಲ್ಲರೂ ಮೈದಾನಕ್ಕೆ ಬಂದಿರಬೇಕು. ಮಾಸ್ಕ್, ದೈಹಿಕ ಅಂತರ ಪಾಲಿಸುವುದು ಕಡ್ಡಾಯ. ಅನಗತ್ಯ ಲಗೇಜ್, ಯಾವುದೇ ವಸ್ತುಗಳನ್ನ ತರುವಂತಿಲ್ಲ. ಅನುಮಾನಾಸ್ಪದ ವಸ್ತು ಕಂಡು ಬಂದರೆ ಕೂಡಲೇ ಸ್ಥಳದಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಬೇಕು. ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ಹರಿತವಾದ ವಸ್ತು, ಚಾಕು, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸು, ಮದ್ಯದ ಬಾಟಲ್, ಮಾದಕವಸ್ತುಗಳು, ನೀರಿನ ಬಾಟಲ್, ಬಾವುಟಗಳು, ಶಸ್ತ್ರಾಸ್ತ್ರ, ಪಟಾಕಿ ಯಾವುದೇ ಸ್ಫೋಟಕ ವಸ್ತುಗಳನ್ನು ತರುವಂತಿಲ್ಲ.

ಈ ಬಾರಿ ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada