ನನ್ನ ಗೆಲುವು ನಿಶ್ಚಿತ -ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಆತ್ಮವಿಶ್ವಾಸ
ಮೈಸೂರು: ನನಗೆ ಗೆಲ್ಲುವ ಆತ್ಮವಿಶ್ವಾಸ ಇದೆ. ಶೇಕಡಾವಾರು ಮತದಾನ ಕಡಿಮೆ ಆಯ್ತೆಂಬ ಕಾರಣಕ್ಕೆ ಈ ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ. ಜನರು ನನಗೆ ತೋರಿಸಿದ ಪ್ರೀತಿಯಿಂದ ಈ ವಿಶ್ವಾಸ ಮೂಡಿದೆ. ನಿಷ್ಪಕ್ಷಪಾತ ಚುನಾವಣೆ ನಡೆದಿದೆ. ನಾವೂ ಇದನ್ನೆ ಬಯಸಿದ್ದೆವು ಎಂದು ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ. ಆರ್.ಆರ್.ನಗರ ಉಪಚುನಾವಣೆ ಫಲಿತಾಂಶ ಘೋಷಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಚಾಮುಂಡೇಶ್ವರಿಯ ದರ್ಶನ ಪಡೆದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ತಂದೆ ಹನುಮಂತರಾಯಪ್ಪ ಹಾಗೂ ತಮ್ಮ ತಾಯಿ […]
ಮೈಸೂರು: ನನಗೆ ಗೆಲ್ಲುವ ಆತ್ಮವಿಶ್ವಾಸ ಇದೆ. ಶೇಕಡಾವಾರು ಮತದಾನ ಕಡಿಮೆ ಆಯ್ತೆಂಬ ಕಾರಣಕ್ಕೆ ಈ ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ. ಜನರು ನನಗೆ ತೋರಿಸಿದ ಪ್ರೀತಿಯಿಂದ ಈ ವಿಶ್ವಾಸ ಮೂಡಿದೆ. ನಿಷ್ಪಕ್ಷಪಾತ ಚುನಾವಣೆ ನಡೆದಿದೆ. ನಾವೂ ಇದನ್ನೆ ಬಯಸಿದ್ದೆವು ಎಂದು ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ. ಆರ್.ಆರ್.ನಗರ ಉಪಚುನಾವಣೆ ಫಲಿತಾಂಶ ಘೋಷಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಚಾಮುಂಡೇಶ್ವರಿಯ ದರ್ಶನ ಪಡೆದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ತಂದೆ ಹನುಮಂತರಾಯಪ್ಪ ಹಾಗೂ ತಮ್ಮ ತಾಯಿ ಜೊತೆಗೂಡಿ ದೇವಿಯ ದರ್ಶನ ಪಡೆದರು. ಕುಸುಮಾಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ಕೊಟ್ಟರು.
‘ಸಿದ್ದರಾಮಯ್ಯ ಸಾಹೇಬ್ರು, ಶಿವಕುಮಾರ್ ಅಣ್ಣ ಮಾರ್ಗದರ್ಶನ ಚೆನ್ನಾಗಿತ್ತು’ ಎಲ್ಲಾ ಪಕ್ಷದ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಗೆಲುವು ನಿಶ್ಚಿತ. ಚುನಾವಣೆ ಬಳಿಕ ಉಳಿದ ಎಲ್ಲಾ ಮಾಹಿತಿಯನ್ನ ಜನರಿಗೆ ಹೇಳುತ್ತೇನೆ ಎಂದು ದೇವಿಯ ದರ್ಶನದ ಬಳಿಕ ಕುಸುಮಾ ಹೇಳಿದರು. ಸಿದ್ದರಾಮಯ್ಯ ಸಾಹೇಬರು, ಶಿವಕುಮಾರ್ ಅಣ್ಣ ಮಾರ್ಗದರ್ಶನ ಚೆನ್ನಾಗಿತ್ತು. ಚುನಾವಣೆಗೆ ಮಾತ್ರ ನಾನು ಸೀಮಿತವಾಗುವುದಿಲ್ಲ. ಚುನಾವಣೆ ನಂತರವೂ ನಾನು ಕ್ಷೇತ್ರದ ಜನರ ಜೊತೆ ಇರುತ್ತೇನೆ ಎಂದು ಕುಸುಮಾ ಹೇಳಿದರು.