10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌

  • TV9 Web Team
  • Published On - 16:24 PM, 25 Aug 2020
10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌

ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ‌ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್‌ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ಗಿಮಿಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೌದು ರಷ್ಯಾದ ಯುಟ್ಯೂಬರ್‌ ಮ್ಯಾಕಿಮ್‌ ಮೊನಖೋವ್‌ ಎನ್ನುವ ವ್ಯಕ್ತಿ 10 ಸಾವಿರ ಲೀಟರ್‌ ಕೋಕಾಕೋಲಾ ಪಾನೀಯಕ್ಕೆ ಅಡುಗೆ ಸೋಡಾ ಸೇರಿಸಿ ಬೃಹತ್‌ ಸ್ಫೋಟವನ್ನುಂಟು ಮಾಡಿದ್ದಾನೆ. ಹೀಗೆ ಸ್ಫೋಟಗೊಂಡಿದ್ದನ್ನು 20 ನಿಮಿಷ ಕಾಲ ವಿಡಿಯೋ ಮಾಡಿದ್ದಾನೆ. ಹೀಗೆ ಮಾಡಿದ ವಿಡಿಯೋವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದು, ಇದನ್ನು ಇದುವರೆಗೆ ಬರೊಬ್ಬರಿ ಆರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.
ಇದಕ್ಕಾಗಿ ಮ್ಯಾಕ್ಸಿಮ್‌ 9 ಸಾವಿರ ಡಾಲರ್‌ ಹಣ ಖರ್ಚು ಮಾಡಿದ್ದು ನಾಲ್ಕು ವರ್ಷಗಳ ಕಾಲ ಶ್ರಮ ಹಾಕಿದ್ದಾನೆ. ಸೋಮವಾರ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಆದ ನಂತರ ಇದಕ್ಕೆ ಬರೋಬ್ಬರಿ 1.6 ಮಿಲಿಯನ್‌ ಲೈಕ್ಸ್‌ ಕೂಡಾ ಬಂದಿವೆ.

ಈ ಬಗ್ಗೆ ಯುಟ್ಯೂಬ್‌ನಲ್ಲಿ ಕಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬರು ನಾಲ್ಕು ವರ್ಷ 9 ಸಾವಿರ ಡಾಲರ್‌ ಖರ್ಚು ಮಾಡುವುದಕ್ಕಿಂತ ಒಂದು ಲೀಟರ್‌ ಕೋಕಾ ಕೋಲಾ ಹಾಗೂ ಸ್ವಲ್ಪ ಅಡುಗೆ ಸೋಡಾ ಹಾಕಿ ಮನೆಯಲ್ಲಿಯೇ ಮಿನಿ ಸ್ಫೋಟ ಮಾಡಿ ಥ್ರಿಲ್‌ ಪಡೆಯಬಹುದು ಎಂದು ಕಮೆಂಟ್‌ ಕೂಡಾ ಮಾಡಿದ್ದಾರೆ.