
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಸ್ಟಾರ್ ನಟರಾಗಿರುವ ಇಬ್ಬರು ಸಹೋದರರಿಗೂ ಡ್ರಗ್ಸ್ ನಂಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಸಹೋದರರು ಡ್ರಗ್ಸ್ ಕೇಸ್ನಲ್ಲಿ ಶಾಮೀಲು ಆಗಿದ್ದಾರಂತೆ.
ಸಿಂಥಟಿಕ್ ಡ್ರಗ್ ಟ್ಯಾಬ್ಲೆಟ್ ಸೇವಿಸುತ್ತಿದ್ದರು!
ಸಿಂಥಟಿಕ್ ಡ್ರಗ್ ಟ್ಯಾಬ್ಲೆಟ್ (Synthetic drugs) ಸೇವಿಸುತ್ತಿದ್ದ ಆ ಸಹೋದರರು ಫಾರ್ಮ್‌ಹೌಸ್ ಅನ್ನು ಡ್ರಗ್ಸ್ ಸೇವಿಸುವ ಅಡ್ಡಾ ಮಾಡಿಕೊಂಡಿದ್ರು. ಸಣ್ಣಪುಟ್ಟ ನಟ, ನಟಿಯರು, ಸ್ನೇಹಿತರು ಸಹ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.