ಬೆಂಕಿ ಹಚ್ಚಿಕೊಂಡು ರೈತನ ಆತ್ಮಹತ್ಯೆ

ಕಲಬುರಗಿ: ಅನ್ನದಾತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 48 ವರ್ಷದ ಬಸವರಾಜ್ ಕೊನೆಯುಸಿರೆಳೆದ ರೈತ. ಬಸವರಾಜ್, ಖಾಸಗಿಯಾಗಿ ಮತ್ತು ಬ್ಯಾಂಕ್​ನಲ್ಲಿ ಆರು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ ಬೆಳೆ ಹಾಳಾದ ಹಿನ್ನೆಲೆಯಲ್ಲಿ ನೊಂದಿದ್ದ ರೈತ ಅನ್ಯ ಮಾರ್ಗ ಕಾಣದೆ ಇಹಲೋಕ ತ್ಯಜಿಸಿದ್ದಾರೆ. ಸೇಡಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿ ಹಚ್ಚಿಕೊಂಡು ರೈತನ ಆತ್ಮಹತ್ಯೆ
Edited By:

Updated on: Oct 08, 2020 | 12:22 PM

ಕಲಬುರಗಿ: ಅನ್ನದಾತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 48 ವರ್ಷದ ಬಸವರಾಜ್ ಕೊನೆಯುಸಿರೆಳೆದ ರೈತ.

ಬಸವರಾಜ್, ಖಾಸಗಿಯಾಗಿ ಮತ್ತು ಬ್ಯಾಂಕ್​ನಲ್ಲಿ ಆರು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ ಬೆಳೆ ಹಾಳಾದ ಹಿನ್ನೆಲೆಯಲ್ಲಿ ನೊಂದಿದ್ದ ರೈತ ಅನ್ಯ ಮಾರ್ಗ ಕಾಣದೆ ಇಹಲೋಕ ತ್ಯಜಿಸಿದ್ದಾರೆ. ಸೇಡಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:14 pm, Thu, 8 October 20