‘ನಾನು ಡಿ.ಕೆ. ರವಿ ಪತ್ನಿಯೂ ಹೌದು ಹನುಮಂತರಾಯಪ್ಪನ ಮಗಳು ಹೌದು, ಅರಿತುಕೊಳ್ಳಿ’
ಬೆಂಗಳೂರು: ಶಿರಾ ಮತ್ತು R.R.ನಗರ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ R.R.ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಡಿಕೆ ರವಿ ಕುಟುಂಬಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಈಗ ನಾನು ಡಿ.ಕೆ.ರವಿ ಪತ್ನಿ ಅವರ ಹೆಸರಿಗೆ ಕಳಂಕ ಬರದೇ ಇರವ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಟಿವಿ9ಗೆ R.R.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿಕೆ ನೀಡಿದ್ದಾರೆ. ನಾನು ಡಿ.ಕೆ.ರವಿ ಪತ್ನಿಯೂ ಹೌದು ಹನುಮಂತರಾಯಪ್ಪನ ಮಗಳು ಹೌದು. […]

ಬೆಂಗಳೂರು: ಶಿರಾ ಮತ್ತು R.R.ನಗರ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ R.R.ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಡಿಕೆ ರವಿ ಕುಟುಂಬಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಈಗ ನಾನು ಡಿ.ಕೆ.ರವಿ ಪತ್ನಿ ಅವರ ಹೆಸರಿಗೆ ಕಳಂಕ ಬರದೇ ಇರವ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಟಿವಿ9ಗೆ R.R.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿಕೆ ನೀಡಿದ್ದಾರೆ.
ನಾನು ಡಿ.ಕೆ.ರವಿ ಪತ್ನಿಯೂ ಹೌದು ಹನುಮಂತರಾಯಪ್ಪನ ಮಗಳು ಹೌದು. ಮೊದಲಿಂದಲೂ ರಾಜಕೀಯ ನೋಡಿಕೊಂಡು ಬಂದಿದ್ದೇನೆ. ಯುವಕರು, ವಿದ್ಯಾವಂತರು ರಾಜಕೀಯಕ್ಕೆ ಬರಬೇಕು. ಹೀಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ.
ನನ್ನ ಅತ್ತೆ ಗೌರಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಅವರು ಮೊದಲಿನಿಂದಲೂ ಹೀಗೆ ಹೇಳುತ್ತಾ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ವಿಚಾರ ಚರ್ಚೆ ಹಾಗೂ ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ. ಒಂದು ಹೆಣ್ಣಿನ ಚಾರಿತ್ರ್ಯಹರಣ ವಾಗುತ್ತಿದೆ ಎಂದು ಕುಸುಮಾ ಪ್ರತಿಕ್ರಿಯಿಸಿದ್ದಾರೆ.
Published On - 12:34 pm, Thu, 8 October 20




