ಪ್ರೀತಿ ಎಂಬ ಮಾಯೆಯಲ್ಲಿ.. ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆಗೈದ ಪತ್ನಿ!
ಚಾಮರಾಜನಗರ: ಪ್ರೀತಿ ಅನ್ನೋದು ಮಾಯೆ. ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರೇಮಿಗಳು ಯಾವ ಮಟ್ಟಕ್ಕಾದ್ರು ಇಳಿತಾರೆ ಅನ್ನುವುದಕ್ಕೇ ಈ ಘಟನೆಯೇ ಸಾಕ್ಷಿ. ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆಗೈದ ಭೀಕರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜು ನಾಯಕ್ ಹತ್ಯೆಯಾದ ವ್ಯಕ್ತಿ. ರಾಘವಪುರ ಗ್ರಾಮದ ನಿವಾಸಿ ನಾಗರಾಜು ನಾಯಕ್ ತೊಂಡವಾಡಿ ಗ್ರಾಮದ ನಿವಾಸಿ ಪದ್ಮ ಎಂಬ ಯುವತಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪದ್ಮಳಿಗೆ ಮಣಿಕಂಠ ಎಂಬುವವನ ಜೊತೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಪತಿ ಇದ್ದರೆ […]

ಚಾಮರಾಜನಗರ: ಪ್ರೀತಿ ಅನ್ನೋದು ಮಾಯೆ. ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರೇಮಿಗಳು ಯಾವ ಮಟ್ಟಕ್ಕಾದ್ರು ಇಳಿತಾರೆ ಅನ್ನುವುದಕ್ಕೇ ಈ ಘಟನೆಯೇ ಸಾಕ್ಷಿ. ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆಗೈದ ಭೀಕರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜು ನಾಯಕ್ ಹತ್ಯೆಯಾದ ವ್ಯಕ್ತಿ.
ರಾಘವಪುರ ಗ್ರಾಮದ ನಿವಾಸಿ ನಾಗರಾಜು ನಾಯಕ್ ತೊಂಡವಾಡಿ ಗ್ರಾಮದ ನಿವಾಸಿ ಪದ್ಮ ಎಂಬ ಯುವತಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪದ್ಮಳಿಗೆ ಮಣಿಕಂಠ ಎಂಬುವವನ ಜೊತೆ ಪ್ರೇಮಾಂಕುರವಾಗಿತ್ತು.
ಹೀಗಾಗಿ ಪತಿ ಇದ್ದರೆ ತಮ್ಮ ಪ್ರೇಮಕ್ಕೆ ಅಡ್ಡಿಯಾಗುತ್ತೆ ಎಂದು ಪ್ರಿಯಕರ ಮಣಿಕಂಠ ಮತ್ತು ಪತ್ನಿ ಪದ್ಮ ಸೇರಿ ನಾಗರಾಜುನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ದೂರು ದಾಖಲಾದ 24 ಗಂಟೆಯೊಳಗೆ ಬೇಗೂರು ಪೊಲೀಸರು ಆರೋಪಿ ಪದ್ಮ ಮತ್ತು ಪ್ರಿಯಕರ ಮಣಿಕಂಠನನ್ನು ಬಂಧಿಸಿದ್ದಾರೆ.

Published On - 11:40 am, Thu, 8 October 20




