AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷರ ವಿನ್ಯಾಸದಲ್ಲಿಯೇ ಭಾವನೆ ಬಿಂಬಿಸುವ ಕೈಚಳಕ: ಕನ್ನಡಕ್ಕೂ ಕಾಲಿಟ್ಟ ‘ಕ್ಯಾಲಿಗ್ರಾಮ್’

ನಿಮಗೆ ಕನ್ನಡ ಓದಲು ಗೊತ್ತಿಲ್ಲ ಎಂದಿಟ್ಟುಕೊಳ್ಳೋಣ. ಆದರೂ ಕನ್ನಡ ಪದ ನೋಡಿದ ತಕ್ಷಣ ಅದರ ಅರ್ಥ ಎನೆಂದು ತಿಳಿಯುತ್ತೆ. ಇದೊಂಥರಾ ಶಬ್ದಚಿತ್ರ ಅಥವಾ ಚಿತ್ರಶಬ್ದ. ನೋಡಿದಾಕ್ಷಣ ಅರಿಯಬಹುದಾದ ಲಕ್ಷಣವೇ ಈ ಪದಗಳ ವಿಶೇಷ. ಇದು ಬೇರೇನೂ ಅಲ್ಲ ಕ್ಯಾಲಿಗ್ರಾಮ್. ಇಂಗ್ಲಿಷ್​ನಲ್ಲಿ ಪ್ರಚಲಿತವಾಗಿರುವ ಈ ಕಲೆ ಈಗ ಕನ್ನಡದಲ್ಲೂ ಬೆಳೆಯುತ್ತಿದೆ, ಬೆಳಗುತ್ತಿದೆ ಎನ್ನುವುದು ವಿಶೇಷ. ಕನ್ನಡದ ಸೃಜನಶೀಲ ಮನಸ್ಸೊಂದು ಲಾಕ್​ಡೌನ್​ನಲ್ಲಿ ಖಾಲಿ ಕೂರದೇ ಏನಾದರೂ ಮಾಡಬೇಕು, ತನ್ನಿಷ್ಟದ ವಿನ್ಯಾಸ ಕ್ಷೇತ್ರದಲ್ಲಿ ಏನಾದರೂ ಹೊಸತು ಸಾಧಿಸಬೇಕು ಎಂದು ಹೊರಟ ಪ್ರಯತ್ನದ […]

ಅಕ್ಷರ ವಿನ್ಯಾಸದಲ್ಲಿಯೇ ಭಾವನೆ ಬಿಂಬಿಸುವ ಕೈಚಳಕ: ಕನ್ನಡಕ್ಕೂ ಕಾಲಿಟ್ಟ ‘ಕ್ಯಾಲಿಗ್ರಾಮ್’
Skanda
|

Updated on:Dec 26, 2020 | 2:45 PM

Share

ನಿಮಗೆ ಕನ್ನಡ ಓದಲು ಗೊತ್ತಿಲ್ಲ ಎಂದಿಟ್ಟುಕೊಳ್ಳೋಣ. ಆದರೂ ಕನ್ನಡ ಪದ ನೋಡಿದ ತಕ್ಷಣ ಅದರ ಅರ್ಥ ಎನೆಂದು ತಿಳಿಯುತ್ತೆ. ಇದೊಂಥರಾ ಶಬ್ದಚಿತ್ರ ಅಥವಾ ಚಿತ್ರಶಬ್ದ. ನೋಡಿದಾಕ್ಷಣ ಅರಿಯಬಹುದಾದ ಲಕ್ಷಣವೇ ಈ ಪದಗಳ ವಿಶೇಷ. ಇದು ಬೇರೇನೂ ಅಲ್ಲ ಕ್ಯಾಲಿಗ್ರಾಮ್. ಇಂಗ್ಲಿಷ್​ನಲ್ಲಿ ಪ್ರಚಲಿತವಾಗಿರುವ ಈ ಕಲೆ ಈಗ ಕನ್ನಡದಲ್ಲೂ ಬೆಳೆಯುತ್ತಿದೆ, ಬೆಳಗುತ್ತಿದೆ ಎನ್ನುವುದು ವಿಶೇಷ. ಕನ್ನಡದ ಸೃಜನಶೀಲ ಮನಸ್ಸೊಂದು ಲಾಕ್​ಡೌನ್​ನಲ್ಲಿ ಖಾಲಿ ಕೂರದೇ ಏನಾದರೂ ಮಾಡಬೇಕು, ತನ್ನಿಷ್ಟದ ವಿನ್ಯಾಸ ಕ್ಷೇತ್ರದಲ್ಲಿ ಏನಾದರೂ ಹೊಸತು ಸಾಧಿಸಬೇಕು ಎಂದು ಹೊರಟ ಪ್ರಯತ್ನದ ಫಲವೇ ವೈವಿಧ್ಯಮಯ ಸರಣಿಗಳಲ್ಲಿ ಹೊರಬಂದ ಕನ್ನಡ ಕ್ಯಾಲಿಗ್ರಾಮ್. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶಾಶ್ವತ್ ಹೆಗ್ಡೆ ತ್ಯಾಗ್ಲಿ ಅವರಿಗೆ ವಿನ್ಯಾಸಗಳ ಮೇಲೆ ಹೆಚ್ಚು ಆಸಕ್ತಿ. ‘ಡಿಸೈನಿಗ’ ಹೆಸರಲ್ಲಿ ಲೋಗೊ ವಿನ್ಯಾಸ ಮಾಡುತ್ತಿದ್ದ ಅವರಿಗೆ ಲಾಕ್​ಡೌನ್ ಹೊಸ ಅವಕಾಶ ಸೃಷ್ಟಿಸಿತು.

ಏನಿದು ಕ್ಯಾಲಿಗ್ರಾಮ್? ಬಹುತೇಕ ಶಬ್ದಗಳಿಗೆ ಭಾವವಿರುತ್ತದೆ ಅಥವಾ ಅವು ಯಾವುದೋ ಒಂದು ಕೆಲಸವನ್ನು ಸೂಚಿಸುತ್ತವೆ. ಆ ಕ್ರಿಯೆ, ಭಾವವನ್ನು ಪದಗಳಲ್ಲಿ ಚಿತ್ರಿಸುವುದೇ ಕ್ಯಾಲಿಗ್ರಾಮ್. ಉದಾಹರಣೆಗೆ ‘ದೂರ’ ಎಂಬ ಪದವನ್ನು ಶಾಶ್ವತ್ ಹೆಗಡೆ ಕ್ಯಾಲಿಗ್ರಾಮ್​ನಲ್ಲಿ ಬರೆಯುವಾಗ ‘ಊ’ ಅಕ್ಷರದ ವಿನ್ಯಾಸದಲ್ಲೇ ಅದರ ಅರ್ಥವನ್ನು ಬಿಂಬಿಸುತ್ತಾರೆ. ಅಂತೆಯೇ, ಜಾರುಬಂಡಿ ಪದದ ‘ಜಾ’ ಅಕ್ಷರದ ದೀರ್ಘದಲ್ಲೇ ಉಳಿದ ಅಕ್ಷರಗಳು ಜಾರುವ ಮೂಲಕ ಶಬ್ದವೇ ಚಿತ್ರವಾಗಿದೆ. ‘ಮಲಗು’ ಪದದಲ್ಲಿ ಪದವೇ ಮಲಗಿದಂತೆ ಭಾಸವಾಗುತ್ತದೆ. ‘ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ..ಹೀಗೆ ಒಂದಕ್ಕಿಂತ ಒಂದು ವಿಭಿನ್ನ.

ಕನ್ನಡದಲ್ಲಿ ಕ್ಯಾಲಿಗ್ರಾಮ್ ನೋಡೋಕೆ ಖುಷಿ ಇಂಗ್ಲೀಷ್​ನಲ್ಲಿ ಹಿಂದಿನಿಂದಲೂ ಕ್ಯಾಲಿಗ್ರಾಮ್​ಗಳಿದ್ದವು. ಕನ್ನಡದಲ್ಲೂ ಕೆಲವರು ಈ ಪ್ರಯತ್ನ ಮಾಡಿದ್ದರಾದರೂ ಅಷ್ಟು ಯಶಸ್ಸು ಕಂಡಿರಲಿಲ್ಲ. ಅಲ್ಲದೇ ಸತತವಾಗಿ ಒಂದು ಥೀಮ್​ ಅಧರಿಸಿ ಯಾರೂ ಈ ಪ್ರಯತ್ನ ಮಾಡಿರಲಿಲ್ಲ. ಲಾಕ್​ಡೌನ್​ ಅವಧಿಯಲ್ಲಿ ಮಾಡಿದ ಕೆಲ ವಿನ್ಯಾಸಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈಗ ಹಲವರು ಕನ್ನಡ ಕ್ಯಾಲಿಗ್ರಾಮ್ ರಚಿಸುತ್ತಿದ್ದಾರೆ. ಹೆಚ್ಚು ಕ್ಯಾಲಿಗ್ರಾಮ್​ ವಿನ್ಯಾಸಗಳು ಬಂದಷ್ಟೂ ಖುಷಿ ಹೆಚ್ಚಾಗುತ್ತದೆ ಎಂದು ಶಾಶ್ವತ್ ಹೆಗ್ಡೆ ಟಿವಿ9 ಡಿಜಿಟಲ್​ನೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಕ್ಯಾಲಿಗ್ರಾಮ್ ರಚನೆ ಅಷ್ಟು ಸುಲಭವಲ್ಲ! ಪದಗಳ ಅರ್ಥ ವ್ಯತ್ಯಾಸವಾಗದಂತೆ ಕ್ಯಾಲಿಗ್ರಾಮ್ ರಚಿಸುವುದು ಅಷ್ಟು ಸುಲಭವಲ್ಲ. ಕೇವಲ ಚಿತ್ರಕ್ಕೇ ಒತ್ತು ನೀಡಿದರೆ ಪದವನ್ನು ಓದಲಾಗದು. ಅಕ್ಷರ ಮತ್ತು ಚಿತ್ರದ ನಡುವೆ ಹದವಾದ ಬೆಸುಗೆ ಕೂಡಿದರೆ ಮಾತ್ರ ಕ್ಯಾಲಿಗ್ರಾಮ್ ರಚಿಸಬಹುದು. ಇದು ಕ್ಯಾಲಿಗ್ರಾಮ್ ರಚನೆಕಾರರಿಗೆ ಸವಾಲು ಕೂಡ. ಇದುವರೆಗೆ ಶಾಶ್ವತ್ ಹೆಗಡೆ ಹಲವು ಥೀಮ್​ಗಳಲ್ಲಿ ಕ್ಯಾಲಿಗ್ರಾಮ್ ವಿನ್ಯಾಸ ಮಾಡಿದ್ದಾರೆ. ಕನ್ನಡ ಅಂಕಿಗಳು, ಕ್ರಿಯಾಪದಗಳು, ಕರ್ನಾಟಕದ ಹೆಮ್ಮೆಯ ರಾಜರು, ಪ್ರಸಿದ್ಧ ಕಂಪನಿಗಳು, ಪ್ರಾಣಿಗಳು ಹೀಗೆ ವಿವಿಧ ವಿನ್ಯಾಸದಿಂದ ಕೂಡಿದ ವೈವಿಧ್ಯಮಯ ಕ್ಯಾಲಿಗ್ರಾಮ್​ಗಳು ಜನಪ್ರಿಯವಾಗಿವೆ. ಕನ್ನಡವನ್ನು ಇತರ ಭಾಷಿಕರಿಗೆ ಕಲಿಸಲು ಕ್ಯಾಲಿಗ್ರಾಮ್ ಪರಿಣಾಮಕಾರಿ ವಿಧಾನವೂ ಆಗಿದೆ.

ಹಲವರ ಮೆಚ್ಚುಗೆ ಶಾಶ್ವತ್ ಅವರ ಕೆಲ ಕ್ಯಾಲಿಗ್ರಾಮ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಬ್ಬ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವಗಳು ಬಂದರೆ ವಿಶೇಷ ಥೀಮ್​ನಲ್ಲಿ ಬೆಳಕು ಕಾಣುವ ಅವರ ಕನ್ನಡ ಕ್ಯಾಲಿಗ್ರಾಮ್​ಗಾಗಿ ಎದುರು ನೋಡುವವರ ಸಂಖ್ಯೆಯೂ ಹೆಚ್ಚಿದೆ. ‘ಇತರ ಭಾಷಿಕರಿಗೆ, ಕಾರ್ಪೊರೇಟ್ ವಲಯಕ್ಕೆ ಕನ್ನಡ ಕಲಿಯಲು ಕ್ಯಾಲಿಗ್ರಾಮ್​ ಪ್ರೇರಣೆಯಾದರೆ ತನ್ನ ಶ್ರಮ ಸಾರ್ಥಕ ಎನ್ನುವ ಶಾಶ್ವತ್ ಹೆಗ್ಡೆ, ಕನ್ನಡ ಕ್ಯಾಲಿಗ್ರಾಮ್ ವಿನ್ಯಾಸ ಕಲಿಯಲು ಬಯಸುವ ಆಸಕ್ತರಿಗೆ ತಾನು ಕಲಿಸಲು ಸಿದ್ಧನಿದ್ದೇನೆ ಎನ್ನುತ್ತಾರೆ. ಆಸಕ್ತರು ಅವರನ್ನು ಈ ಮೂಲಕ ಸಂಪರ್ಕಿಸಬಹುದು, ಮೊಬೈಲ್: 7019310914, ಇ-ಮೇಲ್: shashu.hegde01@gmail.com -ಗುರುಗಣೇಶ್​ ಭಟ್​

Published On - 9:22 am, Tue, 24 November 20

ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್