TB ಜಯಚಂದ್ರಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಸೂಚಿಸಿತ್ತು: ಬಾಯಿಬಿಟ್ಟಿ ಡಿ.ಕೆ ಶಿವಕುಮಾರ್

ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಒಳ ಕುದಿ ಇದೀಗ ಬಹಿರಂಗವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ನಡೆದಿರುವ ಈ ಸಂಭಾಷಣೆ ಇದೀಗ ಇದಕ್ಕೆ ಪುಷ್ಟಿ ನೀಡಿದೆ. ಟಿ.ಬಿ ಜಯಚಂದ್ರಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಸೂಚನೆ ನೀಡಿತ್ತು ಎಂದು ವರಿಷ್ಠರ ಸೂಚನೆ ಬಗ್ಗೆ ಡಿ.ಕೆ ಶಿವಕುಮಾರ್ ಬಾಯಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಜೊತೆ ಅನೌಪಚಾರಿಕ ಮಾತುಕತೆ ವೇಳೆ ಅವರ ಕಿವಿಯಲ್ಲಿ ಶಿವಕುಮಾರ್​ ಹೇಳಿದ್ದಾರೆ. ಒಂಬತ್ತು ಬಾರಿ ಒಬ್ಬರಿಗೆ […]

TB ಜಯಚಂದ್ರಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಸೂಚಿಸಿತ್ತು: ಬಾಯಿಬಿಟ್ಟಿ ಡಿ.ಕೆ ಶಿವಕುಮಾರ್
Updated By: KUSHAL V

Updated on: Oct 08, 2020 | 6:08 PM

ತುಮಕೂರು: ಶಿರಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಒಳ ಕುದಿ ಇದೀಗ ಬಹಿರಂಗವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ನಡೆದಿರುವ ಈ ಸಂಭಾಷಣೆ ಇದೀಗ ಇದಕ್ಕೆ ಪುಷ್ಟಿ ನೀಡಿದೆ.

ಟಿ.ಬಿ ಜಯಚಂದ್ರಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಸೂಚನೆ ನೀಡಿತ್ತು ಎಂದು ವರಿಷ್ಠರ ಸೂಚನೆ ಬಗ್ಗೆ ಡಿ.ಕೆ ಶಿವಕುಮಾರ್ ಬಾಯಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಜೊತೆ ಅನೌಪಚಾರಿಕ ಮಾತುಕತೆ ವೇಳೆ ಅವರ ಕಿವಿಯಲ್ಲಿ ಶಿವಕುಮಾರ್​ ಹೇಳಿದ್ದಾರೆ.

ಒಂಬತ್ತು ಬಾರಿ ಒಬ್ಬರಿಗೆ ನೀಡಿದ್ದಿರಾ? ನಿಮಗೆ ಕಾಮನ್ ಸೆನ್ಸ್ ಇಲ್ವಾ? ಅಂತಾ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೇವಾಲಾ ಡಿ.ಕೆ ಶಿವಕುಮಾರ್​ಗೆ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ರಾಜೇಶ್ ಗೌಡಗೆ ಟಿಕೆಟ್ ನೀಡುವಂತೆ ಸುರ್ಜೇವಾಲಾ  ಸೂಚಿಸಿದ್ದಾಗಿ ಶಿವಕುಮಾರ್​ ಸಿದ್ದರಾಮಯ್ಯಗೆ ಹೇಳಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಆದರೆ ನಾವು ಕುಳಿತು ಮಾತನಾಡಿದ್ವಿ. ಹಾಗೆಲ್ಲ ಮಾಡೋಕೆ ಆಗಲ್ಲ ಅಂತಾ ಸುರ್ಜೇವಾಲಾಗೆ ಡಿ.ಕೆ ಶಿವಕುಮಾರ್  ತಿಳಿಸಿದ್ದಾರಂತೆ. ಈ ಮಧ್ಯೆ ರಾಜೇಶ್ ಗೌಡ ಆಗಲೇ ಬಿಜೆಪಿಗೆ ಹೋಗಿದ್ದಾನೆ. ಅವನು ನಾಮ್​ ಕಾ ವಾಸ್ತೆ ಮಾತ್ರ ಇಲ್ಲಿದ್ದ ಎಂದು ಸಿದ್ದರಾಮಯ್ಯ ಹೇಳಿದ್ದಾರಂತೆ. ಆಗಲ್ಲ, ಆಗಲ್ಲ, ಹಾಗೆಲ್ಲಾ ಮಾಡೋಕೆ ಆಗಲ್ಲ ಅಂತಾ ಸಿದ್ದರಾಮಯ್ಯ ಸಹ ದನಿಗೂಡಿಸಿದ್ದಾರೆ ಎಂದು ಹೇಳಲಾಗಿದೆ.