LIC ಮಾರಾಟ ಮಾಡೋ ದುಃಸ್ಥಿತಿಗೆ ಬಂದಿದೆ ದೇಶ -ಸಿದ್ದರಾಮಯ್ಯ

|

Updated on: Feb 01, 2020 | 5:31 PM

ಮೈಸೂರು: ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್‌ ಟಿಂಕರಿಂಗ್‌ ಬಜೆಟ್‌. ನಾವೆಲ್ಲ ತೀರ ಕಷ್ಟ ಬಂದಾಗ ತಾಳಿಯನ್ನು ಮಾರುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರ LIC ಷೇರು ಮಾರಾಟಕ್ಕೆ ಮುಂದಾಗಿದೆ. ಎಲ್‌ಐಸಿ ಷೇರು ಮಾರುವ ಸ್ಥಿತಿ ಈಗ ದೇಶಕ್ಕೆ ಬಂದಿದೆ. ನಿರ್ಮಲಾ ಸೀತಾರಾಮನ್ ಓರ್ವ ವಿಫಲ ವಿತ್ತ ಸಚಿವೆ. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಶಿಸ್ತೇ ಕಾಣಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ್ರೋಹಿಗಳಿಗೆ ಸರಿಯಾದ ಶಿಕ್ಷೆ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ […]

LIC ಮಾರಾಟ ಮಾಡೋ ದುಃಸ್ಥಿತಿಗೆ ಬಂದಿದೆ ದೇಶ -ಸಿದ್ದರಾಮಯ್ಯ
Follow us on

ಮೈಸೂರು: ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್‌ ಟಿಂಕರಿಂಗ್‌ ಬಜೆಟ್‌. ನಾವೆಲ್ಲ ತೀರ ಕಷ್ಟ ಬಂದಾಗ ತಾಳಿಯನ್ನು ಮಾರುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರ LIC ಷೇರು ಮಾರಾಟಕ್ಕೆ ಮುಂದಾಗಿದೆ. ಎಲ್‌ಐಸಿ ಷೇರು ಮಾರುವ ಸ್ಥಿತಿ ಈಗ ದೇಶಕ್ಕೆ ಬಂದಿದೆ. ನಿರ್ಮಲಾ ಸೀತಾರಾಮನ್ ಓರ್ವ ವಿಫಲ ವಿತ್ತ ಸಚಿವೆ. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಶಿಸ್ತೇ ಕಾಣಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ್ರೋಹಿಗಳಿಗೆ ಸರಿಯಾದ ಶಿಕ್ಷೆ:
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಇದು ಪಕ್ಷದ್ರೋಹಿಗಳಿಗೆ ಸರಿಯಾದ ಶಿಕ್ಷೆಯಾಗಿದೆ. ಪಕ್ಷಾಂತರ ಮಾಡಿದ್ದವರಿಗೆ ಇಂತಹ ಶಿಕ್ಷೆಯಾಗಬೇಕು. ನನ್ನ ಪ್ರಕಾರ ಅವರು ಅತಂತ್ರರಾಗಿರುವುದು ಸರಿಯಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ವಿಶ್ವನಾಥ್ ಪುಸ್ತಕದ ಬಗ್ಗೆ ವ್ಯಂಗ್ಯ:
ಆಪರೇಷನ್ ಕಮಲದ ಬಗ್ಗೆ ಹೆಚ್.ವಿಶ್ವನಾಥ್ ಪುಸ್ತಕ ಬರೆಯಲಿ, ಅವರು ದೊಡ್ಡ ಬರಹಗಾರರು. ಅವರು ಪುಸ್ತಕ ಬರೆದರೆ ನಾವು ಓದೋಣ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಇವರೇ ಪಕ್ಷ ಬಿಟ್ಟುಹೋಗಿ ಇವರೇನು ಪುಸ್ತಕ ಬರೆಯೋದು. ನೀನು ಶುದ್ಧವಾಗಿದ್ರೆ ಇನ್ನೂಬ್ಬರ ಬಗ್ಗೆ ಆರೋಪ ಮಾಡಬಹುದು, ಇವರೇ ಸರಿಯಿಲ್ಲ ಅಂದ್ರೆ ಏನ್ ಬರೆಯೋದು. ಯಾರ್ಯಾರು ಎಷ್ಟು ದುಡ್ಡು ತಗೊಂಡಿದ್ದಾರೆ ಅಂತಾನು ಬರೆಯೋಕೆ ಹೇಳಿ ಎಂದು ವ್ಯಂಗ್ಯವಾಡಿದರು.