‘ಮಾಂಸ ತಿಂದ್ರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?.. ನನ್ನ ವಿರುದ್ಧ ಏನು ವ್ಯಾಖ್ಯಾನಗಳು !’

ನನ್ನಿಷ್ಟ ನೀನು ಯಾವನ್ ಕೇಳಕ್ಕೆ ನಾನು ತಿಂತೀನಿ ಅಂದೆ. ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು! ಎಲ್ಲರಿಗೂ ನಾನೊಬ್ಬನೇ ಟೀಕೆ ಮಾಡಲು ಸಿಕ್ಕಿರುವುದು ಎಂದು ಕಡೂರಲ್ಲಿ ಸಿದ್ದರಾಮಯ್ಯ ಹೇಳಿದರು.

‘ಮಾಂಸ ತಿಂದ್ರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?.. ನನ್ನ ವಿರುದ್ಧ ಏನು ವ್ಯಾಖ್ಯಾನಗಳು !’
ಸಿದ್ದರಾಮಯ್ಯ
Follow us
KUSHAL V
|

Updated on:Jan 07, 2021 | 7:38 PM

ಚಿಕ್ಕಮಗಳೂರು: ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ಏನು, ನನ್ನ ವಿರುದ್ಧ ಟೀಕೆ ಮಾಡಿದ್ದೇ ಮಾಡಿದ್ದು ಎಂದು ಜಿಲ್ಲೆಯ ಕಡೂರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ, ಜೆಡಿಎಸ್​​ನವರು ಎಲ್ಲರೂ ನನ್ನ ಮೇಲೆ ಬೀಳ್ತಾರೆ. ನಾನೊಬ್ಬನೇ ಸಿಕ್ಕಿರುವುದು ಎಲ್ಲರಿಗೂ ಟೀಕೆ ಮಾಡಲು. ಬಿಜೆಪಿಯವ್ರು ಗೋಮಾಂಸ ನಿಷೇಧ ಕಾಯ್ದೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸವನ್ನು ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿಂತೀನಿ ಅಂದಿದ್ದೆ. ನನ್ನಿಷ್ಟ ನೀನು ಯಾವನ್ ಕೇಳಕ್ಕೆ ನಾನು ತಿಂತೀನಿ ಅಂದೆ. ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು! ಎಲ್ಲರಿಗೂ ನಾನೊಬ್ಬನೇ ಟೀಕೆ ಮಾಡಲು ಸಿಕ್ಕಿರುವುದು ಎಂದು ಕಡೂರಲ್ಲಿ ಸಿದ್ದರಾಮಯ್ಯ ಹೇಳಿದರು.

ಚುನಾವಣೆಯಲ್ಲಿ ಓಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದೊಯ್ದ. ಅವತ್ತು ಕೋಳಿ ಮಾಡಿದ್ರು, ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ. ಅದಕ್ಕೆ, ಹನುಮಂತ ಹುಟ್ಟಿದ್ದು ಯಾರಿಗೆ ಗೊತ್ತು, ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು, ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ? ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು ಟೀಕೆ ಮಾಡಲು ಎಂದು ಸಹ ಹೇಳಿದರು.

ಹನುಮಂತ ಜಯಂತಿ ದಿನ ನಾಟಿ ಕೋಳಿ ತಿಂದು ಆಂಜನೇಯಸ್ವಾಮಿ ಬರ್ತ್ ಸರ್ಟಿಫಿಕೇಟ್ ಕೇಳಿದ ಸಿದ್ದರಾಮಯ್ಯ

Published On - 7:35 pm, Thu, 7 January 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ