2ಎಕರೆ 31ಗುಂಟೆಗಾಗಿ.. ಕ್ರೂಸರ್ನಿಂದ ಗುದ್ದಿಸಿ, ಮಚ್ಚಿನಿಂದ ಕೊಚ್ಚಿ ಮಾವನ ಕೊಲೆಗೈದ ಅಳಿಯ
ಯಾದಗಿರಿ: 2 ಎಕರೆ 31 ಗುಂಟೆ ಜಮೀನಿಗಾಗಿ ವ್ಯಕ್ತಿಯೊಬ್ಬನನ್ನು ಆತನ ಅಳಿಯನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ತಡರಾತ್ರಿ ರಂಗಯ್ಯ(55) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಂಗಯ್ಯನ ಅಳಿಯ ಶರಣಗೌಡ ಮತ್ತು ಆತನ ಸೋದರ ವಿಠ್ಠಲ್ ಈ ಕೃತ್ಯ ಎಸಗಿದ ಆರೋಪಿಗಳು. ಮಾವ ರಂಗಯ್ಯನ ಆಸ್ತಿ ಲಪಟಾಯಿಸಲು ಶರಣಗೌಡ ಮೊದಲು ಆತನಿಗೆ ಕ್ರೂಸರ್ನಿಂದ ಡಿಕ್ಕಿ ಹೊಡೆಸಿ ಬಳಿಕ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ. ನಂತರ, ಇವರಿಬ್ಬರೂ ಪೊಲೀಸರಿಗೆ ಶರಣಾಗಿದ್ದಾರೆ. ಹತ್ಯೆಯಾದ […]

ಪ್ರಾತಿನಿಧಿಕ ಚಿತ್ರ
ಯಾದಗಿರಿ: 2 ಎಕರೆ 31 ಗುಂಟೆ ಜಮೀನಿಗಾಗಿ ವ್ಯಕ್ತಿಯೊಬ್ಬನನ್ನು ಆತನ ಅಳಿಯನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ತಡರಾತ್ರಿ ರಂಗಯ್ಯ(55) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ರಂಗಯ್ಯನ ಅಳಿಯ ಶರಣಗೌಡ ಮತ್ತು ಆತನ ಸೋದರ ವಿಠ್ಠಲ್ ಈ ಕೃತ್ಯ ಎಸಗಿದ ಆರೋಪಿಗಳು. ಮಾವ ರಂಗಯ್ಯನ ಆಸ್ತಿ ಲಪಟಾಯಿಸಲು ಶರಣಗೌಡ ಮೊದಲು ಆತನಿಗೆ ಕ್ರೂಸರ್ನಿಂದ ಡಿಕ್ಕಿ ಹೊಡೆಸಿ ಬಳಿಕ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ. ನಂತರ, ಇವರಿಬ್ಬರೂ ಪೊಲೀಸರಿಗೆ ಶರಣಾಗಿದ್ದಾರೆ.
ಹತ್ಯೆಯಾದ ರಂಗಯ್ಯ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ನಿವಾಸಿ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:31 pm, Thu, 26 November 20