ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣ: ಮಣಿಪುರದ Spa ಯುವತಿ ಆಸ್ಕಾ ಅರೆಸ್ಟ್
ಮಂಗಳೂರು: ಡ್ಯಾನ್ಸರ್ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಹಿನ್ನೆಲೆಯಲ್ಲಿ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ ಎಂಬ ಯುವತಿ ಅರೆಸ್ಟ್ ಆದವಳು. ಬಂಧಿತ ಯುವತಿ ಆಸ್ಕಾ ಮೂಲತಃ ಮಣಿಪುರದವರು. ಕೊರೊನಾ ಲಾಕ್‌ಡೌನ್ ವೇಳೆ ಕಿಶೋರ್ ಜತೆ ಆಸ್ಕಾ ಡ್ರಗ್ಸ್ ಪಾರ್ಟಿ ಮಾಡಿದ್ದಳು ಎಂದು ತಿಳಿದುಬಂದಿದೆ. ಈಕೆಯನ್ನು ಬಂಧಿಸಿ ಡ್ರಗ್ಸ್ ಟೆಸ್ಟ್ ಮಾಡಿಸಿದ್ದ ಪೊಲೀಸರು, ಟೆಸ್ಟ್‌ನಲ್ಲಿ ಯುವತಿ ಆಸ್ಕಾ ಡ್ರಗ್ಸ್ […]

ಮಂಗಳೂರು: ಡ್ಯಾನ್ಸರ್ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಹಿನ್ನೆಲೆಯಲ್ಲಿ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ ಎಂಬ ಯುವತಿ ಅರೆಸ್ಟ್ ಆದವಳು. ಬಂಧಿತ ಯುವತಿ ಆಸ್ಕಾ ಮೂಲತಃ ಮಣಿಪುರದವರು. ಕೊರೊನಾ ಲಾಕ್‌ಡೌನ್ ವೇಳೆ ಕಿಶೋರ್ ಜತೆ ಆಸ್ಕಾ ಡ್ರಗ್ಸ್ ಪಾರ್ಟಿ ಮಾಡಿದ್ದಳು ಎಂದು ತಿಳಿದುಬಂದಿದೆ. ಈಕೆಯನ್ನು ಬಂಧಿಸಿ ಡ್ರಗ್ಸ್ ಟೆಸ್ಟ್ ಮಾಡಿಸಿದ್ದ ಪೊಲೀಸರು, ಟೆಸ್ಟ್‌ನಲ್ಲಿ ಯುವತಿ ಆಸ್ಕಾ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಈಕೆ ಜತೆ ಡ್ರಗ್ಸ್ ತೆಗೆದುಕೊಂಡಿದ್ದವರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಯುವತಿಯರ ಜೊತೆ ಕಿಶೋರ್ ಸಹ ಡ್ರಗ್ಸ್ ಪಾರ್ಟಿ ಮಾಡಿದ್ದ ಎಂಬುದು ಗಮನಾರ್ಹ.
Published On - 9:28 am, Tue, 22 September 20