ರವಿಶಂಕರ ಆಶ್ರಮ ಕೊವಿಡ್ ಸೆಂಟರ್ ಸಿಬ್ಬಂದಿ, ಸೋಂಕಿತರಿಂದ ಪ್ರತಿಭಟನೆ: ಕಾರಣವೇನು?
ಬೆಂಗಳೂರು: ಕೊವಿಡ್ ಕೇರ್ ಸೆಂಟರ್ನ ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಿಂದಾಗಿ ರವಿಶಂಕರ್ ಆಶ್ರಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಸಿಬ್ಬಂದಿ ಗಲಾಟೆ ಮಾಡಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಆಶ್ರಮದಲ್ಲಿ ಕೊರೊನಾ ಸೋಂಕಿತರಿಗೆ ಕೊವಿಡ್ ಸೆಂಟರ್ ತೆರೆದಿದ್ದಾರೆ. ಆದರೆ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುವ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಬೇಸತ್ತ ಸಿಬ್ಬಂದಿ ವರ್ಗದವರು ಕೊವಿಡ್ ಸೆಂಟರ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಅದೇ ರವಿಶಂಕರ್ ಗುರೂಜಿ ಆಶ್ರಮದಲ್ಲಿರುವ ಕೊವಿಡ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಮಧ್ಯಾಹ್ನ ಊಟ […]
ಬೆಂಗಳೂರು: ಕೊವಿಡ್ ಕೇರ್ ಸೆಂಟರ್ನ ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಿಂದಾಗಿ ರವಿಶಂಕರ್ ಆಶ್ರಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಸಿಬ್ಬಂದಿ ಗಲಾಟೆ ಮಾಡಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಆಶ್ರಮದಲ್ಲಿ ಕೊರೊನಾ ಸೋಂಕಿತರಿಗೆ ಕೊವಿಡ್ ಸೆಂಟರ್ ತೆರೆದಿದ್ದಾರೆ.
ಆದರೆ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುವ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಬೇಸತ್ತ ಸಿಬ್ಬಂದಿ ವರ್ಗದವರು ಕೊವಿಡ್ ಸೆಂಟರ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಇನ್ನೊಂದೆಡೆ ಅದೇ ರವಿಶಂಕರ್ ಗುರೂಜಿ ಆಶ್ರಮದಲ್ಲಿರುವ ಕೊವಿಡ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಮಧ್ಯಾಹ್ನ ಊಟ ನೀಡಿಲ್ಲ, ಕೊವಿಡ್ ಸೆಂಟರ್ನಲ್ಲಿ ಸುಚಿತ್ವ ಇಲ್ಲ ಹಾಗೂ ಬಿಸಿನೀರಿನ ವ್ಯವಸ್ಥೆ ಮಾಡಿಲ್ಲವೆಂದು ಕೊರೊನಾ ಸೋಂಕಿತರು ಕೊವಿಡ್ ಸೆಂಟರ್ನಿಂದ ಹೊರಬಂದು ಪ್ರತಿಭಟನೆ ಮಾಡುತ್ತಿದ್ದಾರೆ.