ವಿರಾಟ್ -ಡಿವಿಲಿಯರ್ಸ್ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದಿದ್ದು ಯಾರು?

ಆರ್​ಸಿಬಿ ತಂಡದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ಕ್ಯಾಪ್ಟನ್ ಕೊಹ್ಲಿ ಮಾಡುತ್ತಿದ್ದ ತಪ್ಪುಗಳನ್ನ ಬಿಚ್ಚಿಟ್ಟಿದ್ದಾರೆ. ವಿರಾಟ್ ಆರ್​ಸಿಬಿಯಲ್ಲಿ ಸರಿಯಾಗಿಲ್ಲದ ಆಟಗಾರರನ್ನ ಬೆಂಬಲಿಸಿದ್ದೇ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ. ಬೌಲಿಂಗ್ ಮಾಡಲೂ ಸಿದ್ಧ ಆರ್​ಸಿಬಿ ತಂಡಕ್ಕೆ ಅಗತ್ಯ ಬಿದ್ರೆ ನಾನು ಬೌಲಿಂಗ್ ಮಾಡೋದಕ್ಕೆ ಸಿದ್ಧ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ನಾನೇನು ಉತ್ತಮ ಬೌಲರ್ ಅಲ್ಲದಿದ್ರೂ, ಆಗಾಗ ಬೌಲಿಂಗ್ ಮಾಡಲು ರೆಡಿಯಾಗಿದ್ದೇನೆ ಎಂದಿದ್ದಾರೆ. ಯುಎಇಗೆ ಹೊಂದಿಕೊಳ್ಳೋದು ಸವಾಲು ಯುಎಇನಲ್ಲಿ ಬಿಸಿ ವಾತಾವರಣದ ಪರಿಸ್ಥಿತಿಗೆ ಹೊಂದಿಕೊಳ್ಳೋದು ಎಲ್ಲಾ ತಂಡಗಳಿಗೆ ದೊಡ್ಡ ಸವಾಲು […]

ವಿರಾಟ್ -ಡಿವಿಲಿಯರ್ಸ್ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದಿದ್ದು ಯಾರು?
ತವರು ಮೈದಾನದಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 20 ಶತಕಗಳನ್ನು ಗಳಿಸಿದ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆಯನ್ನು 3 ಏಕದಿನ ಸರಣಿಯಲ್ಲಿ ಕೇವಲ 1 ಶತಕ ಬಾರಿಸುವುದರೊಂದಿಗೆ ಸಮನಾಗಿಸಲಿದ್ದಾರೆ.

Updated on: Sep 18, 2020 | 2:35 PM

ಆರ್​ಸಿಬಿ ತಂಡದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ಕ್ಯಾಪ್ಟನ್ ಕೊಹ್ಲಿ ಮಾಡುತ್ತಿದ್ದ ತಪ್ಪುಗಳನ್ನ ಬಿಚ್ಚಿಟ್ಟಿದ್ದಾರೆ. ವಿರಾಟ್ ಆರ್​ಸಿಬಿಯಲ್ಲಿ ಸರಿಯಾಗಿಲ್ಲದ ಆಟಗಾರರನ್ನ ಬೆಂಬಲಿಸಿದ್ದೇ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ.

ಬೌಲಿಂಗ್ ಮಾಡಲೂ ಸಿದ್ಧ
ಆರ್​ಸಿಬಿ ತಂಡಕ್ಕೆ ಅಗತ್ಯ ಬಿದ್ರೆ ನಾನು ಬೌಲಿಂಗ್ ಮಾಡೋದಕ್ಕೆ ಸಿದ್ಧ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ನಾನೇನು ಉತ್ತಮ ಬೌಲರ್ ಅಲ್ಲದಿದ್ರೂ, ಆಗಾಗ ಬೌಲಿಂಗ್ ಮಾಡಲು ರೆಡಿಯಾಗಿದ್ದೇನೆ ಎಂದಿದ್ದಾರೆ.

ಯುಎಇಗೆ ಹೊಂದಿಕೊಳ್ಳೋದು ಸವಾಲು
ಯುಎಇನಲ್ಲಿ ಬಿಸಿ ವಾತಾವರಣದ ಪರಿಸ್ಥಿತಿಗೆ ಹೊಂದಿಕೊಳ್ಳೋದು ಎಲ್ಲಾ ತಂಡಗಳಿಗೆ ದೊಡ್ಡ ಸವಾಲು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ. ಈ ಪರಿಸ್ಥಿತಿಗೆ ನಾನು ನಿಜವಾಗಿಯೂ ಹೊಂದಿಕೊಂಡಿಲ್ಲವೆಂದು ಎಬಿಡಿ ತಿಳಿಸಿದ್ದಾರೆ.

ಜಂಪಾಗೆ ಮೂರು ವಿಕೆಟ್
ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಸ್ಪಿನ್ನರ್ ಌಡಂ ಜಂಪಾ ಮ್ಯಾಜಿಕ್ ಮಾಡಿದ್ದಾರೆ. ಸರಣಿಯಲ್ಲಿ ಒಟ್ಟು 10ವಿಕೆಟ್ ಪಡೆದಿರೋ ಜಂಪಾ, ಆರ್​ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.

ಮಾರಿಸ್ ಜೊತೆ ಚಹಲ್ ಸ್ಟೆಪ್ಸ್
ಆರ್​ಸಿಬಿ ತಂಡದ ಸ್ಪಿನ್ನರ್ ಯಜ್ವಿಂದರ್ ಚಹಲ್, ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಕ್ರಿಸ್ ಮಾರಿಸ್ ಜೊತೆಗೆ, ಹಿಂದಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಚಹಲ್ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ
ಆರ್​​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಎಬಿಡಿ, ಪಾರ್ಥಿವ್ ಪಟೇಲ್ ಸೇರಿದಂತೆ ಆಟಗಾರರು ಕ್ಯಾಚ್ ಪ್ರಾಕ್ಟೀಸ್ ಮಾಡಿದ್ದಾರೆ. ಈ ವೇಳೆ ಕೊಹ್ಲಿ ಡೈವ್ ಹೊಡೆದು ಹಿಡಿದ ಕ್ಯಾಚ್ ಅದ್ಭುತವಾಗಿತ್ತು.

ಕೊಹ್ಲಿಗೆ ಶಾಕ್ ಕೊಟ್ಟ ಚಹಲ್
ಆರ್​ಸಿಬಿ ಆಟಗಾರರು ಗುರುವಾರ ಅಭ್ಯಾಸ ಪಂದ್ಯವನ್ನಾಡಿದ್ರು. ಕೊಹ್ಲಿ ನಾಯಕತ್ವ ಮತ್ತು ಚಹಲ್ ನಾಯಕತ್ವದಲ್ಲಿ ನಡೆದ ಪಂದ್ಯದಲ್ಲಿ, ಚಹಲ್ ಪಡೆ ಕ್ಯಾಪ್ಟನ್ ಕೊಹ್ಲಿ ಬಳಗಕ್ಕೆ ಶಾಕ್ ನೀಡಿದೆ.

ಆರಂಭಿಕರಾಗಿ ಕೊಹ್ಲಿ, ಎಬಿಡಿ
ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದು, ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಬೊಂಬಾಟ್ ಬ್ಯಾಟಿಂಗ್ ಮಾಡಿದ ಧೋನಿ
ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಪ್ರಾಕ್ಟೀಸ್ ಮ್ಯಾಚ್ ಆಡಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬೊಂಬಾಟ್ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಧೋನಿಗಾಗಿ ಅಭಿಮಾನಿಗಳ ಕಾತರ
ಮುಂಬೈ ಚೆನ್ನೈ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಎಲ್ಲರ ಕಣ್ಣು ಧೋನಿ ಮೇಲಿರಲಿದೆ. ವರ್ಷದ ಬಳಿಕ ಧೋನಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.