
ಹಾಸನ: ಎಡದಂಡೆ ನಾಲೆಯಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಅರಗಲ್ಲು ಗ್ರಾಮದ ಹಾರಂಗಿ ಎಡದಂಡೆಯಲ್ಲಿ ನಡೆದಿದೆ. ವಿಜಯ್(5), ವಿನಯ್(3), ದೀಕ್ಷಾ(2) ಮೃತ ಮಕ್ಕಳು.
ಚಿತ್ರದುರ್ಗ ಮೂಲದ ಚನ್ನಮ್ಮ ಮನೆಯಲ್ಲಿ ಜಗಳ ಮಾಡಿಕೊಂಡು ಹಾಸನಕ್ಕೆ ಬಂದಿದ್ದರು. ಈ ವೇಳೆ ಚನ್ನಮ್ಮನ ಜೊತೆ ಮೂವರು ಮಕ್ಕಳು ಸಹ ಬಂದಿದ್ರು. ಆದರೆ ಹಾರಂಗಿ ಎಡದಂಡೆಯಲ್ಲಿ ಮೂವರು ಮಕ್ಕಳ ಮೃತ ದೇಹ ಪತ್ತೆಯಾಗಿದ್ದು ತಾಯಿ ಚನ್ನಮ್ಮ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟಿದ್ದ ಕಾರಣ ಮಕ್ಕಳ ಜತೆ ತಾಯಿ ಚನ್ನಮ್ಮ ಕೂಡ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಸ್ಥಳಕ್ಕೆ ಕೊಣನೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.