ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?

| Updated By: Skanda

Updated on: Mar 13, 2021 | 7:05 AM

ತುಳಸಿ ಗಿಡವನ್ನು ಪೂಜೆ ಮಾಡಲು ಮನೆಯ ಮುಂದೆ ಇಡುವುದಷ್ಟೇ ಅಲ್ಲದೇ ಸೊಳ್ಳೆ ಇನ್ನಿತರ ಕೀಟಗಳು ಬಾರದಂತೆ ನೋಡಿಕೊಳ್ಳಲು ಮತ್ತು ವೈರಸ್‌ನಂತಹ ಇನ್ನೀತರ ಸೋಂಕು ಹರಡದಂತೆ ಹೋರಾಡಲು ಬಳಸಲಾಗುತ್ತದೆ. ಇನ್ನೂ ಕೊರೊನಾ ಕಾಲದಲ್ಲಂತೂ ತುಳಸಿ ಎಲೆಗಳ ರಸಗಳನ್ನು ಕುಡಿದು ಜನರು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?
ತುಳಸಿ ಗಿಡ
Follow us on

ಮನೆ ಅಂಗಳದಿ ಒಮ್ಮೆ ಇಣುಕಿ ನೋಡು ಎದುರಿಗೆ ಇದೆ ಹತ್ತಾರು ಗೀಡ ಮೂಲಿಕೆ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುವುದು ತುಳಸಿ ಗಿಡ ಸಾಮಾನ್ಯವಾಗಿ ತುಳಸಿ ಗಿಡ ಎಲ್ಲರ ಮನೆಯ ಮುಂಭಾಗದಲ್ಲಿ ಇರುತ್ತದೆ. ಅಲ್ಲದೆ ಹಿಂದೂ ಧರ್ಮದಲ್ಲಿ ತುಳಸಿಯನ್ನು ಪೂಜನೀಯವಾಗಿ ಕಾಣುತ್ತಾರೆ. ಆದರೆ ತುಳಸಿ ಗಿಡಕ್ಕೆ ನಿತ್ಯವೂ ಪೂಜೆ ಮಾಡುವುದನ್ನು ಬಿಟ್ಟರೆ, ಆ ಗಿಡದ ಎಲೆಗಳು ಆರೋಗ್ಯಕ್ಕೆ ಎಷ್ಟು ಒಳಿತು ಎನ್ನುವುದು ನೂರಕ್ಕೆ ಹತ್ತರಷ್ಟು ಜನರಿಗೆ ಗೊತ್ತಿರಬಹುದು ಅಷ್ಟೇ. ಹಾಗೀದ್ದರೆ ತುಳಸಿ ಎಲೆಯನ್ನು ಹಾಗೆ ತಿನ್ನಬಹುದಾ ತಿಂದರೆ ಅದರಿಂದ ಏನು ಲಾಭ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ತುಳಸಿ ಗಿಡದ ಇತಿಹಾಸ:
ತುಳಸಿ ಗಿಡಕ್ಕೆ ದೈವಿದತ್ತವಾದ ಶ್ರೇಷ್ಠ ತೆ ಇದ್ದು, ತುಳಸಿ ಗಿಡಕ್ಕೆ ವೃಂದಾ ಎಂದು ಕರೆಯುತ್ತಾರೆ. ಈ ಕಾರಣಕ್ಕೆ ತುಳಸಿ ಗಿಡಗಳು ಹೆಚ್ಚು ಇರುವ ಜಾಗವನ್ನು ವೃಂದಾವನ ಎಂದು ಕರೆಯಲಾಗುತ್ತದೆ. ಇನ್ನು ಮನೆಯ ಮುಂಭಾಗದಲ್ಲಿ ತುಳಸಿ ಗಿಡನೆಟ್ಟು ನಿತ್ಯವು ಅದಕ್ಕೆ ಪೂಜೆ ಮಾಡುವ ನೂರಾರು ಮಂದಿ ನಮ್ಮ ನಡುವೆ ಇದ್ದಾರೆ. ತುಳಸಿಯಲ್ಲಿ ಎರಡು ವಿಧಗಳಿವೆ ಒಂದು ರಾಮ ತುಳಸಿ ಇನ್ನೊಂದು ಕೃಷ್ಣ ತುಳಸಿ. ವಿಷ್ಣು ಮತ್ತು ಆಂಜನೇಯನಿಗೆ ತುಳಸಿ ಮಾಲೆ ಮಾಡಿ ಹಾಕಿದರೆ ಧನ ಪ್ರಾಪ್ತಿಯಾಗುತ್ತದೆ ಎನ್ನುವ ಮಾತು ಕೂಡ ಇದೆ.

ತುಳಸಿ ಮತ್ತು ಆರೋಗ್ಯ:
ತುಳಸಿಯ ಎಲೆಯನ್ನು ದಿನನಿತ್ಯ ಸೇವಿಸಿದರೆ ಕ್ಯಾನ್ಸರ್ ನಂತಹ ರೋಗಗಳು ದೂರವಾಗುತ್ತದೆ. ಇನ್ನೂ ತುಳಸಿಯ ಮಾಲೆಯನ್ನು ಧರಿಸುವುದರಿಂದ ರೋಗ ಮುಕ್ತರಾಗಬಹುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳು, ದೃಷ್ಟಿ ದೋಷ ದೂರವಾಗುತ್ತದೆ. ಇನ್ನು ಮಾನಸಿಕ ಯಾತನೆ ಮತ್ತು ಪಾಪದಿಂದ ಮುಕ್ತಿ ಪಡೆಯಬೇಕಾದರು ತುಳಸಿ ಮಾಲೆ ಧರಿಸಬೇಕು ಎಂಬ ಮಾತು ಕೂಡ ಇದೆ.

ತುಳಸಿ ಎಲೆಗಳು

ಮೊಡವೆ ಕಲೆಗಳ ನಿವಾರಣೆ:
ತುಳಸಿಯು ಸಾಮಾನ್ಯವಾಗಿ ಹದಿಹರೆಯದ ಯುವಕ-ಯುವತಿಯರ ಮೊಗದಲ್ಲಿ ಮೂಡುವ ಮೊಡವೆಗಳ ಕಲೆಯನ್ನು ದೂರ ಮಾಡುತ್ತದೆ. ಕಲೆಯಾದ ಕಡೆಗಳಲ್ಲಿ ತುಳಸಿಯ ನಾಲ್ಕೈದು ಎಲೆಗಳನ್ನು ಸಣ್ಣಗೆ ರುಬ್ಬಿ ಹಚ್ಚುವುದರಿಂದ ಕಪ್ಪು ಕಲೆಗಳನ್ನು ದೂರವಾಗುತ್ತದೆ ಮತ್ತು ಮುಖದಲ್ಲಿ ಹೊಳಪು ಹೆಚ್ಚುತ್ತದೆ. ಯುಜೆನೋಲ್ ಮತ್ತು ಉರ್ಸೋಲಿಕ್ ಅಸಿಡ್ ಸಂಯುಕ್ತಗಳು ಸಹ ಉದರದ ಹಾಗೆ ಮುಖದ ಹಾಗೂ ಇನ್ನಿತರ ಚರ್ಮದ ಸಮಸ್ಯೆಯೂ ಕೂಡ ಇದರಿಂದ ಕಡಿಮೆಯಾಗುತ್ತದೆ.

ತುಳಸಿ ಎಲೆಯ ಸೇವನೆ:
ಹೊಟ್ಟೆ ಹುಣ್ಣು, ಕ್ಯಾನ್ಸರ್, ಹೃದಯ ರೋಗ, ಸಂಧಿವಾತ, ಮಧುಮೇಹ, ನರದ ಸಮಸ್ಯೆ, ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳನ್ನು ದೂರ ಮಾಡುತ್ತದೆ. ಇನ್ನೂ ದೇಹದ ಸುಕ್ಕು ತಡೆಯಲು, ಆಮ್ಲಜನಕವನ್ನು ದೇಹಕ್ಕೆ ಸರಿಯಾಗಿ ಪೂರೈಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಉರಿಯೂತ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ತುಳಸಿ ರಾಮಬಾಣವಾಗಿದೆ.

ತುಳಸಿ ಗಿಡವನ್ನು ಪೂಜೆ ಮಾಡಲು ಮನೆಯ ಮುಂದೆ ಇಡುವುದಷ್ಟೇ ಅಲ್ಲದೇ ಸೊಳ್ಳೆ ಇನ್ನಿತರ ಕೀಟಗಳು ಬಾರದಂತೆ ನೋಡಿಕೊಳ್ಳಲು ಮತ್ತು ವೈರಸ್‌ನಂತಹ ಇನ್ನೀತರ ಸೋಂಕು ಹರಡದಂತೆ ಹೋರಾಡಲು ಬಳಸಲಾಗುತ್ತದೆ. ಇನ್ನೂ ಕೊರೊನಾ ಕಾಲದಲ್ಲಂತ್ತು ತುಳಸಿ ಎಲೆಗಳ ರಸಗಳನ್ನು ಕುಡಿದು ಜನರು ತಮ್ಮ ಆರೋಗ್ಯದ ಸ್ಥಿಮಿತತೆಯನ್ನು ಕಾಪಾಡಿಕೊಂಡಿದ್ದಾರೆ.

ಇನ್ನಿತರ ಸಮಸ್ಯೆಗಳಿಗೆ ಪರಿಹಾರ:
ರಕ್ತದಲ್ಲಿನ ಕೊಬ್ಬಿನ ಅಂಶಗಳನ್ನು ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದೆ. ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6ತಿಂಗಳು ಸೇವಿಸಿದರೆ ನೋವಿನ ಬಾಧೆ ಕಡಿಮೆಯಾಗುತ್ತದೆ. ಇನ್ನು ಜ್ವರ, ಕೆಮ್ಮು, ಟಿಬಿಯಂತಹ ಸಮಸ್ಯೆಗೆ ತುಳಸಿ ಎಲೆ ಶ್ರೇಷ್ಟವಾದದ್ದು, ತುಳಸಿ ರಸವನ್ನು ನೀರಿನೊಂದಿಗೆ ಬೆರಸಿ ದಿನವೂ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ. ಬರಿ ಹೊಟ್ಟೆಯಲ್ಲಿ ತುಳಸಿ ರಸ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ತುಳಸಿ ಎಲೆ, ಕರ್ಪೂರ, ಲವಂಗ ಸೇರಿಸಿ ಕುಟ್ಟಿ ಉಂಡೆ ರೂಪದಲ್ಲಿ ಮಾಡಿ ಹಲ್ಲು ನೋವಿದ್ದ ಜಾಗದಲ್ಲಿ ಇಟ್ಟರೆ ಹಲ್ಲು ನೋವು ಮಾಯವಾಗುತ್ತದೆ.

ಒಟ್ಟಾರೆಯಾಗಿ ಮನೆಯ ಅಂಗಳದಲ್ಲಿನ ತುಳಸಿ ಗಿಡದ ನಾಲ್ಕು ಎಲೆಗಳನ್ನು ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದು ಮಾತ್ರ ನಿಜ. ಸಮಸ್ಯೆ ಬಂದ ಮೇಲೆ ನೋವು ಪಡುವ ಬದಲು ಮುನ್ನೇಚ್ಚರಿಕೆಯಾಗಿ ಸರಳವಾದ ಈ ವಿಧಾನಗಳನ್ನು ಅನುಸರಿಸುವುದು ಸೂಕ್ತ.

ಇದನ್ನೂ ಓದಿ: ಮಹಿಳೆಯರೇ.., ಈ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಿಬಿಡಬಹದು; ಆರೋಗ್ಯದತ್ತ ಗಮನ ಇರಲಿ