ಲಾಕ್ಡೌನ್ ಸಮಯದಲ್ಲಿ ನಲುಗಿಹೋಗಿದ್ದ ಹಿರಿಜೀವಗಳಿಗೆ ನೆರವಾದ ಆಶ್ರಯ ಕೇಂದ್ರ
ತುಮಕೂರು: ಲಾಕ್ಡೌನ್ ವೇಳೆ ಅನೇಕ ಮಂದಿ ಅಕ್ಷರಶಃ ಕಂಗಾಲಾಗಿ ಹೋಗಿದ್ದರು. ಸಂಘ ಸಂಸ್ಥೆಗಳು ಅಂತಹವರಿಗೆ ಆಹಾರ ನೀಡಿ ಸಂತೈಸಿದ್ದರು. ಅದೇ ರೀತಿ ತುಮಕೂರು ನಗರಕ್ಕೆ ಬಂದು ಎಲ್ಲೂ ಹೋಗಲಾರದೆ ಸಿಲುಕಿದ್ದ ಹಲವು ಹಿರಿಜೀವಗಳಿಗೆ ವಸತಿ ರಹಿತರ ಆಶ್ರಯ ಕೇಂದ್ರವು ಸದ್ದಿಲ್ಲದೆ ನೆರವಿಗೆ ಬಂದಿತ್ತು. ಹೌದು.. ಲಾಕ್ಡೌನ್ ಸಂದರ್ಭದಲ್ಲಿ ಹೊರ ಜಿಲ್ಲೆಯಿಂದ ತುಮಕೂರಿಗೆ ಬಂದು ಅನಾಥ ಸ್ಥಿತಿಯಲ್ಲಿದ್ದರು. ಇವರಲ್ಲಿ ಅಡುಗೆ ಭಟ್ಟರು, ಬಾರ್ಗಳಲ್ಲಿ ಕೆಲಸ ಮಾಡುವವರು, ಗಾರೆ ಕೆಲಸದವರು, ರೈತಾಪಿ ವರ್ಗದವರಿದ್ದಾರೆ. ತುಮಕೂರು ನಗರದಿಂದ ತಮ್ಮೂರುಗಳಿಗೆ ಹೋಗಲು ಸಾರಿಗೆ […]
ತುಮಕೂರು: ಲಾಕ್ಡೌನ್ ವೇಳೆ ಅನೇಕ ಮಂದಿ ಅಕ್ಷರಶಃ ಕಂಗಾಲಾಗಿ ಹೋಗಿದ್ದರು. ಸಂಘ ಸಂಸ್ಥೆಗಳು ಅಂತಹವರಿಗೆ ಆಹಾರ ನೀಡಿ ಸಂತೈಸಿದ್ದರು. ಅದೇ ರೀತಿ ತುಮಕೂರು ನಗರಕ್ಕೆ ಬಂದು ಎಲ್ಲೂ ಹೋಗಲಾರದೆ ಸಿಲುಕಿದ್ದ ಹಲವು ಹಿರಿಜೀವಗಳಿಗೆ ವಸತಿ ರಹಿತರ ಆಶ್ರಯ ಕೇಂದ್ರವು ಸದ್ದಿಲ್ಲದೆ ನೆರವಿಗೆ ಬಂದಿತ್ತು.
ಹೌದು.. ಲಾಕ್ಡೌನ್ ಸಂದರ್ಭದಲ್ಲಿ ಹೊರ ಜಿಲ್ಲೆಯಿಂದ ತುಮಕೂರಿಗೆ ಬಂದು ಅನಾಥ ಸ್ಥಿತಿಯಲ್ಲಿದ್ದರು. ಇವರಲ್ಲಿ ಅಡುಗೆ ಭಟ್ಟರು, ಬಾರ್ಗಳಲ್ಲಿ ಕೆಲಸ ಮಾಡುವವರು, ಗಾರೆ ಕೆಲಸದವರು, ರೈತಾಪಿ ವರ್ಗದವರಿದ್ದಾರೆ. ತುಮಕೂರು ನಗರದಿಂದ ತಮ್ಮೂರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿದ್ದರು. ಇಂತಹವರು ಗುರುತಿಸಿ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರೋ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು. ಅಲ್ಲದೆ ನಿತ್ಯ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ.
ನಿರಾಶ್ರಿತರಿಗೆ ನಿತ್ಯ ಊಟದ ವ್ಯವಸ್ಥೆ: ದೀನದಯಾಳ್ ಅಂತ್ಯೋದಯ ಯೋಜನೆಯಡಿ ಆರಂಭವಾಗಿರೋ ಈ ಆಶ್ರಯ ಕೇಂದ್ರದಲ್ಲಿ ಲಾಕ್ಡೌನ್ ವೇಳೆ ನಿರಾಶ್ರಿತರಾದವರಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗಿದೆ. ಮಲಗಲು ಮಂಚ ಮತ್ತು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಯಾವ್ದೆ ರೀತಿಯ ಮಾನಸಿಕ ಕ್ಷೋಭೆಗೆ ಒಳಗಾಗದಂತೆ ಗಮನಹರಿಸಲಾಗಿದೆ.
ಲಾಕ್ಡೌನ್ ಮುಗಿದ ನಂತರ ವಯೋವೃದ್ಧರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಓಡಾಡಲು ಅವಕಾಶ ದೊರೆತರೆ ತಮ್ಮ ಊರುಗಳಿಗೆ ಹೋಗಿ ಸೇರುವುದಾಗಿ ಹೇಳುತ್ತಾರೆ ನಿರಾಶ್ರಿತರು. ಒಟ್ಟಾರೆ ಲಾಕ್ಡೌನ್ ವೇಳೆ ನಿರ್ಗತಿಕರಿಗೆ, ಇವರಿಗೆ ಅನಾಥಪ್ರಜ್ಞೆ ಕಾಡದಂತೆ ತುಮಕೂರಿನ ವಸತಿ ರಹಿತರ ಆಶ್ರಯ ಕೇಂದ್ರದ ಸಿಬ್ಬಂದಿ ಹಗಲಿರುಳು ಮಾನವೀಯ ಮೌಲ್ಯಗಳೊಂದಿಗೆ ಕೆಲಸ ಮಾಡಿದ್ದಾರೆ.