ಟಿವಿ9 ಫಲಶೃತಿ: ಮೂವರು ಮಕ್ಕಳನ್ನ ತಾಯಿಯ ಮಡಿಲು ಸೇರಿಸಲು ಮುಂದಾದ ಬಳ್ಳಾರಿ ಜಿಲ್ಲಾಡಳಿತ

ಬಳ್ಳಾರಿ: ಟಿವಿ9 ವರದಿಗೆ ಸ್ಪಂದಿಸಿ ಬಳ್ಳಾರಿ ಜಿಲ್ಲಾಡಳಿತ ಇಂದು ಮೂವರು ಮಕ್ಕಳನ್ನ ತಾಯಿಯ ಮಡಿಲಿಗೆ ಸೇರಿಸಲು ಮುಂದಾಗಿದೆ. ಮೂವರು ಮಕ್ಕಳ ತಂದೆಯ ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ತಾಯಿಯನ್ನು ನೋಡಲು ಮಕ್ಕಳ ಪೋಷಕರು ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಿಂದ ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಬಳಿಕ ಲಾಕ್​ಡೌನ್ ಘೋಷಣೆಯಾಯಿತು. ಇದನ್ನೂ ಓದಿ: ಲಾಕ್​ಡೌನ್ ಎಫೆಕ್ಟ್: ತಂದೆ ಕಳೆದುಕೊಂಡು ಅನಾಥರಾದ್ರು ಮೂವರು ಹೆಣ್ಣು ಮಕ್ಕಳು! ಇದೇ ವೇಳೆ ಮಕ್ಕಳನ್ನು ನೋಡಲಾಗದೆ ಕೊರಗಿನಲ್ಲಿ ತಂದೆ ಪಶ್ಚಿಮ ಬಂಗಾಳದಲ್ಲಿ ಮೃತಪಟ್ರು. ಅಲ್ಲದೆ ‘ಅಂಫಾನ್’ ಹಿನ್ನೆಲೆಯಲ್ಲಿ ರಾಜ್ಯದಿಂದ […]

ಟಿವಿ9 ಫಲಶೃತಿ: ಮೂವರು ಮಕ್ಕಳನ್ನ ತಾಯಿಯ ಮಡಿಲು ಸೇರಿಸಲು ಮುಂದಾದ ಬಳ್ಳಾರಿ ಜಿಲ್ಲಾಡಳಿತ

Updated on: Jun 04, 2020 | 3:39 PM

ಬಳ್ಳಾರಿ: ಟಿವಿ9 ವರದಿಗೆ ಸ್ಪಂದಿಸಿ ಬಳ್ಳಾರಿ ಜಿಲ್ಲಾಡಳಿತ ಇಂದು ಮೂವರು ಮಕ್ಕಳನ್ನ ತಾಯಿಯ ಮಡಿಲಿಗೆ ಸೇರಿಸಲು ಮುಂದಾಗಿದೆ. ಮೂವರು ಮಕ್ಕಳ ತಂದೆಯ ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ತಾಯಿಯನ್ನು ನೋಡಲು ಮಕ್ಕಳ ಪೋಷಕರು ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಿಂದ ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಬಳಿಕ ಲಾಕ್​ಡೌನ್ ಘೋಷಣೆಯಾಯಿತು.

ಇದನ್ನೂ ಓದಿ: ಲಾಕ್​ಡೌನ್ ಎಫೆಕ್ಟ್: ತಂದೆ ಕಳೆದುಕೊಂಡು ಅನಾಥರಾದ್ರು ಮೂವರು ಹೆಣ್ಣು ಮಕ್ಕಳು!

ಇದೇ ವೇಳೆ ಮಕ್ಕಳನ್ನು ನೋಡಲಾಗದೆ ಕೊರಗಿನಲ್ಲಿ ತಂದೆ ಪಶ್ಚಿಮ ಬಂಗಾಳದಲ್ಲಿ ಮೃತಪಟ್ರು. ಅಲ್ಲದೆ ‘ಅಂಫಾನ್’ ಹಿನ್ನೆಲೆಯಲ್ಲಿ ರಾಜ್ಯದಿಂದ ಪಶ್ಚಿಮ ಬಂಗಾಳಕ್ಕೆ ಹೋಗಲು ಆಗಿರಲಿಲ್ಲ. ತಂದೆ ಅಂತ್ಯಸಂಸ್ಕಾರಕ್ಕೂ ಹೋಗಲಾಗದೆ ಮಕ್ಕಳು ಪರದಾಡಿದ್ದರು. ಈ ಬಗ್ಗೆ ಟಿವಿ9 ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಸದ್ಯ ಟಿವಿ9 ವರದಿಗೆ ಸ್ಪಂದಿಸಿ ಬಳ್ಳಾರಿ ಜಿಲ್ಲಾಡಳಿತ ಸಹಾಯ ಮಾಡಲು ಮುಂದಾಗಿದೆ. ಪಶ್ಚಿಮ ಬಂಗಾಳದಲ್ಲಿರುವ ತಾಯಿಯನ್ನು ಕರೆತರಲು ವ್ಯವಸ್ಥೆ ಮಾಡುತ್ತಿದೆ. ಇಂದು ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ ನಂತರ ಕೂಡ್ಲಿಗಿಗೆ ತೆರಳಲು ವಾಹನ ವ್ಯವಸ್ಥೆ ಮಾಡಿದೆ. ಸಂಜೆ 5 ಗಂಟೆಗೆ ತಾಯಿ ತನ್ನ ಮೂವರು ಮಕ್ಕಳನ್ನ ಸೇರಲಿದ್ದಾರೆ.

Published On - 1:08 pm, Thu, 4 June 20