ಹಚ್ಚಿದ್ದ ಹೂವಿನಕುಂಡ ನೋಡಲು ಹೋದ ಬಾಲಕನಿಗೆ ಗಾಯ, ಆಸ್ಪತ್ರೆಗೆ ದಾಖಲಿಸಲು ಪೋಷಕರ ಪರದಾಟ
ಬೆಂಗಳೂರು: ನಿನ್ನೆ ರಾತ್ರಿ ಪಟಾಕಿ ಹೊಡೆಯುವ ವೇಳೆ 12 ವರ್ಷದ ಬಾಲಕನ ಕಣ್ಣಿಗೇ ಪಟಾಕಿ ಸಿಡಿದು ಕಣ್ಣಿನ ಗುಡ್ಡೆಗೆ ಗಾಯವಾಗಿರುವ ಘಟನೆ ಬೆಂಗಳೂರಿನ ವಿಜಯಾನಂದ ನಗರದಲ್ಲಿ ನಡೆದಿದೆ. ಹಚ್ಚಿದ್ದ ಹೂವಿನಕುಂಡ ನೋಡಲು ಬಾಲಕ ಹೋದಾಗ ಈ ಘಟನೆ ಸಂಭವಿಸಿದೆ. ಅಮಾಯಕ ಬಾಲಕನಿಗೆ ಸಿಡಿದ ಪಟಾಕಿ: ತಡರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡಿದ್ದಾರೆ. ಹಲವು ಕಣ್ಣಿನ ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ. ಕೋವಿಡ್ ನಡುವೆ ಕಣ್ಣಿನ […]

ಬೆಂಗಳೂರು: ನಿನ್ನೆ ರಾತ್ರಿ ಪಟಾಕಿ ಹೊಡೆಯುವ ವೇಳೆ 12 ವರ್ಷದ ಬಾಲಕನ ಕಣ್ಣಿಗೇ ಪಟಾಕಿ ಸಿಡಿದು ಕಣ್ಣಿನ ಗುಡ್ಡೆಗೆ ಗಾಯವಾಗಿರುವ ಘಟನೆ ಬೆಂಗಳೂರಿನ ವಿಜಯಾನಂದ ನಗರದಲ್ಲಿ ನಡೆದಿದೆ. ಹಚ್ಚಿದ್ದ ಹೂವಿನಕುಂಡ ನೋಡಲು ಬಾಲಕ ಹೋದಾಗ ಈ ಘಟನೆ ಸಂಭವಿಸಿದೆ.
ಅಮಾಯಕ ಬಾಲಕನಿಗೆ ಸಿಡಿದ ಪಟಾಕಿ: ತಡರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡಿದ್ದಾರೆ. ಹಲವು ಕಣ್ಣಿನ ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ. ಕೋವಿಡ್ ನಡುವೆ ಕಣ್ಣಿನ ಆಸ್ಪತ್ರೆಗಳು ಬಾಲಕನನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಬಳಿಕ ರಾತ್ರಿ 11.30ರ ವೇಳೆಗೆ ಮಿಂಟೋ ಆಸ್ಪತ್ರೆಗೆ ದಾಖಲಿಸಿದ್ದು ಅದೃಷ್ಟವಶಾತ್ ಬಾಲಕ ಅಪಾಯದಿಂದ ಪಾರಾಗಿದ್ದಾನೆ.
ಇನ್ನು ನಾವು ತಡ ರಾತ್ರಿ ಹಲವು ಆಸ್ಪತ್ರೆಗಳಿಗೆ ಅಲೆದಾಡ್ದಿವಿ ಆದ್ರೆ ಎಲ್ಲೂ ಚಿಕಿತ್ಸೆ ಕೊಡಲಿಲ್ಲ. ಕೊನೆಗೆ ಮಿಂಟೋ ಆಸ್ಪತ್ರೆ ದಾಖಲಿಸಿಕೊಂಡಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಗಳು ಚಿಕಿತ್ಸೆ ಕೊಡದಿದ್ರೆ ಹೇಗೆ ಅಂತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಪಟಾಕಿ ಹೊಡೆಯುವಾಗ ಪೋಷಕರು ಜೊತೆಯಲ್ಲಿದ್ದರೆ ಒಳ್ಳೆಯದು ಎಂದು ಗಾಯಗೊಂಡ ಬಾಲಕನ ಪೋಷಕರು ಮನವಿ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಗಾಯಾಳುಗಳ ಸಂಖ್ಯೆ ಕಡಿಮೆ: ಕೋವಿಡ್ ಹಾಗೂ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಈ ವರ್ಷ ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ ಕಡಿಮೆಯಾಗಿದೆಯಂತೆ. ಬೆಂಗಳೂರಿನಲ್ಲಿ ಕಳೆದ 48 ಗಂಟೆಯಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕೇವಲ ಒಂದು ಕೇಸ್ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯೆ ವಿದ್ಯಾದೇವಿ ಮಾಹಿತಿ ನೀಡಿದ್ದಾರೆ.
ರಸ್ತೆಯಲ್ಲಿ ನಿಂತು ಹೂವಿನಕುಂಡ ಹೊಡೆಯುವುದನ್ನು ನೋಡುತ್ತಿದ್ದ ಬಾಲಕನಿಗೆ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ನೀಡಿದ್ದೇವೆ. ಯಾವುದೇ ಅಪಾಯವಾಗಿಲ್ಲ. ಆತನಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಮುಖ ಮಾತ್ರ ಸುಟ್ಟಿದ್ದು ಕಣ್ಣಿಗೆ ಹಾನಿಯಾಗಿಲ್ಲ ಎಂದು ತಿಳಿಸಿದ್ರು.