‘ಮಾಸ್ಟರ್’ ಸಿನಿಮಾಗೆ ಬಿಗ್ ಗಿಫ್ಟ್ ನೀಡಿದ ಟ್ವಿಟರ್: ಅಭಿಮಾನಿಗಳು ಫುಲ್ ಖುಷ್

ಚಿತ್ರ ಜನವರಿ 13 ರಂದು ತೆರೆಗೆ ಬರಲಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅಭಿಮಾನಿಗಳು ಟ್ವಿಟರ್ ಎಮೋಜಿಯನ್ನು ಬಳಸಲು ಸಾಕಷ್ಟು ಉತ್ಸುಕರಾಗಿದ್ದಾರೆ.

‘ಮಾಸ್ಟರ್’ ಸಿನಿಮಾಗೆ ಬಿಗ್ ಗಿಫ್ಟ್ ನೀಡಿದ ಟ್ವಿಟರ್: ಅಭಿಮಾನಿಗಳು ಫುಲ್ ಖುಷ್
ನಟ ವಿಜಯ್
Edited By:

Updated on: Jan 03, 2021 | 6:01 PM

ನಟ ವಿಜಯ್ ಅಭಿನಯದ ತಮಿಳು ಸಿನಿಮಾ ‘ಮಾಸ್ಟರ್’  ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನವೇ ಮಾಸ್ಟರ್ ಸಿನಿಮಾ ತಂಡಕ್ಕೆ ಮತ್ತು ವಿಜಯ್ ಅಭಿಮಾನಿಗಳಿಗೆ ಟ್ವಿಟರ್ ಕಡೆಯಿಂದ ಒಂದು ಗಿಫ್ಟ್ ಸಿಕ್ಕಿದೆ.

ಮಾಸ್ಟರ್ ಸಿನಿಮಾಕ್ಕಾಗಿ ಟ್ವಿಟರ್ ಒಂದು ಎಮೋಜಿಯನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾರೇ ಟ್ವೀಟ್ ಮಾಡಿ #Masterfilm ಎಂಬ ಹ್ಯಾಷ್​ ಟ್ಯಾಗ್ ಬಳಸಿದರೂ, ಅದರ ಮುಂದೆ ವಿಜಯ್​ರವರ ಪುಟ್ಟ ಚಿತ್ರ ಎಮೋಜಿ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಮಾಸ್ಟರ್ ಸಿನಿಮಾ ಪೋಸ್ಟರ್​ನಲ್ಲಿ ಇರುವ ವಿಜಯ್ ಫೋಟೋವೊಂದನ್ನೇ ಎಮೋಜಿ ರೂಪದಲ್ಲಿ ಟ್ವಿಟರ್ ಬಿಡುಗಡೆ ಮಾಡಿದ್ದು ವಿಶೇಷ.

ಈ ಚಿತ್ರ ಜನವರಿ 13 ರಂದು ತೆರೆಗೆ ಬರಲಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅಭಿಮಾನಿಗಳು ಟ್ವಿಟರ್ ಎಮೋಜಿಯನ್ನು ಬಳಸಲು ಉತ್ಸುಕರಾಗಿದ್ದು, ಹ್ಯಾಷ್​​ಟ್ಯಾಗ್​ಗಳನ್ನು ಪದೇಪದೇ ಬಳಸುತ್ತಿದ್ದಾರೆ. ಎಮೋಜಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಮಾಸ್ಟರ್ ಫಿಲ್ಮ್’, ‘ಮಾಸ್ಟರ್ ಪೊಂಗಲ್’, ‘ವಿಜಯ್ ದಿ ಮಾಸ್ಟರ್’ ಎಂಬ ಹ್ಯಾಷ್​ಟ್ಯಾಗ್​​ಗಳು ಭರ್ಜರಿ ಟ್ರೆಂಡ್ ಆಗಿವೆ. ಈ ಸಿನಿಮಾ ಬಗ್ಗೆ ಸುಮಾರು 2 ಲಕ್ಷ ಟ್ವೀಟ್​ಗಳು ಬಂದಿವೆ.

ಸಾಮಾಜಿಕ ಜಾಲತಾಣವು ಚಲನಚಿತ್ರಕ್ಕಾಗಿ ಎಮೋಜಿಯನ್ನು ಬಿಡುಗಡೆಗೊಳಿಸಿದ್ದು ಇದೇ ಮೊದಲಲ್ಲ. ವಿಜಯ್ ಅಭಿನಯದ ಮರ್ಸೆಲ್ ಸಿನಿಮಾದಿಂದ ತಮಿಳು ಚಿತ್ರರಂಗದಲ್ಲಿ ಎಮೋಜಿ ಪ್ರವೃತ್ತಿ ಪ್ರಾರಂಭವಾಯಿತು. ನಂತರ ಸೂಪರ್ ಸ್ಟಾರ್ ರಜನಿಕಾಂತ್​ರ ಕಾಲಾ 2.0 ಚಿತ್ರ, ವಿಜಯ್​ ಅಭಿಯನದ ಬಿಗಿಲ್ ಮತ್ತು ಸೂರ್ಯ ನಾಯಕರಾಗಿದ್ದ ಎನ್​ಜಿಕೆ ಸಿನಿಮಾಗಳಿಗೂ  ಎಮೋಜಿಗಳು ಬಿಡುಗಡೆಯಾಗಿದ್ದವು.

ಕಾಲೇಜು ಜೀವನವನ್ನೇ ಪ್ರಧಾನವಾಗಿ ಬಿಂಬಿಸುವ ಮಾಸ್ಟರ್ ಸಿನಿಮಾದಲ್ಲಿ ಪ್ರಾಧ್ಯಾಪಕನ ಪಾತ್ರದಲ್ಲಿ ವಿಜಯ್ ನಟಿಸುತ್ತಿದ್ದು, ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ. ವಿಜಯ್ ಸೇತುಪತಿ, ಮಾಳವಿಕಾ ಮೋಹನನ್, ಶಾಂತನು ಭಾಗ್ಯರಾಜ್ ಮತ್ತು ಆಂಡ್ರಿಯಾ ಜೆರೆಮಿಯ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

ನಟ ವಿಜಯ್ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಅಟ್ಲೀ ನಿರ್ದೇಶನದ ‘ಬಿಗಿಲ್’ ಚಿತ್ರದಲ್ಲಿ. ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿದ್ದರು. ತಂದೆ ಮತ್ತು ಮಗನ ಪಾತ್ರದಲ್ಲಿ ಕಾಣಿಸಿಕೊಂಡ ಎರಡೂ ಪಾತ್ರಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದವು. ಜಾಕಿ ಶ್ರಾಫ್ ಮತ್ತು ನಯನತಾರಾ ನಟಿಸಿದ್ದ ಬಿಗಿಲ್ ₹ 300 ಕೋಟಿ ಗಳಿಸುವ ಮೂಲಕ 2019ರ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರವೆಂಬ ಹೆಗ್ಗಳಿಕೆ ಪಡೆದುಕೊಂಡಿತು.

ದಾದಾ ಸಾಹೇಬ್​ ಫಾಲ್ಕೆ ಸೌತ್​ 2020 ಪ್ರಶಸ್ತಿ: ರಕ್ಷಿತ್​-ರಶ್ಮಿಕಾಗೆ ಅವಾರ್ಡ್​