UGC NET 2021: ಯುಜಿಸಿ ನೆಟ್ ಪರೀಕ್ಷೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ; ಅರ್ಜಿ ತುಂಬುವುದು ಹೇಗೆ?

UGC NET 2021: ಮೇ ತಿಂಗಳ 2, 3, 4, 5, 6, 7, 10, 11, 12, 14 ಮತ್ತು 17ರಂದು ಪರೀಕ್ಷೆ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳ , ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

UGC NET 2021: ಯುಜಿಸಿ ನೆಟ್ ಪರೀಕ್ಷೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ; ಅರ್ಜಿ ತುಂಬುವುದು ಹೇಗೆ?
UGC NET EXAM
Follow us
TV9 Web
| Updated By: ganapathi bhat

Updated on:Apr 06, 2022 | 7:32 PM

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (National Testing Agency-NTA) ಯುಜಿಸಿ ನೆಟ್ 2021 (UGC NET 2021) ಪರೀಕ್ಷೆ ದಿನಾಂಕವನ್ನು ಘೋಷಿಸಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯಲು ನೆಟ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಇಂದು (ಮಾರ್ಚ್ 2) ಕೊನೆಯ ದಿನಾಂಕವಾಗಿದೆ.

UGC NET 2021 ಪರೀಕ್ಷಾ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ ಯುಜಿಸಿ ಪರೀಕ್ಷೆ ಎದುರಿಸಲು ಬಯಸುವವರು, ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಲು ಇಚ್ಛಿಸುವವರು ಮತ್ತು ರಿಸರ್ಚ್ ಫೆಲೋಶಿಪ್ ಪಡೆಯಲು ಆಸಕ್ತಿ ಹೊಂದಿರುವವರು UGC NET 2021 ಪರೀಕ್ಷೆ ಬರೆಯಬೇಕಾಗಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ugcnet.nta.nic.in ವೆಬ್​ಸೈಟ್​ನಲ್ಲಿ ಪರೀಕ್ಷೆಗೆ ಅಪ್ಲೈ ಮಾಡಬಹುದು. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.

ನೆಟ್ ಪರೀಕ್ಷೆಯನ್ನು ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (UGC) ನಡೆಸಿಕೊಡುತ್ತದೆ. ದೇಶದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನಿರ್ವಹಿಸಲು ಈ ಪರೀಕ್ಷಾ ಅರ್ಹತೆ ಇದ್ದರೆ ಒಳ್ಳೆಯದು. UGC NET ಪರೀಕ್ಷೆಯು ಕಂಪ್ಯೂಟರ್ ಬೇಸ್ಡ್ ವಿಧಾನದಲ್ಲಿ ನಡೆಯುತ್ತದೆ. ಪರೀಕ್ಷೆಯಲ್ಲಿ ಎರಡು ಪೇಪರ್​ಗಳು ಇರುತ್ತವೆ.

ಪರೀಕ್ಷಾ ದಿನಾಂಕಗಳು ಹೀಗಿವೆ ಮೇ ತಿಂಗಳ 2, 3, 4, 5, 6, 7, 10, 11, 12, 14 ಮತ್ತು 17ರಂದು ಪರೀಕ್ಷೆ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳ, ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

UGC NET 2021 ರಿಜಿಸ್ಟರ್ ಮಾಡಿಕೊಳ್ಳುವ ವಿಧಾನಗಳು:

  • cmat.nta.nic.in ಅಥವಾ ugcnet.nta.nic.in ವೆಬ್​ಸೈಟ್​ಗೆ ಭೇಟಿ ಮಾಡಿ
  • ಅಲ್ಲಿ ‘Application Form December 2020 Cycle (May 2021)’ ಆಯ್ಕೆ ಮಾಡಿಕೊಳ್ಳಿ
  • ‘New Registration’ ಕ್ಲಿಕ್ ಮಾಡಿ. ಬಳಿಕ ಪರೀಕ್ಷೆಗೆ ಅಪ್ಲೈ ಮಾಡುವ ಮುಂದಿನ ಹಂತಗಳನ್ನು ಓದಿ, ಅರ್ಥ ಮಾಡಿಕೊಳ್ಳಿ
  • ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ನೀಡಿ. ದ್ವಿತೀಯ ಪಿಯು ಅಂಕಪಟ್ಟಿಯಂತೆ ಸರಿಯಾದ ಹೆಸರು, ತಂದೆ ಮತ್ತು ತಾಯಿ ಹೆಸರು ನಮೂದಿಸಿ. ಪಾಸ್​ವರ್ಡ್ ಹಾಕಿರಿ. ಆ ಮೂಲಕ, ಅಪ್ಲಿಕೇಷನ್ ನಂಬರ್ ಪಡೆದುಕೊಳ್ಳಿ. ಈಗ ನೀವು ವೆಬ್​ಸೈಟ್​ಗೆ ರಿಜಿಸ್ಟರ್ ಆಗಿದ್ದೀರಿ
  • ಅಪ್ಲಿಕೇಷನ್ ನಂಬರ್, ಪಾಸ್​ವರ್ಡ್ ಬಳಸಿ ಲಾಗ್​ಇನ್ ಆಗಿ. ನಂತರ ಅಪ್ಲಿಕೇಷನ್ ಫಾರ್ಮ್ ತುಂಬಿರಿ
  • ನಿಮ್ಮ ಫೊಟೊಗ್ರಾಫ್ ಮತ್ತು ಸಹಿಯ ಫೊಟೊ ಅಪ್​ಲೋಡ್ ಮಾಡಿ
  • ಅಪ್ಲಿಕೇಷನ್ ಮೊತ್ತವನ್ನು ಆನ್​ಲೈನ್ ಪೇಮೆಂಟ್ ವಿಧಾನದಲ್ಲಿ ತುಂಬಿ ಫಾರ್ಮ್​ನ್ನು ಡೌನ್​ಲೋಡ್ ಮಾಡಿ ನಿಮ್ಮ ರೆಫರೆನ್ಸ್​ಗಾಗಿ ಇಟ್ಟುಕೊಳ್ಳಿ

UGC NET 2021 ಅರ್ಜಿ ತುಂಬಲು ಬೇಕಾದ ಮುಖ್ಯ ದಾಖಲೆಗಳು: UGC NET 2021 ಅರ್ಜಿ ತುಂಬಲು ವೋಟರ್ ಐಡಿ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ರೀತಿಯ ಯಾವುದೇ ಮುಖ್ಯ ದಾಖಲೆ ಬೇಕು. ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಭಾವಚಿತ್ರ ಮತ್ತು ಸಹಿ JPG, JPEG ಫಾರ್ಮ್ಯಾಟ್​ನಲ್ಲಿ ಇರಲಿ. ಭಾವಚಿತ್ರದ ಸೈಜ್ 100 KBಗಿಂತ ಕಡಿಮೆ ಹಾಗೂ ಸಹಿಯ ಚಿತ್ರದ ಸೈಜ್ 30 KBಗಿಂತ ಕಡಿಮೆ ಇರಬೇಕು.

ಇದನ್ನೂ ಓದಿ: UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

KCET Exam 2021 Time Table: ಕರ್ನಾಟಕ ಸಿಇಟಿ 2021 ಪರೀಕ್ಷಾ ವೇಳಾಪಟ್ಟಿ ಪ್ರಕಟ

Published On - 1:30 pm, Tue, 2 March 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ