UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ
UPSC Recruitment 2021: ಕೇಂದ್ರ ಲೋಕಸೇವಾ ಆಯೋಗದ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಮಾರ್ಚ್ 18ರ ಮೊದಲು ಅರ್ಜಿ ತುಂಬಬಹುದಾಗಿದೆ. ಅಪ್ಲಿಕೇಶನ್ ಫಾರ್ಮ್ಗಳು UPSCಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ.
ದೆಹಲಿ: ಕೇಂದ್ರ ಲೋಕಸೇವಾ ಆಯೋಗವು (Union Public Service Commission – UPSC) ಕೇಂದ್ರೀಯ ತನಿಖಾ ದಳದ (Central Bureau of Investigation – CBI) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದೆಹಲಿ ಸರ್ಕಾರದ ವಿಧಿವಿಜ್ಞಾನ ಪ್ರಯೋಗಾಲಯ, ಕೃಷಿ ಸಚಿವಾಲಯ ಹಾಗೂ ಇತರ ವಿಭಾಗಗಳಿಗೆ ಮತ್ತು ಸಚಿವಾಲಯಗಳಿಗೂ ಈ ಬಾರಿ ಉದ್ಯೋಗಾವಕಾಶ ಲಭ್ಯವಿದೆ. ಕೆಲಸಕ್ಕೆ ಸೇರಲು ಬೇಕಾದ ಅಪ್ಲಿಕೇಶನ್ ಫಾರ್ಮ್ಗಳು UPSCಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಕೇಂದ್ರ ಲೋಕಸೇವಾ ಆಯೋಗದ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಮಾರ್ಚ್ 18ರ ಮೊದಲು ಅರ್ಜಿ ತುಂಬಬಹುದಾಗಿದೆ.
ಯಾವೆಲ್ಲಾ ಹುದ್ದೆಗಳಿಗೆ ಅವಕಾಶವಿದೆ ಎಂಬ ವಿವರ ಇಲ್ಲಿದೆ:
- ಆರ್ಥಿಕ ಅಧಿಕಾರಿ: ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಕೃಷಿ ಇಲಾಖೆ, ಸಹಕಾರ ಮತ್ತು ರೈತ ಕಲ್ಯಾಣ, ಕೃಷಿ ಮತ್ತು ರೈತ ಸಚಿವಾಲಯಗಳಲ್ಲಿ ಆರ್ಥಿಕ ಅಧಿಕಾರಿ ಹುದ್ದೆಗೆ ಅವಕಾಶವಿದೆ. ಒಬ್ಬ ಅಭ್ಯರ್ಥಿ ಬೇಕಾಗಿದ್ದಾರೆ.
- ಕಾರ್ಮಿಕರ ರಾಜ್ಯ ವಿಮಾ ಸಂಘ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಲ್ಲಿ 10 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (Civil) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಕೇಂದ್ರ ಜಲ ಮಂಡಳಿ, ಜಲ ಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಮಂಡಳಿ, ಜಲಶಕ್ತಿ ಸಚಿವಾಲಯದಲ್ಲಿ ಒಂದು ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
- ಕೇಂದ್ರೀಯ ತನಿಖಾ ದಳ, ಸಿಬ್ಬಂದಿ ಮತ್ತು ತರಬೇತಿ ವಿಭಾಗ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಸಮಸ್ಯೆಗಳು ಮತ್ತು ಮಾಸಾಶನ ವಿಭಾಗದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ 43 ಅಭ್ಯರ್ಥಿಗಳು ಬೇಕಾಗಿದ್ದಾರೆ.
- ಕೇಂದ್ರೀಯ ತನಿಖಾ ದಳ, ಸಿಬ್ಬಂದಿ ಮತ್ತು ತರಬೇತಿ ವಿಭಾಗ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಸಮಸ್ಯೆಗಳು ಮತ್ತು ಮಾಸಾಶನ ವಿಭಾಗದಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ 26 ಅಭ್ಯರ್ಥಿಗಳು ಬೇಕಾಗಿದ್ದಾರೆ
- ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ 1 ಹಿರಿಯ ವಿಜ್ಞಾನ ಅಧಿಕಾರಿ (Ballistics) ಹುದ್ದೆ ಅವಕಾಶವಿದೆ.
- ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ ತಲಾ 2 ಹಿರಿಯ ವಿಜ್ಞಾನ ಅಧಿಕಾರಿ (Biology, Chemistry, Documents) ಹುದ್ದೆಗಳಿಗೆ ಅವಕಾಶವಿದೆ. Biology, Chemistry, Documents ವಿಭಾಗದಲ್ಲಿ ತಲಾ 2 ಹಿರಿಯ ವಿಜ್ಞಾನ ಅಧಿಕಾರಿ ಹುದ್ದೆಗಳಿಗೆ ಅವಕಾಶವಿದೆ.
- ವಿಧಿ ವಿಜ್ಞಾನ ಪ್ರಯೋಗಾಲಯ, ಗೃಹ ಇಲಾಖೆ, ದೆಹಲಿ ಸರ್ಕಾರದ NCTಗೆ 1 ಹಿರಿಯ ವಿಜ್ಞಾನ ಅಧಿಕಾರಿ (Lie-Detection) ಹುದ್ದೆ ಅವಕಾಶವಿದೆ.
ಆನ್ಲೈನ್ ವಿಧಾನದ ಮೂಲಕ ಅರ್ಜಿ ತುಂಬಲು ಇಲ್ಲಿ ಕ್ಲಿಕ್ ಮಾಡಿ. Apply Online ಕೆಲಸದ ಅರ್ಹತಾ ವಿವರಗಳನ್ನು ಈ ಕೊಂಡಿಯ ಮೂಲಕ ನೋಡಬಹುದು. Job Eligibility Criteria
ಇದನ್ನೂ ಓದಿ: UPSC ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ: ಟಿವಿ9ಗೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಮಾಹಿತಿ
Published On - 6:30 pm, Mon, 1 March 21