ವನ್ಯಮೃಗಗಳಿಗೆ ರೋಗ ಹರಡದಂತೆ ಕ್ರಮ: ಕಾಡಂಚಿನ ಗ್ರಾಮಗಳ ನಾಯಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ

ನಾಯಿಗಳು ಗ್ರಾಮಗಳಿಂದ ಬಂದು ಕಾಡುಗಳಲ್ಲಿ ತಿರುಗಾಡುವುದರಿಂದ ಅವುಗಳಲ್ಲಿ ಇರುವ ಕಾಯಿಲೆ ವನ್ಯ ಮೃಗಗಳಿಗೂ ಹರಡುವ ಸಾಧ್ಯತೆ ಹೆಚ್ಚು. ಇದನ್ನು ತಡೆಗಟ್ಟವ ನಿಟ್ಟಿನಲ್ಲಿ ಧಾರವಾಡದ ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಇಲಾಖೆಯು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗ್ರಾಮದ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ವನ್ಯಮೃಗಗಳಿಗೆ ರೋಗ ಹರಡದಂತೆ ಕ್ರಮ: ಕಾಡಂಚಿನ ಗ್ರಾಮಗಳ ನಾಯಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಗ್ರಾಮದ ನಾಯಿಗಳಿಗೆ ಲಸಿಕೆ ಹಾಕುತ್ತಿರುವ ದೃಶ್ಯ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 17, 2020 | 1:43 PM

ಧಾರವಾಡ: ದಿನದಿಂದ ದಿನಕ್ಕೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದು ಎಷ್ಟು ನಿಜವೋ ಇದರಿಂದಾಗಿ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಅಷ್ಟೇ  ಒಂದು ಕಡೆ ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶದಿಂದ ವನ್ಯಮೃಗಗಳಿಗೆ ಬದುಕುವುದು ಕಷ್ಟವಾದರೆ, ಮತ್ತೊಂದು ಕಡೆ ಕಾಡು ಪ್ರಾಣಿಗಳ ಬೇಟೆಯಿಂದ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಈ ಎರಡೂ ಕಾರಣಗಳ ಹೊರತಾಗಿಯೂ ಕಾಡಂಚಿನ ಗ್ರಾಮಗಳಲ್ಲಿನ ಪ್ರಾಣಿಗಳಿಂದ ವನ್ಯಮೃಗಗಳಿಗೆ ಅನೇಕ ಕಾಯಿಲೆಗಳು ಹರಡುತ್ತವೆ. ಅದರಲ್ಲೂ ನಾಯಿಗಳು ಗ್ರಾಮಗಳಿಂದ ಬಂದು ಕಾಡುಗಳಲ್ಲಿ ತಿರುಗಾಡುವುದರಿಂದ ಅವುಗಳಲ್ಲಿ ಇರುವ ಕಾಯಿಲೆ ವನ್ಯಮೃಗಗಳಿಗೂ ಬರುವ ಸಾಧ್ಯತೆ ಹೆಚ್ಚು. ಇದನ್ನು ತಡೆಗಟ್ಟವ ನಿಟ್ಟಿನಲ್ಲಿ ಧಾರವಾಡದ ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಇಲಾಖೆಯು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗ್ರಾಮದ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಎನ್ನುವ ಸಂಸ್ಥೆ ಚಾಲನೆ ನೀಡಿದೆ.

ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಚಿತ್ರಣ

ಕಾಡಂಚಿನ ಗ್ರಾಮಗಳ ನಾಯಿಗಳಿಗೆ ಲಸಿಕೆ: ಧಾರವಾಡ ತಾಲೂಕಿನ ದಿಂಬವಳ್ಳಿ ಸೇರಿದಂತೆ ಅನೇಕ ಗ್ರಾಮಗಳು ಕಾಡಂಚಿನಲ್ಲಿವೆ. ನಿತ್ಯವೂ ಇಲ್ಲಿನ ಜನರು ತಮ್ಮ ಉಪಜೀವನಕ್ಕೆ ಕಾಡನ್ನೇ ಅವಲಂಬಿಸಿದ್ದಾರೆ. ಅವರು ಕಾಡಿಗೆ ಹೋಗುವಾಗ ಅವರೊಂದಿಗೆ ನಾಯಿಗಳು ಕೂಡ ಹೋಗುತ್ತವೆ. ಅಲ್ಲದೇ ನಾಯಿಗಳು ಕೂಡ ಆಗಾಗ ಆಹಾರವನ್ನು ಅರಸಿ ಕಾಡಿನಲ್ಲಿ ಓಡಾಡುತ್ತವೆ. ಇಂತಹ ಸಂದರ್ಭದಲ್ಲಿ ವನ್ಯಮೃಗಗಳಿಗೆ ನಾಯಿಗಳಿಂದ ಕಾಯಿಲೆ ಹರಡುವ ಸಾಧ್ಯತೆ ಸಾಕಷ್ಟಿರುತ್ತದೆ.

ಅದರಲ್ಲೂ ಅನೇಕ ವನ್ಯಮೃಗಗಳು ನಾಯಿಗಳನ್ನೇ ಬೇಟೆಯಾಡಿ ತಿನ್ನುತ್ತವೆ. ಹೀಗಾಗಿ ನಾಯಿಗಳಿಗೆ ಅಂಟಿರುವ ಕಾಯಿಲೆ ನೇರವಾಗಿ ವನ್ಯಮೃಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮ ವನ್ಯಮೃಗಗಳು ಅನೇಕ ರೋಗಗಳಿಂದ ದೂರವಾಗುವಂತೆ ಮಾಡುತ್ತದೆ

ರೇಬಿಸ್, ದವಡೆ ಡಿಸ್ಟೆಂಪರ್ ಸೋಂಕು ತಡೆಯಲು ಲಸಿಕೆ: ಕಾಡಂಚಿನ ಗ್ರಾಮಗಳಲ್ಲಿನ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸುವುದು ಬಹು ಮುಖ್ಯವಾಗಿದೆ. ನಾಯಿಗಳಿಂದ ಕಾಡುಕೋಣಗಳಿಗೂ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ನಾಯಿಗಳಿಗೆ ಲಸಿಕೆ ನೀಡುವ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದ್ದು, ಕಾಡಂಚಿನ ಗ್ರಾಮಗಳ ನಾಯಿಗಳು ಮತ್ತು ಈ ಪ್ರದೇಶದ ಇತರ ಕಾಡು ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಚುಚ್ಚುಮದ್ದು ನಿರ್ಣಾಯಕವಾಗಿದೆ.

ರೇಬೀಸ್‌ನಂತಹ ಸಾಮಾನ್ಯ ಕಾಯಿಲೆಗಳ ವಿರುದ್ಧ ಆಗಿಂದಾಗ್ಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದ್ದು, ಇದರೊಂದಿಗೆ ಸಾಮಾನ್ಯವಾಗಿ ಕಂಡುಬರುವ ಇತರ ಕಾಯಿಲೆಗಳಾದ ದವಡೆ ಡಿಸ್ಟೆಂಪರ್, ಪಾರ್ವೊವೈರಲ್ ಎಂಟರೈಟಿಸ್ ಮತ್ತು ಲೆಪ್ಟೊಸ್ಪಿರೋಸಿಸ್ ರೋಗಗಳಿಗೂ ಲಸಿಕೆ ನೀಡಲಾಗುತ್ತಿದೆ.

ನಾಯಿಗೆ ಲಸಿಕೆ ಹಾಕುವ ಮುನ್ನ ನೊಂದಣಿ ಮಾಡುತ್ತಿರುವ ದೃಶ್ಯ

ಕಾಡುಗಳಲ್ಲಿ ಹುಲಿಗಳಿಗಿಂತ ನಾಯಿಗಳೇ ಹೆಚ್ಚು..! ಕ್ಯಾಮೆರಾ ಟ್ರ್ಯಾಪಿಂಗ್ ಡೇಟಾವನ್ನು ಆಧರಿಸಿದ ಇತ್ತೀಚಿನ ಅಧ್ಯಯನವು ದೇಶಾದ್ಯಂತ 17 ಹುಲಿ ಇರುವ ಪ್ರಮುಖ ಪ್ರದೇಶಗಳಲ್ಲಿ ಹುಲಿಗಳಿಗಿಂತ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ತಿಳಿಸಿದೆ. ಕಾಡುಗಳಲ್ಲಿ ನಾಯಿಗಳ ಉಪಸ್ಥಿತಿಯು ಆಹಾರಕ್ಕಾಗಿ ಕಾಡು ಪ್ರಾಣಿ ಮತ್ತು ಸಾಕು ನಾಯಿಗಳ ನಡುವೆ ಸ್ಪರ್ಧೆಗೆ ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ 2017 ರಲ್ಲಿ ನಡೆಸಿದ ಅಧ್ಯಯನವು ಸಾಕು ನಾಯಿಗಳು ಕಾಡಿನಲ್ಲಿರುವ 11 ಬಗೆಯ ಕಶೇರುಕಗಳ ಅಳಿವಿಗೂ ಕಾರಣವಾಗುತ್ತಿವೆ.

ಹೀಗಾಗಿ ಲಸಿಕಾ ಕಾರ್ಯಕ್ರಮ ಕಾಡುಪ್ರಾಣಿಗಳ ರಕ್ಷಣೆಯಲ್ಲಿ ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಈ ಬಗ್ಗೆ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಮಾತನಾಡಿದ್ದು, ವನ್ಯಜೀವಿಗಳಿಗೆ ಅನುಕೂಲವಾಗುವಂತಹ ಈ ರೀತಿಯ ಕಾರ್ಯಕ್ರಮಕ್ಕೆ ಮೀಸಲು ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳನ್ನು ಆಯ್ಕೆಮಾಡುವುದರಲ್ಲಿ ಫಲ ನೀಡಿದೆ. ಈ ಗ್ರಾಮಗಳು ವನ್ಯಜೀವಿಗಳಿಗೆ ರೋಗ ಹರಡಲು ಹೆಬ್ಬಾಗಿಲುಗಳಾಗಿವೆ. ಆರೋಗ್ಯಕರ ಮಾನವಪ್ರಾಣಿ ಸಮತೋಲನವನ್ನು ಕಾಪಾಡಿಕೊಳ್ಳಲು ಲಸಿಕೆ ಅಭಿಯಾನ ತುಂಬಾ ಪರಿಣಾಮಕಾರಿಯಾಗಿದ್ದು, ರೋಗಗಳ ಹರಡುವಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಇಲಾಖೆಯ ವಿಸ್ತರಣಾ ಚಟುವಟಿಕೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಕಾಡು ಪ್ರಾಣಿಗಳಿಗೆ ಹರಡುವಂಥ ಕಾಯಿಲೆಗಳ ಬಗ್ಗೆ ಕಾಡಂಚಿನ ರೈತರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುವುದು ಅತಿ ಅವಶ್ಯಕವಾಗಿತ್ತು. ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಧಾರವಾಡದ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರ ನಾಯಕ್ ಹೇಳಿದ್ದಾರೆ.

ನರಸಿಂಹಮೂರ್ತಿ ಪ್ಯಾಟಿ

ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ -ಉಲ್ಲಾಸ ಕಾರಂತ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್