SimhaPriya Marriage: ಹಸೆಮಣೆ ಏರಿದ ಹರಿಪ್ರಿಯಾ-ವಸಿಷ್ಠ ಸಿಂಹ; ಕ್ಯೂಟ್​ ಜೋಡಿಯ ಬಾಳಲ್ಲಿ ಹೊಸ ಅಧ್ಯಾಯ ಶುರು

Haripriya Vasishta Simha Wedding: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನಲ್ಲಿ ಇಂದು (ಜ.26) ನಡೆದಿದೆ. ಆಪ್ತರು ಮತ್ತು ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ.

SimhaPriya Marriage: ಹಸೆಮಣೆ ಏರಿದ ಹರಿಪ್ರಿಯಾ-ವಸಿಷ್ಠ ಸಿಂಹ; ಕ್ಯೂಟ್​ ಜೋಡಿಯ ಬಾಳಲ್ಲಿ ಹೊಸ ಅಧ್ಯಾಯ ಶುರು
ಹರಿಪ್ರಿಯಾ-ವಸಿಷ್ಠ ಸಿಂಹ ವಿವಾಹ
Follow us
ಮದನ್​ ಕುಮಾರ್​
|

Updated on: Jan 26, 2023 | 2:38 PM

ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಅವರು ಹಸೆಮಣೆ ಏರಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಇಲ್ಲಿ ವಿವಾಹ ನೆರವೇರಬೇಕು ಎಂಬುದು ವಸಿಷ್ಠ ಸಿಂಹ ಅವರ ಆಸೆ ಆಗಿತ್ತು. ಅದರಂತೆ ಈ ಮದುವೆ ನಡೆದಿದೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹಲವು ತಿಂಗಳಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಸಿಕ್ಕಿತು. ಗುರು-ಹಿರಿಯರ ಆಶೀರ್ವಾದದೊಂದಿಗೆ ಇಂದು (ಜ.26) ಸಿಂಹಪ್ರಿಯಾ ಕಲ್ಯಾಣ (SimhaPriya Marriage) ನೆರವೇರಿದೆ. ಅಭಿಮಾನಿಗಳು, ಆಪ್ತರು ಹಾಗೂ ಅನೇಕ ಸೆಲೆಬ್ರಿಟಿಗಳು ನವ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಡಾಲಿ ಧನಂಜಯ್​, ಶಿವರಾಜ್​ಕುಮಾರ್, ​ಅಮೃತಾ ಅಯ್ಯಂಗಾರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಶುಭ ಕಾರ್ಯಕ್ಕೆ ಸಾಕ್ಷಿ ಆಗಿದ್ದಾರೆ.

ಬುಧವಾರ (ಜ.25) ಅರಿಶಿಣ ಶಾಸ್ತ್ರ ನೆರವೇರಿತ್ತು. ಅದರ ಫೋಟೋಗಳನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಹಂಚಿಕೊಂಡಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್​ ಮೂಲಕ ಶುಭ ಹಾರೈಸಿದ್ದಾರೆ. ಚಿತ್ರರಂಗದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಬ್ಯುಸಿ ಆಗಿದ್ದಾರೆ. ಇಬ್ಬರಿಗೂ ಸಖತ್​ ಬೇಡಿಕೆ ಇದೆ. ಅವರನ್ನು ಜೊತೆಯಾಗಿ ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಬಯಸಿದ್ದಾರೆ.

ಇದನ್ನೂ ಓದಿ: SimhaPriya Marriage: ಮೈಸೂರಲ್ಲಿ ವಸಿಷ್ಠ ಸಿಂಹ ಹರಿಪ್ರಿಯಾ ಅದ್ದೂರಿ ವಿವಾಹ; ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಹಾಜರಿ

ಇದನ್ನೂ ಓದಿ
Image
Vasishta Simha: ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆಗೆ ಯಾರೆಲ್ಲ ಬರಬಹುದು? ಇಲ್ಲಿದೆ ಉತ್ತರ
Image
‘ದೇವ್ರಾಣೆ ನಾಯಿ ಕೊಟ್ಟು ಪಟಾಯಿಸಿಲ್ಲ’; ಹರಿಪ್ರಿಯಾ ಜತೆಗಿನ ಲವ್​ ಸ್ಟೋರಿ ಬಿಚ್ಚಿಟ್ಟ ವಸಿಷ್ಠ ಸಿಂಹ
Image
Haripriya Vasishta Simha: ಸರಳವಾಗಿ ಅಲ್ಲ ಅದ್ಧೂರಿಯಾಗಿ ಸಂಪ್ರದಾಯ ಬದ್ಧವಾಗಿ ಮದ್ವೆ: ಇನ್ವಿಟೇಶನ್​ ತೋರಿಸಿದ ಹರಿಪ್ರಿಯಾ ವಶಿಷ್ಠ ಸಿಂಹ ಜೋಡಿ
Image
Haripriya Marriage Date: ಜನವರಿ 26ಕ್ಕೆ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ; ಮೈಸೂರಿನಲ್ಲಿ ನಡೆಯಲಿದೆ ಶುಭ ಕಾರ್ಯ

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಗೆ ಬಂದು ಡಾಲಿ ಧನಂಜಯ್​ ಶುಭ ಹಾರೈಸಿದ್ದಾರೆ. ‘ಈಗ ತಾನೇ ಗೆಳೆಯ ತಾಳಿ ಕಟ್ಟಿದ. ಅವನಿಗೆ ವಿಶ್​ ಮಾಡಿ ತುಂಬ ಖುಷಿ ಆಯಿತು. ಅವರ ಲವ್​ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಶೂಟಿಂಗ್​ ನಡುವೆ ಆ ವಿಚಾರದ ಬಗ್ಗೆ ತಲೆ ಓಡುತ್ತಿರಲಿಲ್ಲ’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

ಇದನ್ನೂ ಓದಿ: Haripriya: ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿ ಹುಟ್ಟಲು ಕಾರಣ ಆಗಿದ್ದೇ ಈ ನಾಯಿಮರಿ

‘ಹರಿಪ್ರಿಯಾ ತುಂಬ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಸಂಸಾರ ತುಂಬ ಸುಖಕರವಾಗಿ ಇರಲಿ ಅಂತ ವಿಶ್​ ಮಾಡುತ್ತೇನೆ. ನನಗೆ ವಸಿಷ್ಠ ತುಂಬ ಹಳೆಯ ಫ್ರೆಂಡ್​. ಚಿತ್ರರಂಗದಲ್ಲಿನ ಈ ಜೋಡಿಗಳು ಈ ರೀತಿ ಮದುವೆ ಆದರೆ ತುಂಬ ಖುಷಿ ಆಗುತ್ತದೆ’ ಎಂದು ಅಮೃತಾ ಅಯ್ಯಂಗಾರ್​ ಹೇಳಿದ್ದಾರೆ.

‘ಇಬ್ಬರೂ ಕಷ್ಟಪಟ್ಟಿದ್ದೇವೆ. ಗೆಳೆತನದಿಂದ ಪರಸ್ಪರ ಇಬ್ಬರ ಕಷ್ಟಗಳು ಗೊತ್ತಾದವು. ಪರಸ್ಪರ ನಾವು ಹೆಗಲುಕೊಟ್ಟೆವು. ನಾನು ಚಿಕ್ಕವಯಸ್ಸಿನಲ್ಲಿ ತಾಯಿನ ಕಳೆದುಕೊಂಡೆ. ಅವರು ತಂದೆಯನ್ನು ಕಳೆದುಕೊಂಡಿದ್ದರು. ನಾನು ನನ್ನ ತಾಯಿಯನ್ನು ಇವರಲ್ಲಿ ಕಂಡೆ’ ಎಂದು ವಸಿಷ್ಠ ಸಿಂಹ ಇತ್ತೀಚೆಗೆ ಹೇಳಿದ್ದರು. ‘ನಾನು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಯಲ್ಲಿರುವ ಅನೇಕ ಗುಣಗಳು ಸಿಂಹನಲ್ಲಿದೆ’ ಎಂದಿದ್ದರು ಹರಿಪ್ರಿಯಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ