AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haripriya Marriage Date: ಜನವರಿ 26ಕ್ಕೆ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ; ಮೈಸೂರಿನಲ್ಲಿ ನಡೆಯಲಿದೆ ಶುಭ ಕಾರ್ಯ

Haripriya Vasishta Simha Wedding: ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಗೆ ತಯಾರಿ ನಡೆಯುತ್ತಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ ನಡೆಯಲಿದೆ.

Haripriya Marriage Date: ಜನವರಿ 26ಕ್ಕೆ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ; ಮೈಸೂರಿನಲ್ಲಿ ನಡೆಯಲಿದೆ ಶುಭ ಕಾರ್ಯ
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಭೇಟಿ
TV9 Web
| Edited By: |

Updated on: Jan 04, 2023 | 10:55 PM

Share

ಸ್ಯಾಂಡಲ್​ವುಡ್​ ಸ್ಟಾರ್​ ಕಪಲ್​ ಆದಂತಹ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ (Haripriya) ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಎಂಗೇಜ್​ಮೆಂಟ್​ ಫೋಟೋಗಳು ವೈರಲ್​ ಆಗಿದ್ದವು. ಈಗ ಮದುವೆ ದಿನಾಂಕ ಕೂಡ ಬಹಿರಂಗ ಆಗಿದೆ. ಜನವರಿ 26ರಂದು ಹರಿಪ್ರಿಯಾ-ವಸಿಷ್ಠ ಸಿಂಹ (Vasishta Simha) ಮದುವೆ ನೆರವೇರಲಿದೆ. ವಿವಾಹದ ಡೇಟ್​ ಕುರಿತು ಸಂಸದ ಪ್ರತಾಪ್​ ಸಿಂಹ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಮದುವೆಗೆ ಸಕಲ ತಯಾರಿ ನಡೆಯುತ್ತಿದೆ. ಇಂದು (ಜ.4) ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಾಪ್​ ಸಿಂಹ (Pratap Simha) ಕೂಡ ಜೊತೆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಬಹುಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರಿಬ್ಬರ ನಡುವೆ ಪ್ರೀತಿ ಚಿಗುರಿತು. ಆದರೆ ಆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಹರಿಪ್ರಿಯಾ ಅವರ ಮೂಗು ಚುಚ್ಚಿಸುವ ವಿಡಿಯೋ ವೈರಲ್​ ಆದ ನಂತರ ಅವರ ಪ್ರೇಮ್​ ಕಹಾನಿ ಕೂಡ ಜಗಜ್ಜಾಹೀರಾಯಿತು. ನಿಶ್ಚಿತಾರ್ಥದ ಬಳಿಕ ಅವರಿಬ್ಬರು ಅಧಿಕೃತವಾಗಿ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದರು. ಬದುಕಿನ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿರುವ ಈ ಜೋಡಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಇದನ್ನೂ ಓದಿ
Image
Hariprriya: ಕಿರುತೆರೆಗೆ ಕಾಲಿಡಲಿದ್ದಾರೆ ನಟಿ ಹರಿಪ್ರಿಯಾ; ಏನಿದು ಸಮಾಚಾರ?
Image
ಉಗ್ರಂ ಹರಿಪ್ರಿಯಾ ಪಾತ್ರಕ್ಕೂ ಸಲಾರ್​ ಶ್ರುತಿ ಹಾಸನ್​ ಪಾತ್ರಕ್ಕೂ ಇದೆ ಅಜಗಜಾಂತರ ವ್ಯತ್ಯಾಸ
Image
Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?
Image
ಕನ್ನಡಿಗರಿಗೆ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಜಾಗವಿಲ್ಲ ಯಾಕೆ? ಹರಿಪ್ರಿಯಾ ಕಿಡಿಕಿಡಿ

ಪ್ರೀತಿ ಚಿಗುರಲು ನಾಯಿಮರಿ ಕಾರಣ:

ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿಯಾಯ್ತು. ಹರಿಪ್ರಿಯಾ ಕೂಡ ಲಕ್ಕಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರು.

ಇದನ್ನೂ ಓದಿ: Vasishta Simha-Haripriya: ನಿಶ್ಚಿತಾರ್ಥದ ಉಂಗುರ ರಿವೀಲ್​ ಮಾಡಿದ ನಟಿ ಹರಿಪ್ರಿಯಾ: ಇಲ್ಲಿವೆ ಪೋಟೋಸ್​

‘ವಸಿಷ್ಠ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಇವನು ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ತ್​ ಮಾರ್ಕ್​ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್​ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದು ಹರಿಪ್ರಿಯಾ ಅವರು ಕೆಲವು ದಿನಗಳ ಹಿಂದೆ ಸ್ಪೆಷಲ್​ ವಿಡಿಯೋದಲ್ಲಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್