ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತಾ ಓಡಾಡಿಸ್ತಾ ಇದ್ದೀರಾ? -ನಟಿಯರ ಬೆನ್ನಿಗೆ ನಿಂತ್ರಾ ವಾಟಾಳ್​?

ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತಾ ಓಡಾಡಿಸ್ತಾ ಇದ್ದೀರಾ? -ನಟಿಯರ ಬೆನ್ನಿಗೆ ನಿಂತ್ರಾ ವಾಟಾಳ್​?
ಸಂಜನಾ ಗಲ್ರಾನಿ(ಎಡ); ರಾಗಿಣಿ ದ್ವಿವೇದಿ (ಬಲ)

ಮೈಸೂರು: ಸ್ಯಾಂಡಲ್‌ವುಡ್ ನಟ ನಟಿಯರ ಮೇಲೆ‌ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತಾ ಓಡಾಡಿಸ್ತಾ ಇದ್ದೀರಾ? ಯಾಕೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ? ಗೃಹ ಸಚಿವ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪನವರೇ, ಸತ್ಯ ಒಪ್ಪಿಕೊಳ್ಳಿ. ಈ ಪ್ರಕರಣದಲ್ಲಿ ಮಂತ್ರಿಗಳು, MLAಗಳು ಯಾರು ಇಲ್ವಾ? ಗುಟ್ಕಾ ತಿಂದವರು ಸಹ ಪೊಲೀಸರು ಅಧಿಕಾರಿಗಳು ಯಾರು ಇಲ್ವ? ಎಂದು ಪ್ರಶ್ನಿಸಿದ್ದಾರೆ.

ಸರಿಯಾದ ತನಿಖೆ ಮಾಡದೆ ದಿಕ್ಕು ತಪ್ಪಿಸಿದ್ರೆ ಮುಂದಿನ ಮಂಗಳವಾರ ನಾನೇ CCB ಕಚೇರಿ ಮುಂದೆ ಸತ್ಯಾಗ್ರಹ ಮಾಡ್ತಿನಿ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಈಗಾಗಲೇ ಕೆಲಸ ಮಾಡ್ತಿದ್ದಾರೆ. ಆದರೆ ನಿಮಗೆ ಯಾರ ಒತ್ತಡ ಇದೆ ಹೇಳಿ? ಜೊತೆಗೆ ಎಲ್ಲರ ಹೆಸರು ಬಹಿರಂಗವಾಗಬೇಕು. ಇದು ನನ್ನ ಒತ್ತಾಯ ಅಂತಾ ವಾಟಾಳ್​ ನಾಗರಾಜ್​ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಜಮೀರ್ ಇದ್ದರೂ ಬಂಧಿಸಬೇಕು. MLA ಇರಲಿ ಸಚಿವರೇ ಇರಲಿ, ಎಲ್ಲರನ್ನು ಈ ಪ್ರಕರಣದಲ್ಲಿ ಬಂಧಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು CCB ಗೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ದಾರೆ.

Click on your DTH Provider to Add TV9 Kannada