ಗೈರಾಗಿರುವ ಶಿಕ್ಷಕಿಗೆ ವೇತನ ಪಾವತಿ; ಮುಖ್ಯಶಿಕ್ಷಕನ ವಿರುದ್ಧ ಆರೋಪ
ಶಿಕ್ಷಕಿ ಬಳಿ ಹಣ ಪಡೆದು ವೇತನ ಪಾವತಿ ಮಾಡುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ವಿಜಯ್ ಆಶ್ರಿತ್ ವಿರುದ್ಧ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಯಾದಗಿರಿ: ಎರಡು ವರ್ಷಗಳಿಂದ ಶಾಲೆಗೆ ಬಾರದಿದ್ದರೂ ನೃತ್ಯ ಶಿಕ್ಷಕಿಗೆ ವೇತನ ನೀಡಿರುವ ಆರೋಪ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕನ ವಿರುದ್ಧ ಕೇಳಿಬಂದಿದೆ.
ನೃತ್ಯ ಶಿಕ್ಷಕಿ ಶೈಲಾ ಎಂಬುವವರು 2019ರ ಜನವರಿಯಿಂದ 2020ರ ವರೆಗೆ ಗೈರಾಗಿದ್ದಾರೆ. ಆದರೆ ಶಿಕ್ಷಕಿ ಬಳಿ ಹಣ ಪಡೆದು ವೇತನ ಪಾವತಿ ಮಾಡುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ವಿಜಯ್ ಆಶ್ರಿತ್ ವಿರುದ್ಧ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 2 ವರ್ಷದಿಂದ ಅವ್ಯವಹಾರ ನಡೆಯುತ್ತಿದ್ದರೂ ಇಲಾಖೆ ಮೌನವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.