
ತುಮಕೂರು: ಆಂಧ್ರದ ಕಂಬದೂರು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಂಧ್ರದ ಕಂಬದೂರು ಪಿಎಸ್‌ಐ ಗೌಸ್ಪೀರ್ ಹಾಗೂ ಸಿಬ್ಬಂದಿ ಮೇಲೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಗ್ರಾಮಗಳಾದ ಓಬ್ಬಗಾನಪಲ್ಲಿ, ಮೂರಾಯನಪಲ್ಲಿ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಕೇಳಲು ಬಂದಿದ್ದಾಗ ನಾವು ಕರ್ನಾಟಕದಿಂದ ಮದ್ಯ ತಂದಿದ್ದೇವೆ ಎಂದು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ವಾಹನ ಭಾಗಶಃ ಜಖಂಗೊಂಡಿದೆ. ವೈ.ಎನ್. ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:44 am, Mon, 31 August 20